Headlines

ಬಮೂಲ್​​ ಬೆನ್ನಲ್ಲೇ ಕೋಮುಲ್​​ನಿಂದ ಹಾಲು ಉತ್ಪಾದಕರಿಗೆ ಯುಗಾದಿ ಗಿಫ್ಟ್‌

ಬಮೂಲ್​​ ಬೆನ್ನಲ್ಲೇ ಕೋಮುಲ್​​ನಿಂದ ಹಾಲು ಉತ್ಪಾದಕರಿಗೆ ಯುಗಾದಿ ಗಿಫ್ಟ್‌


ಬಮೂಲ್ ಬೆನ್ನಲ್ಲೇ ಕೋಮುಲ್ ನಿಂದ ಹಾಲು ಉತ್ಪಾದಕರಿಗೆ ಯುಗಾದಿ ಗಿಫ್ಟ್

ಕೋಲಾರ, ಮಾರ್ಚ್ 17: ಇತ್ತೀಚೆಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹ ಧನ ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಯುಗಾದಿ ಉಡುಗೊರೆ ನೀಡಿತ್ತು. ಇದೀಗ ಅದರಂತೆ ಕೋಲಾರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೋಮುಲ್) ಕೂಡ ಹಾಲು ಉತ್ಪಾದಕರಿಗೆ ಲೀಟರ್‌ಗೆ 2 ರೂಪಾಯಿ ಹೆಚ್ಚಿಸುವ ಮೂಲಕ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ನೀಡಲಾಗಿದೆ.

ಲೀಟರ್ ಪ್ರತಿಗೆ 2 ರೂಪಾಯಿ

ಯುಗಾದಿ ಹಬ್ಬಕ್ಕೆ ಕೋಲಾರ ಜಿಲ್ಲಾ ಹಾಲು ಉತ್ಪಾದಕರಿಗೆ ಕೋಮುಲ್ ಕೊಡುಗೆ ನೀಡಿದೆ. ಲೀಟರ್ ಹಾಲಿಗೆ 2 ರೂಪಾಯಿ ಹೆಚ್ಚಿಸಿದೆ. ಈ ಹಿಂದೆ ಹಾಲು ಉತ್ಪಾದಕರಿಗೆ ಲೀಟರ್‌ಗೆ 35.40 ರೂ. ನೀಡುವಂತೆ. ಇದೀಗ ಪ್ರತಿ ಲೀಟರ್‌ಗೆ 37.40 ರೂಪಾಯಿಗೆ ಏರಿಕೆಯಾಗಿದೆ.

ಇದನ್ನೂ ಓದಿ: ಹಾಲು ಉತ್ಪಾದಕರಿಗೆ ಯುಗಾದಿ ಗಿಫ್ಟ್: ಲೀಟರ್ ಹಾಲಿಗೆ ಪ್ರೋತ್ಸಾಹಧನ ಘೋಷಿಸಿದ ಬಮೂಲ್

ಜೊತೆಗೆ ಹಸಿರು ಮೇವು ಬೆಳೆಯುವ ರೈತರಿಗೆ 3 ಸಾವಿರ ರೂ ಪ್ರೋತ್ಸಾಹ ಧನ, ಹಸುಗಳಿಗೆ ವಿಮೆ 70 ಸಾವಿರದಿಂದ 80 ಸಾವಿರ ರೂಪಾಯಿ ಎಂದು ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾಹಿತಿ ನೀಡಿದ್ದಾರೆ.

ಉತ್ಪಾದಿಸುವ 1 ಲೀಟರ್ ಹಾಲಿಗೆ ಕನಿಷ್ಠ 2 ರೂ. ಇತ್ತೀಚೆಗೆ ಒತ್ತಾಯ ಕೇಳಿಬಂದಿತ್ತು. ಪ್ರತಿ ಲೀಟರ್ ಹಾಲು ಕನಿಷ್ಠ 50 ರೂ. ವೆಚ್ಚವಾಗುತ್ತದೆ. ಇತ್ತೀಚೆಗೆ ಹಿಂಡಿ ಮತ್ತು ಬೂಸಾ ದರ ಕೂಡ 50 ಕೆಜಿ ಚೀಲಕ್ಕೆ 100 ರೂ. ಏರಿಕೆ, ರೈತರು ಪರದಾಡು ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಸೇಲ್ ಆಗ್ತಿತ್ತು? ಹೊರ ದೇಶಕ್ಕೆ ಎಷ್ಟು ರಫ್ತು ಆಗ್ತಿತ್ತು?

ಕಳೆದ ವರ್ಷ ಪ್ರಾರಂಭಿಕ ಒಕ್ಕೂಟವು 2 ರೂ. ದರ ಹೆಚ್ಚಿದ್ದರೂ, ಸರ್ಕಾರ 4 ರೂ. ಅದರ ಬಳಿಕ 2 ರೂ. ಮರುಪಡೆಯಲಾಯಿತು. ಬಳಿಕ ರೈತರು ಸೇವಿಸುವ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 2 ರೂ. ಸಂಪೂರ್ಣವಾಗಿ ಮಾಡುವಂತೆ ಒತ್ತಾಯಿಸಲಾಗಿದೆ. ಜೊತೆಗೆ ಪಶು ಆಹಾರಕ್ಕಾಗಿ ಮೆಕ್ಕೆಜೋಳವನ್ನು ನೇರವಾಗಿ ರೈತರಿಂದಲೇ ಖರೀದಿಸಬೇಕು ಎಂದು ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *