
ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಹಾಗೂ ಹಿರಿಯ ಕಥೆಗಾರ ಸಲೀಮ್ ಖಾನ್ (ಸಲೀಂ ಖಾನ್) ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ತಿಂಗಳು ಮಿದುಳಿನಲ್ಲಿ ಉಂಟಾದ ರಕ್ತಸ್ರಾವದಿಂದ ಅವರು ಆಸ್ಪತ್ರೆ ಸೇರಿದ್ದರು. ಇಂದು ಅವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ. ಇದರಿಂದ ಅವರ ಅಭಿಮಾನಿಗಳು ಕೊಂಚ ನಿಟ್ಟುಸಿರುವ ಬಿಡಿಸಿದ್ದಾರೆ.
ಸಲೀಮ್ ಖಾನ್ ಅವರಿಗೆ 90 ವರ್ಷ. ಚಿತ್ರರಂಗದಲ್ಲಿ ಸಲೀಮ್-ಜಾವೇದ್ ಜೋಡಿ ಎಂದೆಂದಿಗೂ ಇದು ಫೇಮ್ ಆಗಿದೆ. ಶೋಲೆ, ದೀವಾರ್, ‘ಡಾನ್’ ಮೊದಲಾದ ಹಿಂದಿ ಚಿತ್ರಗಳಿಗೆ ಹಾಗೂ ಕನ್ನಡದ ಎರಡು ಸಿನಿಮಾಗಳಿಗೆ ಇವರು ಕಥೆ ಬರೆದಿದ್ದರು. ಫೆಬ್ರವರಿ 17 ರಂದು ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಮಾರ್ಚ್ 17 ರಂದು ಅವರು ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗುತ್ತಾ ಇದೆ.
ಮಿದಿಳಿನ ಭಾಗದಲ್ಲಿ ಉಂಟಾದ ರಕ್ತಸ್ರಾವ ಆತಂಕ ಮೂಡಿಸಿತ್ತು.ಈ ವಯಸ್ಸಿನಲ್ಲಿ ಅವರಿಗೆ ಈ ರೀತಿ ಆಗಿದೆ ಎಂದಾಗ ಸಹಜವಾಗಿಯೇ ಆತಂಕ ಹೆಚ್ಚಿತ್ತು. ಅವರನ್ನು ವೆಂಟಿಲೇಟರ್ ಸಪೋರ್ಟ್‌ನೊಂದಿಗೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಇಂದೇ ಅವರನ್ನು ಮನೆಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.
ಸಲೀಂ ಖಾನ್ ಆಸ್ಪತ್ರೆಯಲ್ಲಿ ಇರುವಾಗ ಸಲ್ಮಾನ್ ಖಾನ್, ಅರ್ಬಾಜ್ ಖಾನ್, ಮಲ್ವಿರಾ, ಅರ್ಪಿತಾ, ಅಳಿಯ ಅತುಲ್ ಅಗ್ನಿಹೋತ್ರಿ, ಆಯುಷ್ ಶರ್ಮಾ ಸೇರಿದಂತೆ ಅನೇಕರು ನಿತ್ಯವೂ ಬಂದು ಹೋಗುತ್ತಿದ್ದರು. ವೃತ್ತಿ ಜೀವನದಲ್ಲಿ ಬೆಂಬಲವಾಗಿ ನಿಂತ ಜಾವೇದ್ ಅಖ್ತರ್ ಕೂಡ ಆಗಾಗ ಬಂದು ಹೋಗುವಂತೆ.
ಇದನ್ನೂ ಓದಿ: ಏಕಾಏಕಿ ಆಸ್ಪತ್ರೆಗೆ ದಾಖಲಾದ ಸಲೀಮ್ ಖಾನ್; ಆಸ್ಪತ್ರೆಗೆ ದೌಡಾಯಿಸಿದ ಸಲ್ಮಾನ್ ಖಾನ್
ಸಲೀಮ್ ಖಾನ್ ಅವರು ಜಾವೇದ್ ಜೊತೆ ಸೇರಿ ಅದ್ಭುತ ಕಥೆಗಳನ್ನು ಬರೆಯುತ್ತಿದ್ದರು.70 ರ ದಶಕದಲ್ಲಿ ಈ ಜೋಡಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದೆ ಎಂಬುದು ವಿಶೇಷ.ಸಲೀಮ್ ಖಾನ್ ಅವರಿಗೆ ಕನ್ನಡದ ನಂಟೂ ಇದೆ. 1976ರಲ್ಲಿ ಬಂದ ‘ಪ್ರೇಮದ ಕಾಣಿಕೆ’ ಹಾಗೂ ‘ರಾಜ ನನ್ನ ರಾಜ’ ಸಿನಿಮಾಗಳಿಗೆ ಸಲೀಮ್ ಹಾಗೂ ಜಾವೇದ್ ಅವರೇ ಕಥೆ. ಈ ಎರಡೂ ಸಿನಿಮಾಗಳು ಹಿಟ್ ಆದವು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.