Headlines

Mohanlal: ಆ ಮಗುವಿನ ಮುಖವನ್ನಾದ್ರೂ ನೋಡ್ಬಹುದಿತ್ತು: ಫ್ಯಾನ್ಸ್ ಜೊತೆಗಿನ ಫೋಟೋಶೂಟ್ ವಿಡಿಯೋ ವೈರಲ್, ನಟನಿಗೆ ಟೀಕೆ | Mohanlal Faces Backlash Over Viral Video With Child Fan During Photoshoot Gvd

Mohanlal: ಆ ಮಗುವಿನ ಮುಖವನ್ನಾದ್ರೂ ನೋಡ್ಬಹುದಿತ್ತು: ಫ್ಯಾನ್ಸ್ ಜೊತೆಗಿನ ಫೋಟೋಶೂಟ್ ವಿಡಿಯೋ ವೈರಲ್, ನಟನಿಗೆ ಟೀಕೆ | Mohanlal Faces Backlash Over Viral Video With Child Fan During Photoshoot Gvd



Mohanlal: ಆ ಮಗುವಿನ ಮುಖವನ್ನಾದ್ರೂ ನೋಡ್ಬಹುದಿತ್ತು: ಫ್ಯಾನ್ಸ್ ಜೊತೆಗಿನ ಫೋಟೋಶೂಟ್ ವಿಡಿಯೋ ವೈರಲ್, ನಟನಿಗೆ ಟೀಕೆ | Mohanlal Faces Backlash Over Viral Video With Child Fan During Photoshoot Gvd

ತರುಣ್ ಮೂರ್ತಿ ನಿರ್ದೇಶನದ ಸಿನಿಮಾ ಶೂಟಿಂಗ್ ವೇಳೆ ನಟ ಮೋಹನ್‌ಲಾಲ್ ಅಭಿಮಾನಿಗಳ ಜೊತೆ ಫೋಟೋಶೂಟ್ ನಡೆಸಿದ್ದರು. ಈ ವೇಳೆ ತೆಗೆದ ಒಂದು ವಿಡಿಯೋ ಈಗ ವಿವಾದಕ್ಕೆ ಕಾರಣವಾಗಿದ್ದು, ವೈರಲ್ ಆಗಿವೆ. 

ನಟ ಮೋಹನ್‌ಲಾಲ್ ಆಗಾಗ ತಮ್ಮ ಅಭಿಮಾನಿಗಳಿಗಾಗಿ ದೊಡ್ಡ ಫೋಟೋಶೂಟ್‌ಗಳನ್ನು ನಡೆಸುತ್ತಾರೆ. ನೂರಾರು ಸಂಖ್ಯೆಯಲ್ಲಿ ಬರುವ ಪ್ರತಿಯೊಬ್ಬ ಅಭಿಮಾನಿಯ ಜೊತೆಗೂ ಅವರು ಫೋಟೋಗೆ ಪೋಸ್ ಕೊಡುತ್ತಾರೆ. ಇದೇ ಕಾರಣಕ್ಕೆ ಅವರು ಮೆಚ್ಚುಗೆ ಗಳಿಸಿದ್ದೂ ಇದೆ. ಇತ್ತೀಚೆಗೆ, ತರುಣ್ ಮೂರ್ತಿ ನಿರ್ದೇಶನದ ಹೊಸ ಸಿನಿಮಾ ಸೆಟ್‌ನಲ್ಲಿ ಇದೇ ರೀತಿ ಒಂದು ಫೋಟೋಶೂಟ್ ನಡೆದಿತ್ತು. ಇಲ್ಲಿನ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದವು. ಆದರೆ, ಇದರಲ್ಲಿನ ಒಂದು ಚಿಕ್ಕ ವಿಡಿಯೋ ಮೋಹನ್‌ಲಾಲ್‌ಗೆ ಟೀಕೆಗಳನ್ನು ತಂದುಕೊಟ್ಟಿದೆ.

ಅಪ್ಪನ ಜೊತೆ ಬಂದಿದ್ದ ಪುಟ್ಟ ಮಗುವೊಂದು ಮೋಹನ್‌ಲಾಲ್ ಜೊತೆ ಫೋಟೋ ತೆಗೆಸಿಕೊಳ್ಳಲು ಬಂದಿತ್ತು. ಅಪ್ಪನ ತೋಳಲ್ಲಿದ್ದ ಆ ಹುಡುಗಿ, ತುಂಬಾನೇ ಖುಷಿ ಮತ್ತು ಕುತೂಹಲದಿಂದ ಮೋಹನ್‌ಲಾಲ್ ಅವರ ಭುಜವನ್ನು ಮುಟ್ಟುತ್ತಾಳೆ. ಈ ವಿಡಿಯೋದಲ್ಲಿ ಇದೇ ಹೈಲೈಟ್ ಆಗಿತ್ತು. ಈ ವೇಳೆ ಮೋಹನ್‌ಲಾಲ್, ಕ್ಯಾಮೆರಾ ಕಡೆ ನೋಡು ಎಂದು ಮಗುವಿಗೆ ಸನ್ನೆ ಮಾಡುತ್ತಾರೆ. ಮಗು ಕ್ಯಾಮೆರಾ ನೋಡಿದ ನಂತರ ಫೋಟೋ ತೆಗೆದು ಅವರು ಅಲ್ಲಿಂದ ಹೋಗುತ್ತಾರೆ.

ಹೋಗುವಾಗಲೂ ಆ ಮಗು ಉತ್ಸಾಹದಿಂದ ಮೋಹನ್‌ಲಾಲ್‌ಗೆ ಕೈ ಬೀಸುತ್ತದೆ. ಆದರೆ, ಮೋಹನ್‌ಲಾಲ್ ಮಗುವಿನ ಮುಖ ನೋಡದೆ ಕೈ ಬೀಸಿ ಪ್ರತಿಕ್ರಿಯಿಸುತ್ತಾರೆ. ಮಗುವಿನ ಜೊತೆ ಸರಿಯಾಗಿ ನಡೆದುಕೊಳ್ಳಲಿಲ್ಲ, ಕನಿಷ್ಠ ಮುಖ ನೋಡಿ ನಗಬಹುದಿತ್ತು ಎನ್ನುವ ಟೀಕೆಗಳು ಕಾಮೆಂಟ್ ಬಾಕ್ಸ್‌ನಲ್ಲಿ ವ್ಯಕ್ತವಾದವು. ಆದರೆ, ನೂರಾರು ಅಭಿಮಾನಿಗಳ ಜೊತೆ ಒಂದೇ ಸಮನೆ ಫೋಟೋ ತೆಗೆಸಿಕೊಳ್ಳಲು ಸಾಕಷ್ಟು ಶಕ್ತಿ ಬೇಕು. ಪ್ರತಿಯೊಬ್ಬರ ಜೊತೆಗೂ ವೈಯಕ್ತಿಕವಾಗಿ ಮಾತನಾಡಲು ಸಮಯ ಸಿಗುವುದಿಲ್ಲ ಎಂದು ಕೆಲವರು ಮೋಹನ್‌ಲಾಲ್ ಪರ ವಾದಿಸಿದ್ದಾರೆ.

ಅಭಿಮಾನಿಗಳ ಜೊತೆ ಫೋಟೋ

ಕಾಮೆಂಟ್ ಬಾಕ್ಸ್‌ನಲ್ಲಿ ನೆಗೆಟಿವ್ ಕಾಮೆಂಟ್‌ಗಳು ಹೆಚ್ಚಾದ ಬೆನ್ನಲ್ಲೇ, ಈ ವಿಡಿಯೋ ಸೆರೆಹಿಡಿದಿದ್ದ ಫೋಟೋಗ್ರಾಫರ್ ನಿಖಿಲ್ ಅವರೇ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮೋಹನ್‌ಲಾಲ್ ಹಲವು ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಳ್ಳುತ್ತಾ, ಅವರ ಖುಷಿಯಲ್ಲಿ ಭಾಗಿಯಾಗುವುದನ್ನು ಕಾಣಬಹುದು. “ಒಂದೇ ಸಲ 200-250 ಜನರ ಜೊತೆ ಫೋಟೋ ತೆಗೆಸಿಕೊಳ್ಳುವುದು. ಫೋಟೋಗೆ ಬಂದ ಒಬ್ಬರೂ ನಿರಾಸೆಯಿಂದ ಹಿಂತಿರುಗಿರಲಿಕ್ಕಿಲ್ಲ, ಅದು ಅವರು ಕೊಡುವ ಗ್ಯಾರಂಟಿ” ಎಂದು ನಿಖಿಲ್ ವಿಡಿಯೋ ಜೊತೆ ಬರೆದುಕೊಂಡಿದ್ದಾರೆ. ತಮ್ಮ ನೆಚ್ಚಿನ ನಟನ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ದೊಡ್ಡ ಸರತಿ ಸಾಲಿನಲ್ಲಿ ನಿಂತಿರುವುದೂ ಈ ವಿಡಿಯೋದಲ್ಲಿ ಕಾಣಿಸುತ್ತದೆ.



Source link

Leave a Reply

Your email address will not be published. Required fields are marked *