
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ರೈತರ ಪಂಪ್ಸೆಟ್ಗಳ ಕೇಬಲ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕದ್ದ ಕೇಬಲ್ನಿಂದಲೇ ಅವರನ್ನು ಮರಕ್ಕೆ ಕಟ್ಟಿ ಥಳಿಸಿ, ನಂತರ ಹುಲಿಯೂರು ದುರ್ಗ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪಂಪ್ಸೆಟ್ ಕೇಬಲ್ ಕಳ್ಳರಿಗೆ ಸರಿಯಾಗಿ ಬಾರಿಸಿದ ರೈತರು
ತುಮಕೂರು: ದೇಶದ ಬಹುತೇಕ ರೈತರನ್ನು ಕಾಡುವ ಸಮಸ್ಯೆಗಳು ಒಂದೆರಡಲ್ಲ, ಮಳೆ ಜೋರು ಬಂದರೆ ಬೆಳೆ ಕೊಳೆತು ಹೋಗುತ್ತೆ ಬರದೇ ಹೋದ್ರೆ ಒಣಗಿ ಹೋಗುತ್ತೆ.ಇದರ ಜೊತೆಗೆ ಕೃಷಿಗಾಗಿ ಮಾಡಿದ ಸಾಲಗಳು, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿರೋದು ಹೀಗೆ ಹಲವು ಸಮಸ್ಯೆಗಳಿಂದ ಬಳಲುವ ರೈತರಿಗೆ ಇಲ್ಲೊಂದು ಕಡೆ ಕಳ್ಳರು ಹಾವಳಿ ನೀಡಿದ್ದು, ರೈತರ ಪಂಪ್ಸೆಟ್ಗಳ ಕೇಬಲ್ ಕದ್ದಿಯುತ್ತಿದ್ದರು. ಮೊದಲೇ ನೂರೆಂಟು ತೊಂದರೆಗಳಿಂದ ಸಂಕಷ್ಟಕ್ಕೀಡಾಗಿರುವ ರೈತರ ಕೈಗೆ ಈ ಪಂಪ್ಸೆಟ್ನ ಕೇಬಲ್ ಕಳ್ಳರು ಸಿಕ್ಕಿದ್ದು, ಸರಿಯಾಗಿ ಬಾರಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ರೈತರ ಕೈಗೆ ಸಿಕ್ಕಿಬಿದ್ದ ಕಳ್ಳರು
ಹೌದು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕುಂಟಯ್ಯನಪಾಳ್ಯ ಗ್ರಾಮದಲ್ಲಿ ಇಬ್ಬರು ಖದೀಮರು ರೈತರ ಪಂಪ್ಸೆಟ್ಗಳ ಕೇಬಲ್ ಕದಿಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದು, ಅವರಿಗೆ ಗ್ರಾಮಸ್ಥರು ಸರಿಯಾಗಿ ಬಾರಿಸಿದ್ದಾರೆ. ಪಂಪ್ಸೆಟ್ನ ಕೇಬಲ್ಗಳಿಗೆ ದುಬಾರಿ ಹಣವಿದೆ. ಒಮ್ಮೆ ಕೇಬಲ್ ಕಳೆದುಕೊಂಡರೆ ಮತ್ತೆ ಸಾವಿರಾರು ರೂಪಾಯಿ ವ್ಯಯಿಸಿ ಕೇಬಲ್ ಖರೀದಿಸಿ ತಾವು ಬೆಳೆದ ಬೆಳೆಗೆ ನೀರು ಹಾಕಬೇಕಾಗುತ್ತದೆ. ಈ ಕೇಬಲ್ಗಳಿಗಿರುವ ದುಬಾರಿ ಬೆಲೆಯೇ ಕಳ್ಳರ ಕಣ್ಣು ಕುಕ್ಕಿದ್ದು, ರೈತರ ಪಂಪ್ಸೆಟ್ಗಳ ಕೇಬಲ್ ಮೇಲೆ ಕಣ್ಣು ಹಾಕಿದ್ದಾರೆ. ಆದರೆ ಅವರ ಅದೃಷ್ಟ ಕೆಟ್ಟಿತ್ತೋ ಏನೋ ರೈತರ ಕೈಗೆ ಸಿಕ್ಕಿಬಿದ್ದ ಅವರಿಗೆ ರೈತರು ಸರಿಯಾಗಿಯೇ ತಮ್ಮ ಕೈರುಚಿ ತೋರಿಸಿದ್ದಾರೆ.
ಇದನ್ನೂ ಓದಿ: ಮದುವೆ ಮನೆಯಲ್ಲಿ ಊಟ ಮಾಡ್ತಿದ್ದಾಗ ದುರಂತ: ಗಂಟಲಿನಲ್ಲಿ ರಸಗುಲ್ಲಾ ಸಿಲುಕಿ ವ್ಯಕ್ತಿ ಸಾವು
ರೇಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳರನ್ನು ಮರಕ್ಕೆ ಕಟ್ಟಿಹಾಕಿದ ಗ್ರಾಮಸ್ಥರು ಬಳಿಕ ಅವರಿಗೆ ಸರಿಯಾಗಿ ಬಾರಿಸಿದ್ದಾರೆ. ಅವರು ಕದ್ದಂತಹ ಕೇಬಲ್ನಿಂದಲೇ ಇಬ್ಬರನ್ನು ಮರಕ್ಕೆ ಕಟ್ಟಿ ಬಾರಿಸಿದ್ದಾರೆ. ಈ ಇಬ್ಬರು ಕಳ್ಳರು ಮಾಗಡಿ ಮೂಲದವರಾಗಿದ್ದು, ಕುಂಟಯ್ಯನಪಾಳ್ಯ ಗ್ರಾಮದ ಸುತ್ತಮುತ್ತ ರೈತರ ತೋಟಗಳಲ್ಲಿದ್ದ ಪಂಪ್ಸೆಟ್ಗಳ ಕೇಬಲ್ಗಳನ್ನು ಕಳವು ಮಾಡ್ತಿದ್ರು. ಆದರೆ ಇಂದು ಕೈಗೆ ಸಿಕ್ಕ ಕಳ್ಳರಿಗೆ ಬೆನ್ನು ಹುಡಿಯಾಗುವಂತೆ ರೈತರು ಬಾರಿಸಿದ್ದು, ಬಳಿಕ ಹುಲಿಯೂರು ದುರ್ಗ ಪೊಲೀಸರಿಗೆ ಕಳ್ಳರನ್ನು ಒಪ್ಪಿಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡ ಹುಲಿಯೂರು ದುರ್ಗ ಪೊಲೀಸರು ಇಬ್ಬರು ಕಳ್ಳರನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನಾನು ಕೂಡ ನಿನ್ನ ಅಮ್ಮನ ಹಾಲು ಕುಡಿದೇ ಬೆಳೆದಿದ್ದು: ಹಠ ಮಾಡಿದ ಎಮ್ಮೆ ಕರುವಿಗೆ ಬಾಲಕಿಯ ಸವಾಲು: ವೀಡಿಯೋ ವೈರಲ್