Suriya Movie: ‘ಗಜನಿ’ ವೈಬ್ಸ್.. 20 ವರ್ಷ ಚಿಕ್ಕ ನಟಿ ಜೊತೆ ಸೂರ್ಯ ಲವ್ ಸ್ಟೋರಿ? ಟೀಸರ್ ಸಖತ್ ವೈರಲ್! | Suriya Mamitha Baijus Age Gap Romance In Vishwanath And Sons Teaser Wows Fans Gvd

Suriya Movie: ‘ಗಜನಿ’ ವೈಬ್ಸ್.. 20 ವರ್ಷ ಚಿಕ್ಕ ನಟಿ ಜೊತೆ ಸೂರ್ಯ ಲವ್ ಸ್ಟೋರಿ? ಟೀಸರ್ ಸಖತ್ ವೈರಲ್! | Suriya Mamitha Baijus Age Gap Romance In Vishwanath And Sons Teaser Wows Fans Gvd



Suriya Movie: ‘ಗಜನಿ’ ವೈಬ್ಸ್.. 20 ವರ್ಷ ಚಿಕ್ಕ ನಟಿ ಜೊತೆ ಸೂರ್ಯ ಲವ್ ಸ್ಟೋರಿ? ಟೀಸರ್ ಸಖತ್ ವೈರಲ್! | Suriya Mamitha Baijus Age Gap Romance In Vishwanath And Sons Teaser Wows Fans Gvd

ಸಿನಿಮಾ ಪ್ರೇಕ್ಷಕರಿಗೆ ನಟ ಸೂರ್ಯ ಅಂದ್ರೆ ಒಂದು ವಿಶೇಷ ಪ್ರೀತಿ. ಅವರಿಗಿಂತ ದೊಡ್ಡ ಸ್ಟಾರ್‌ಗಳು ತಮಿಳಿನಲ್ಲಿ ಹಲವರಿದ್ದರೂ, ಜನರಿಗೆ ಹತ್ತಿರದ ಹೀರೋ ಅಂದ್ರೆ ಅದು ಸೂರ್ಯನೇ. ತೆರೆ ಮೇಲೆ ಮಾತ್ರವಲ್ಲ..

ವೆಂಕಿ ಅಟ್ಲೂರಿ ನಿರ್ದೇಶನದ ಸೂರ್ಯ ಅಭಿನಯದ ಹೊಸ ಸಿನಿಮಾ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಟೀಸರ್ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸೂರ್ಯ ಹಾಗೂ ಮಮಿತಾ ಬೈಜು ಜೋಡಿಯ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ತಮಿಳು ಸಿನಿಮಾ ಪ್ರೇಕ್ಷಕರಿಗೆ ನಟ ಸೂರ್ಯ ಅಂದ್ರೆ ಒಂದು ವಿಶೇಷ ಪ್ರೀತಿ. ಅವರಿಗಿಂತ ದೊಡ್ಡ ಸ್ಟಾರ್‌ಗಳು ತಮಿಳಿನಲ್ಲಿ ಹಲವರಿದ್ದರೂ, ಜನರಿಗೆ ಹತ್ತಿರದ ಹೀರೋ ಅಂದ್ರೆ ಅದು ಸೂರ್ಯನೇ.

ತೆರೆ ಮೇಲೆ ಮಾತ್ರವಲ್ಲ, ತೆರೆ ಹಿಂದಿನ ಅವರ ವ್ಯಕ್ತಿತ್ವ ಕೂಡ ಈ ಜನಪ್ರಿಯತೆಗೆ ಒಂದು ಕಾರಣ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರ ಸ್ಟಾರ್‌ಡಮ್‌ಗೆ ತಕ್ಕ ದೊಡ್ಡ ಹಿಟ್ ಸಿಕ್ಕಿರಲಿಲ್ಲ. ಸದ್ಯ ಸೂರ್ಯ ಕೈಯಲ್ಲಿರುವ ಸಿನಿಮಾಗಳೆಲ್ಲಾ ಭರವಸೆ ಮೂಡಿಸುವಂತಿವೆ. ಅದರಲ್ಲಿ ಒಂದು ‘ವಿಶ್ವನಾಥ್ ಆ್ಯಂಡ್ ಸನ್ಸ್’. ಈ ಚಿತ್ರವನ್ನು ತೆಲುಗಿನಲ್ಲಿ ‘ಲಕ್ಕಿ ಭಾಸ್ಕರ್’ ಹಾಗೂ ತಮಿಳಿನಲ್ಲಿ ‘ವಾತಿ’ಯಂತಹ ಹಿಟ್ ಕೊಟ್ಟ ವೆಂಕಿ ಅಟ್ಲೂರಿ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ರಿಲೀಸ್ ಆಗಿರುವ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಟೀಸರ್‌ಗೆ ಅಭಿಮಾನಿಗಳಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ.

ಈ ಸಿನಿಮಾ ಒಂದು ಫ್ಯಾಮಿಲಿ ಡ್ರಾಮಾ ಅನ್ನೋದು ಈ ಹಿಂದೆಯೇ ರಿಲೀಸ್ ಆಗಿದ್ದ ಪೋಸ್ಟರ್‌ಗಳಿಂದ ಗೊತ್ತಾಗಿತ್ತು. ಈಗ ಬಂದಿರುವ ಟೀಸರ್, ಇದೊಂದು ಫೀಲ್ ಗುಡ್ ಫ್ಯಾಮಿಲಿ ಎಂಟರ್‌ಟೈನರ್ ಎಂಬುದನ್ನು ಖಚಿತಪಡಿಸಿದೆ. ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿ ಮಮಿತಾ ಬೈಜು ನಟಿಸಿದ್ದಾರೆ. ಕಥೆಯ ಪ್ರಕಾರ, ಸೂರ್ಯ 40ರ ಹರೆಯದ ವ್ಯಕ್ತಿಯಾದರೆ, ಮಮಿತಾ 20ರ ಹರೆಯದ ಯುವತಿ. ಇವರಿಬ್ಬರ ನಡುವಿನ ಪ್ರೇಮಕಥೆಯೇ ಈ ಚಿತ್ರದ ಹೈಲೈಟ್ ಎಂದು ಟೀಸರ್ ನೋಡಿದ್ರೆ ಗೊತ್ತಾಗುತ್ತೆ.

ಕೆಮಿಸ್ಟ್ರಿ ಸಖತ್ತಾಗಿ ವರ್ಕೌಟ್ ಆಗಿದೆ

ಸೂರ್ಯ-ಮಮಿತಾ ಜೋಡಿಯ ಕೆಮಿಸ್ಟ್ರಿ ಸಖತ್ತಾಗಿ ವರ್ಕೌಟ್ ಆಗಿದೆ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಟೀಸರ್‌ನ ಕೆಲವು ಕಡೆ ಸೂರ್ಯ, ತಮ್ಮದೇ ಸೂಪರ್‌ಹಿಟ್ ಸಿನಿಮಾ ‘ಗಜನಿ’ಯ ಸಂಜಯ್ ರಾಮಸ್ವಾಮಿ ಪಾತ್ರವನ್ನು ನೆನಪಿಸುತ್ತಿದ್ದಾರೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಸೂರ್ಯನ ಪಾತ್ರದ ಹೆಸರು ಕೂಡ ಸಂಜಯ್ ವಿಶ್ವನಾಥ್. ನಿರ್ದೇಶಕ ವೆಂಕಿ ಅಟ್ಲೂರಿ ಮೇಲೆ ಸೂರ್ಯ ಫ್ಯಾನ್ಸ್‌ಗೆ ದೊಡ್ಡ ನಿರೀಕ್ಷೆಯಿದೆ.

ಟೀಸರ್‌ನ ತಾಂತ್ರಿಕ ಗುಣಮಟ್ಟ ಕೂಡ ಗಮನ ಸೆಳೆಯುತ್ತಿದೆ. ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಟೀಸರ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳು ಟೀಸರ್‌ಗೆ ಈಗಾಗಲೇ 36 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಸಿಕ್ಕರೆ, ತೆಲುಗು ಟೀಸರ್‌ಗೆ 19 ಲಕ್ಷಕ್ಕೂ ಅಧಿಕ ವೀವ್ಸ್ ಬಂದಿದೆ. ಸಿತಾರ ಎಂಟರ್‌ಟೈನ್‌ಮೆಂಟ್ಸ್, ಫಾರ್ಚೂನ್ ಫೋರ್ ಸಿನಿಮಾಸ್ ಮತ್ತು ಶ್ರೀಕರ ಸ್ಟುಡಿಯೋಸ್ ಬ್ಯಾನರ್‌ಗಳ ಅಡಿಯಲ್ಲಿ ಸೂರ್ಯದೇವರ ನಾಗವಂಶಿ ಮತ್ತು ಸಾಯಿ ಸೌಜನ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ.



Source link

Leave a Reply

Your email address will not be published. Required fields are marked *