Headlines

ನಟ ದರ್ಶನ್​ ಭೇಟಿಗೆ ಕೋರ್ಟ್​ ಅಸ್ತು; ಇನ್ನೋರ್ವ ಆರೋಪಿಗೆ ಭಾರಿ ದಂಡ- ಆದೇಶದ ಡಿಟೇಲ್ಸ್ ಇಲ್ಲಿದೆ

ನಟ ದರ್ಶನ್​ ಭೇಟಿಗೆ ಕೋರ್ಟ್​ ಅಸ್ತು; ಇನ್ನೋರ್ವ ಆರೋಪಿಗೆ ಭಾರಿ ದಂಡ- ಆದೇಶದ ಡಿಟೇಲ್ಸ್ ಇಲ್ಲಿದೆ

ನಟ ದರ್ಶನ್​ ಭೇಟಿಗೆ ಕೋರ್ಟ್​ ಅಸ್ತು; ಇನ್ನೋರ್ವ ಆರೋಪಿಗೆ ಭಾರಿ ದಂಡ- ಆದೇಶದ ಡಿಟೇಲ್ಸ್ ಇಲ್ಲಿದೆ

ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ, ಅವರ ಕುಟುಂಬಸ್ಥರು ಒಳಗೆ ಬಂದು ಭೇಟಿಯಾಗಲು ಸೆಷನ್ಸ್ ಕೋರ್ಟ್ ಅನುಮತಿ ನೀಡಿದೆ. ಆದರೆ, ಜೈಲಿನ ಸೂಪರಿಂಟೆಂಡೆಂಟ್ ಅವರ ಒಪ್ಪಿಗೆ ಕಡ್ಡಾಯವಾಗಿದೆ. ಇದೇ ವೇಳೆ, ತನಿಖಾಧಿಕಾರಿ ವಿರುದ್ಧ ಸುಳ್ಳು ಅರ್ಜಿ ಸಲ್ಲಿಸಿದ್ದ   ಪವನ್‌ಗೆ ದಂಡ ವಿಧಿಸಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ, ಒಂದೂವರೆ ವರ್ಷಕ್ಕೂ ಅಧಿಕ ಕಾಲ ಜೈಲಿನಲ್ಲಿ ಇರುವ ನಟ ದರ್ಶನ್​ ಅವರಿಗೆ ಇಂದು ಕೊಂಚ ನಿರಾಳ ಆಗುವಂಥ ಆದೇಶವೊಂದು ಕೋರ್ಟ್​ನಿಂದ ಹೊರ ಬಂದಿದೆ. ಸದ್ಯ ದರ್ಶನ್​​ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದು, ಜೈಲಿನ ಒಳಗೆ ಅವರ ಕುಟುಂಬಸ್ಥರು ಭೇಟಿಯಾಗುವ ಅವಕಾಶವನ್ನು ಕೋರ್ಟ್​ ನೀಡಿದೆ.

ಭೇಟಿಗೆ ಅವಕಾಶ ನೀಡುವಂತೆ ಕೋರಿ ದರ್ಶನ್​ ಅವರು ಮಾಡಿಕೊಂಡಿರುವ ಮನವಿಯನ್ನು ಸೆಷನ್ಸ್​ ಕೋರ್ಟ್​ ಮಾನ್ಯ ಮಾಡಿದೆ. ಈ ಮೂಲಕ ಜೈಲಿನ ಒಳ ಸಂದರ್ಶನಕ್ಕೆ ನ್ಯಾಯಾಧೀಶರು ಒಪ್ಪಿಗೆ ಸೂಚಿಸಿದ್ದು, ಇನ್ನು ಅವರ ಕುಟುಂಬಸ್ಥರು ನಟನನ್ನು ಜೈಲಿನ ಒಳಗೆ ಭೇಟಿ ಮಾಡಬಹುದಾಗಿದೆ.

ಜೈಲಿನ ಸೂಪರಿಂಟೆಂಡೆಂಟ್ ಗೆ ಅಧಿಕಾರ ನೀಡಿರುವ ಕೋರ್ಟ್ ಜೈಲಿನ ಮ್ಯಾನ್ಯುಯಲ್ ಪ್ರಕಾರ ಒಳಸಂದರ್ಶನಕ್ಕೆ ಅವಕಾಶ ನೀಡಲು ಅನುಮತಿ ನೀಡಿದೆ.ಇದರ ಅರ್ಥ ಸೂಪರಿಂಟೆಂಡೆಂಟ್ ಮನವಿ ಮಾಡಿ ಒಪ್ಪಿಗೆ ಸೂಚಿಸಿದ್ರೆ ಒಳಸಂದರ್ಶನಕ್ಕೆ ಅವಕಾಶ ಎಂದು ಆದೇಶದಲ್ಲಿ ತಿಳಿಸಿದೆ. ಸೂಪರಿಂಟೆಂಡೆಂಟ್ ಅವರ ಅನುಮತಿ ಕಡ್ಡಾಯವಾಗಿದೆ.

ಅದೇ ಇನ್ನೊಂದೆಡೆ, ರೇಣುಕಾಸ್ವಾಮಿ ಪ್ರಕರಣದಲ್ಲಿಯೇ 3ನೇ ಆರೋಪಿ ಆಗಿರುವವರು ಪವನ್​. ಇವರು, ಈ ಪ್ರಕರಣವನ್ನು ನಡೆಸುತ್ತಿರುವ ತನಿಖಾಧಿಕಾರಿಯನ್ನೇ ಆರೋಪಿಯನ್ನಾಗಿ ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೋರ್ಟ್​ ಪವನ್​ಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿದೆ.

ಅಷ್ಟಕ್ಕೂ ಪವನ್​ ಅವರ ಆರೋಪ ಏನೆಂದರೆ, ತನಿಖೆಯ ವೇಳೆ ಆರೋಪಿಗಳ ಮೊಬೈಲ್‌ಗಳನ್ನು ವಶಕ್ಕೆ ಪಡೆಯುವಾಗ ಪೊಲೀಸರು ಫೋಟೋ ತೆಗೆದಿದ್ದರು. ಈ ಫೋಟೋದಲ್ಲಿ ಕಾಣಿಸುತ್ತಿರುವ ‘ಟೈಲ್ಸ್’ ಅನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದ ಅವರು, ಪೊಲೀಸರು ಸುಳ್ಳು ಸಾಕ್ಷ್ಯ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದರು.

ಆದರೆ ಕೋರ್ಟ್​, ಇದೊಂದು ಆಧಾರರಹಿತ ವಾದ ಎಂದು ಹೇಳಿ ಕೋರ್ಟ್​ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ದಂಡ ವಿಧಿಸಿದೆ. ಪವನ್ ಪಾವತಿಸುವ ಈ ದಂಡದ ಹಣವನ್ನು ‘ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.

Source link

Leave a Reply

Your email address will not be published. Required fields are marked *