Headlines

ಅಶ್ಲೀಲ ಹಾಡು: ‘ಕೆಡಿ’ ಚಿತ್ರತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಿಳಾ ಆಯೋಗ ಪತ್ರ

ಅಶ್ಲೀಲ ಹಾಡು: ‘ಕೆಡಿ’ ಚಿತ್ರತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಿಳಾ ಆಯೋಗ ಪತ್ರ


ಅಶ್ಲೀಲ ಹಾಡು: 'ಕೇಡಿ' ಚಿತ್ರತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಿಳಾ ಆಯೋಗ ಪತ್ರ

ಧ್ರುವ ಸರ್ಜಾ, ಸಂಜಯ್ ದತ್, ನೋರಾ ಫತೇಹಿ ಮುಂತಾದವರು ನಟಿಸಿದ್ದಾರೆ ‘ಕೆಡಿ’ (ಕೆಡಿ ಚಲನಚಿತ್ರ) ಸಿನಿಮಾದ ‘ಸರ್ಸೆ ನಿನ್ನ ಸೆರಗ’ ಹಾಡು ವಿವಾದಕ್ಕೆ ಗುರಿಯಾಗಿದೆ. ಅಶ್ಲೀಲ ಸಾಹಿತ್ಯ ಹೊಂದಿರುವ ಕಾರಣಕ್ಕೆ ಈ ಹಾಡನ್ನು ವಿರೋಧಿಸಲಾಗುತ್ತಿದೆ. ‘ಕೇಡಿ’ ಚಿತ್ರತಂಡಕ್ಕೆ ತೀವ್ರ ಖಂಡನೆ ಇದೆ. ಅನೇಕ ಕಡೆಗಳಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ (ನಾಗಲಕ್ಷ್ಮಿ ಚೌಧರಿ) ಅವರು ಮಾತನಾಡಿದ್ದಾರೆ. ‘ಹೆಣ್ಮಕ್ಕಳು ಅನುಭವಿಸುತ್ತಿರುವ ಪರಿಸ್ಥಿತಿ ಬಹಳ ಕಷ್ಟ. ಇಂಥ ಹಾಡುಗಳು ಬಂದರೆ ಇನ್ನೂ ಹಗುರವಾಗಿ ಮಾತನಾಡಲು ಶುರು ಮಾಡುತ್ತಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಸೆನ್ಸಾರ್ ಮಂಡಳಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಆ ಹಾಡನ್ನು ಕೇಳಲು ನನಗೆ ಸಾಧ್ಯವಾಗಲಿಲ್ಲ. ಆರಂಭದ ಕೆಲವು ಸಾಲುಗಳನ್ನು ಕೇಳುವಾಗಲೇ ಮುಜುಗರ ಆಯಿತು’ ಎಂದು ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *