
ನವದೆಹಲಿ, ಮಾರ್ಚ್ 17: ಅಲಿಘರ್ ರೈಲು ನಿಲ್ದಾಣದಲ್ಲಿ ಯಾರೂ ನಡೆದ ಘಟನೆಯೊಂದು ನಡೆದಿದೆ. ರೈಲು ಇನ್ನೇನು ಸ್ಟೇಷನ್‌ಗೆ ತಲುಪಬೇಕು ಎನ್ನುವಷ್ಟರಲ್ಲಿ ತನ್ನ ಮಗಳ ಜೊತೆ ರೈಲಿಗಾಗಿ ಕಾಯುತ್ತಿದ್ದ ಮಹಿಳೆ ರೈಲು ಹಳಿ ಮೇಲೆ ಹಾರಿದ್ದಳು. ಆತ್ಮಹತ್ಯೆಗೆ ಯತ್ನಿಸಿದ ಆಕೆಯ ಹಿಂದೆಯೇ ಓಡಿದ 7 ವರ್ಷದ ಮಗಳು ಅಮ್ಮ ಬೇಡಮ್ಮ ಎನ್ನುತ್ತಾ ಕೂಗಲಾರಂಭಿಸಿದ್ದಾಳೆ. ಆಕೆಯ ಕಿರುಚಾಟ ಕೇಳಿದ ನಂತರ ಇತರ ಪ್ರಯಾಣಿಕರು ಮತ್ತು ಜಿಆರ್‌ಪಿ ಸಿಬ್ಬಂದಿ ಓಡಿ ಬಂದು ಮಹಿಳೆಯನ್ನು ಕಾಪಾಡಿದ್ದಾರೆ.
ಮನೆಯಲ್ಲಿ ಕೌಟುಂಬಿಕ ಹಿಂಸಾಚಾರದಿಂದ ನೊಂದ ಮಹಿಳೆ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾಳೆ. ರೈಲು ಸಮೀಪಿಸುತ್ತಿರುವುದನ್ನು ನೋಡಿದ ಆಕೆ ಹಳಿಗಳ ಕಡೆಗೆ ಹೋದಳು. ಅಷ್ಟರಲ್ಲೇ ಅವರ 7 ವರ್ಷದ ಮಗಳು ಟ್ವಿಂಕಲ್ ಓಡಿ ಬಂದು ಆಕೆಯನ್ನು ಹಿಡಿದುಕೊಂಡಳು. ಆ ಬಾಲಕಿ ಜೋರಾಗಿ ಕೂಗುತ್ತಿದ್ದಳು “ಅಮ್ಮ, ಬೇಡಮ್ಮ, ಸಾಯೋದು ಬೇಡಮ್ಮ” ಎಂದು ಅಳುತ್ತಿದ್ದಳು. ಅಮ್ಮನನ್ನು ಹಳಿಯಿಂದ ಹಿಂದಕ್ಕೆ ಎಳೆಯಲು ಪ್ರಯತ್ನಿಸುತ್ತಿದ್ದಳು ಎಂದು ಪ್ರತ್ಯಕ್ಷದರ್ಶಿಗಳು.
ಆಕೆಯ ಕೂಗು ಕೇಳಿ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು (ಜಿಆರ್‌ಪಿ) ಸ್ಥಳಕ್ಕೆ ಧಾವಿಸಿದರು. ಆ ಮಹಿಳೆಯನ್ನು ರಕ್ಷಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ