
ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ: ದಿ ಡೆವಿಲ್’ (ಕೆಡಿ: ದಿ ಡೆವಿಲ್) ನೆಗೆಟಿವ್ ಕಾರಣಕ್ಕೆ ಸುದ್ದಿ ಆಗುತ್ತಿದೆ. ಈ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಸದ್ಯ ದೇಶಾದ್ಯಂತ ಭಾರಿ ವಿವಾದಕ್ಕೆ ಸಿಲುಕಿದೆ. ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯದ ಈ ಹಾಡಿನ ಸಾಹಿತ್ಯ ಮತ್ತು ನೃತ್ಯ ಸಂಯೋಜನೆಯ ಬಗ್ಗೆ ಈಗ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (ಕಂಗನಾ ರನೌತ್) ತೀವ್ರವಾಗಿ ಕಿಡಿಕಾರಿದ್ದಾರೆ. ಈ ಹಾಡಿನ ಹಿಂದಿ ವರ್ಷನ್ ‘ಸರ್ಕೆ ಚುನರ್ ತೇರಿ ಸರ್ಕೆ’ ಗೆ ಡಿಲೀಟ್ ಆಗಿದೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಕಂಗನಾ ರಣಾವತ್, ‘ಬಾಲಿವುಡ್ ಅಶ್ಲೀಲತೆ, ಗಿಮಿಕ್ ಮತ್ತು ಅಟೆನ್ಷನ್ ಪಡೆಯುವ ತಂತ್ರಗಳಿಗೆ ಮಿತಿ ಮೀರಿದೆ. ಇಡೀ ದೇಶವೇ ಇವರನ್ನು ಖಂಡಿಸುತ್ತಿದೆ. ಆದರೆ ಇವರಿಗೆ ಯಾವುದೇ ನಾಚಿಕೆ ಇಲ್ಲ ಎಂದು ನನಗನ್ನಿಸುತ್ತದೆ. ಇಂತಹ ಅಸಭ್ಯ ಪ್ರದರ್ಶನಗಳ ಬಗ್ಗೆ ಸರ್ಕಾರ ಮತ್ತು ಸೆನ್ಸಾರ್ ಮಂಡಳಿಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬಾಲಿವುಡ್‌ಗೆ ಸರಿಯಾದ ಲಗಾಮು ಹಾಕುವ ಸಮಯ ಬಂದಿದೆ’ ಎಂದು ಗುಡುಗಿದ್ದಾರೆ.
ಈ ಹಾಡಿನ ಸಾಹಿತ್ಯ ಕೇಳಿ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್‌ನಲ್ಲಿ ಖಾತೆ ಬರೆದುಕೊಂಡಿರುವ ಅವರು, ‘ನನ್ನ ಟೈಮ್‌ಲೈನ್‌ನಲ್ಲಿ ಈ ಹಾಡು ಕಂಡಾಗ, ನಾನು ಕೇಳಿದ್ದು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ ಪ್ಲೇ ಮಾಡಿದ್ದೇನೆ. ಕಮರ್ಷಿಯಲ್ ಹಾಡುಗಳ ಸಾಹಿತ್ಯ ಇಷ್ಟು ಕೀಳುಮಟ್ಟಕ್ಕೆ ತಲುಪಿರುವುದು ನಿಜಕ್ಕೂ ಬೇಸರದ ಸಂಗತಿ’ ಎಂದು ಬೇಸರ ಹಂಚಿಕೊಂಡಿದ್ದಾರೆ.
#ವೀಕ್ಷಿಸಿ | ದೆಹಲಿ: ನಟಿ ನೋರಾ ಫತೇಹಿ ಅವರ ಹಾಡಿನ ವಿವಾದದ ಕುರಿತು ಬಿಜೆಪಿ ಸಂಸದೆ ಕಂಗನಾ ರನೌತ್ ಅವರು, “ಬಾಲಿವುಡ್ ಅಸಭ್ಯತೆ, ತಂತ್ರಗಳು ಮತ್ತು ಗಮನ ಸೆಳೆಯುವ ಮೂಲಕ ಎಲ್ಲಾ ಮಿತಿಗಳನ್ನು ಮೀರಿದೆ. ಇಡೀ ದೇಶ ಅವರನ್ನು ಖಂಡಿಸುತ್ತಿದೆ ಮತ್ತು ಛೀಮಾರಿ ಹಾಕುತ್ತಿದೆ. ಆದರೆ ಅವರಿಗೆ ಯಾವುದೇ… pic.twitter.com/o4cyShzoEY
– ANI (@ANI) ಮಾರ್ಚ್ 17, 2026
‘ಕೆಡಿ: ದಿ ಡೆವಿಲ್’ ಈ ಹಾಡಿನ ಆರಂಭಿಕ ಗಂಭೀರ ಸಾಲುಗಳು ಚಿತ್ರದ ಬಿಂಬಿಸುವ ದ್ವಂದ್ವಾರ್ಥದ ಪದಗಳಿಂದ ಕೂಡಿವೆ ಎಂಬ ಆರೋಪ ಕೇಳಿಬಂದಿದೆ. ‘ಆನಂದ್ ಆಡಿಯೋ’ ಈ ಹಾಡನ್ನು ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ತೀವ್ರ ಪ್ರತಿರೋಧ ಮತ್ತು ಸಾರ್ವಜನಿಕರ ಆಕ್ರೋಶದ ಬೆನ್ನಲ್ಲೇ, ಈ ಹಾಡಿನ ಹಿಂದಿ ಆವೃತ್ತಿಯನ್ನು ಯೂಟ್ಯೂಬ್‌ನಿಂದ ಅಧಿಕೃತವಾಗಿ ತೆಗೆದುಹಾಕಲಾಗಿದೆ.
ಇದನ್ನೂ ಓದಿ: ಎ.ಆರ್. ರೆಹಮಾನ್ ಪೂರ್ವಾಗ್ರಹ ಪೀಡಿತ, ದ್ವೇಷಪೂರಿತ ವ್ಯಕ್ತಿ: ಕಂಗನಾ ಆರೋಪ
ನಿರ್ದೇಶಕ ಪ್ರೇಮ್ ಅವರ ಈ ಮಹತ್ವಾಕಾಂಕ್ಷೆಯ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇತ್ತಾದರೂ, ಈ ಹಾಡಿನ ವಿವಾದವು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಿಂದಿ ವರ್ಷನ್ ಮಾತ್ರ ಡಿಲೀಟ್ ಆಗಿದ್ದು, ದಕ್ಷಿಣ ಭಾರತದ ಭಾಷೆಗಳಲ್ಲಿ ಹಾಡು ಲಭ್ಯವಿದೆ. ಅವರ ವಿರುದ್ಧವೂ ದೂರುಗಳಿವೆ. ಚಿತ್ರತಂಡ ಪ್ರತಿಕ್ರಿಯೆ ನೀಡಬೇಕಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.