
ರಾಜ್ಯದ ಜಿಲ್ಲೆಗಳ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆ 8, 55, 960 ರು. ದಾಖಲೆ ಮಾಡುವ ಮೂಲಕ ರಾಜ್ಯದ ಜಿಲ್ಲೆಗಳ ಪೈಕಿ ತಲಾ ಆದಾಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ ತಲಾ ಆದಾಯಕ್ಕೆ ಹೋಲಿಕೆ ಮಾಡಿದಲ್ಲಿ ಬೆಂಗಳೂರು ಗ್ರಾಮಾಂತರದ್ದು 6 ಪಟ್ಟು ಅಧಿಕವಾಗಿದೆ. ದಕ್ಷಿಣ ಕನ್ನಡ (6, 26, 279 ರು), ಉಡುಪಿ (6, 00, 683 ರು) , ಚಿಕ್ಕಮಗಳೂರು (4, 94, 787 ರು) ಶಿವಮೊಗ್ಗ (3, 89, 743 ರು) ದಾಖಲಾಗಿದೆ.
ಕಲಬುರಗಿ ಹೊರತುಪಡಿಸಿ ಕಲ್ಯಾಣ ಕರ್ನಾಟಕದ ಇನ್ನುಳಿದ ಯಾದಗಿರಿ (1, 64, 388 ರು), ರಾಯಚೂರು (1, 78, 888 ರು) ಕೊಪ್ಪಳ (1, 81, 152) ಬೀದರ್ (1, 85, 079 ರು) , ವಿಜಯನಗರ (1, 93, 230 ರು) ಜಿಲ್ಲೆಗಳ ತಲಾ ಆದಾಯವೂ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಕೊನೆಯಲ್ಲಿದೆ.
ಕಲಬುರಗಿ ಜೊತೆಗೇ ರಾಜ್ಯದ ಬೆಳಗಾವಿ (1, 83, 271 ರು), ವಿಜಯಪುರ (1, 87, 429 ರು) ಕೂಡಾ ತಲಾ ಆದಾಯದಲ ಮೊತ್ತ ತಗ್ಗಿದೆ. ಬಳ್ಳಾರಿ ಜಿಲ್ಲೆ ಮಾತ್ರ ತಲಾ ಆದಾಯದಲ್ಲಿ 3, 24, 111 ರು ದಖಲಿಸಿ 11 ನೇ ಸ್ಥಾನದಲ್ಲಿದೆ.