
ಈ ದಿನ ದಕ್ಷಿಣಾಮೂರ್ತಿ ಸ್ತೋತ್ರವನ್ನು ಪಠಿಸಿ. ಜ್ಞಾನ ಮತ್ತು ವೃತ್ತಿ ಏಳಿಗೆಗಾಗಿ ಗುರು ದಕ್ಷಿಣಾಮೂರ್ತಿಯ ಪ್ರಾರ್ಥನೆಯಿಂದ ಅನುಕೂಲವಾಗುತ್ತದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಯಾವುದೇ ಪ್ರಯತ್ನದಲ್ಲಿ ಗೆಲುವು ಕಾಣಲಿಲ್ಲ. ಅಚಾನಕ್ ಸಿಗುವಂತಹ ಹಳೆಯ ಸ್ನೇಹಿತರು ಹೇಳುವ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ. ಅವರೇನಾದರೂ ವ್ಯಾಪಾರ ಅಥವಾ ವೃತ್ತಿಗೆ ಸಂಬಂಧಿಸಿದ ಯಾವುದಾದರೂ ಅವಕಾಶಗಳ ಬಗ್ಗೆ ತಿಳಿಸಿದಲ್ಲಿ ಆ ಬಗ್ಗೆ ತಕ್ಷಣವೇ ಪ್ರತಿಕ್ರಿಯಿಸಿ. ಯಾವುದೇ ಕಾರಣಕ್ಕೂ ಆಮೇಲೆ ಮಾಡಿದರಾಯಿತು, ನೋಡಿದರಾಯಿತು ಎಂಬ ಧೋರಣೆಯನ್ನು ತೋರಿಸಬೇಡಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ನೀವು ಈ ದಿನ ಇತರರ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳಿ ಅಥವಾ ಅವರ ಪರವಾಗಿ ಮಾತುಕತೆ ನಡೆಸುತ್ತೀರಿ ಎಂದಾದಲ್ಲಿ ಯಶಸ್ಸು ಕಾಣುವ ಸಾಧ್ಯತೆಗಳು ಬಹಳ ಹೆಚ್ಚಿವೆ. ನಿಮ್ಮ ಪ್ರಭಾ ವಲಯ ವಿಸ್ತರಣೆಯಾಗಲಿದೆ. ಮಕ್ಕಳ ಸಲುವಾಗಿ ವಾಹನಗಳನ್ನು ಖರೀದಿಸುವಂಥ ಯೋಗ ಇದೆ. ಇನ್ನು ಅವರ ಸಲುವಾಗಿ ಪ್ರವಾಸಗಳ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ನಿಮ್ಮಲ್ಲಿ ಕೆಲವು ಬಸ್ಸುಗಳು, ರೈಲುಗಳು, ವಿಮಾನಗಳಲ್ಲಿ ಸೀಟ್ ಇಂತಹದನ್ನು ಬುಕ್ ಮಾಡಬಹುದು ಅಥವಾ ಪ್ರವಾಸಗಳನ್ನು ಸಹ ಬುಕ್ ಮಾಡುವ ಸಾಧ್ಯತೆಗಳು ಈ ದಿನದಲ್ಲಿ ಇವೆ. ಸಂಗಾತಿಯ ಕಡೆಯಿಂದ ಸಹಾಯ ಕೇಳಿಕೊಂಡು ಬರಬಹುದು. ನಿಮ್ಮಲ್ಲಿ ಈಗಿರುವ ಉದ್ಯೋಗ, ವೃತ್ತಿ ಅಥವಾ ವ್ಯಾಪಾರದ ಜೊತೆಗೆ ಇನ್ನೊಂದು ವ್ಯವಹಾರ ಮಾಡುವ ಆಲೋಚನೆ ಮಾಡಲಿದ್ದೇನೆ.
ಲೇಖನ- ಸ್ವಾತಿ ಎನ್.ಕೆ.