ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 18ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 18ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6 ರ ಮಾರ್ಚ್ 18 ರ ದಿನಭವಿಷ್ಯ

ಈ ದಿನ ಯಾವುದೇ ಮುಖ್ಯ ಕೆಲಸಕ್ಕಾಗಿ ತೆರಳುವ ಮುನ್ನ ಮನೆಯ ದೇವತೆಗೆ ಕುಂಕುಮಾರ್ಚನೆ ಮಾಡುವುದು ಸೌಭಾಗ್ಯ ತರುತ್ತದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಸಂಕೋಚ ಸುಮ್ಮನಿರುವುದರಲ್ಲಿ ಅರ್ಥವಿಲ್ಲ ಎಂದೆನಿಸಲಿದೆ. ನಿಮ್ಮ ಎಲ್ಲ ವಿಚಾರಗಳಿಗೆ, ಸಂಗತಿಗಳಿಗೆ ಮೂಗು ತೂರಿಕೊಂಡು ಬರುತ್ತಿದ್ದ ಅಥವಾ ಬರುತ್ತಿರುವ ವ್ಯಕ್ತಿಗಳಿಗೆ ಮುಲಾಜಿಲ್ಲದೆ ಎಚ್ಚರಿಕೆ ನೀಡುವ ಸಾಧ್ಯತೆಗಳಿವೆ. ಇಷ್ಟು ಸಮಯ ಯಾವುದೋ ಸಂಕೋಚದಿಂದ ಹೇಳದೆ ಉಳಿದ ಸಂಗತಿಗಳನ್ನು ಏಕಾಏಕಿ ಹೇಳಿ ಮುಗಿಸಿದೆ. ನಿಮ್ಮಲ್ಲಿ ಯಾರ ಪ್ರೀತಿ- ಪ್ರೇಮ ವಿಚಾರಗಳನ್ನು ಹೇಳಬೇಕು ಎಂದುಕೊಳ್ಳಲೇ ಬೇಕು

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಎಲ್ಲ ಜವಾಬ್ದಾರಿಗಳು ಒಂದೇ ಸಮನೆ ಬರುವುದರಿಂದ ಈ ದಿನ ಬಿಡುವೆ ಸಿಗದಷ್ಟರ ಮಟ್ಟಿಗೆ ಕೆಲಸಗಳು ಮೈ ಮೇಲೆ ಬೀಳಲಿವೆ. ಅದರೊಂದಿಗೆ ನೀವು ಪಡುವಂಥ ಶ್ರಮಕ್ಕೆ ತಕ್ಕ ಪ್ರತಿಫಲವೂ ದೊರೆಯಲಿದೆ. ಬಹಳ ಸಮಯದಿಂದ ಖರೀದಿಸಬೇಕು ಎಂದುಕೊಳ್ಳುತ್ತಿದ್ದ ಫೋನ್, ಲ್ಯಾಪ್ ಟಾಪ್, ಟ್ಯಾಬ್ ಲೆಟ್ ಅಥವಾ ಇಂಥ ಯಾವುದಾದರೂ ವಸ್ತುವನ್ನು ಈ ದಿನ ಕೊಳ್ಳುವ ಯೋಗ ನಿಮ್ಮ ಪಾಲಿಗೆ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕ್ರೆಡಿಟ್ ಕಾರ್ಡ್ ಬಳಸಿಯೋ ಅಥವಾ ಇಎಂಐ ಆಗಿ ಕನ್ವರ್ಟ್ ಮಾಡಿಸಿಯೋ ಕೆಲವು ಖರೀದಿ ಮಾಡುವ ಸಾಧ್ಯತೆಗಳಿವೆ. ನೆನಪಿನಲ್ಲಿಡಿ, ಸಾಲ ದೊರೆಯುತ್ತದೆ ಅಥವಾ ಕಡಿಮೆ ಬಡ್ಡಿಗೆ ಅಥವಾ ಬಡ್ಡಿಯೇ ಇಲ್ಲದೆ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಅಗತ್ಯವನ್ನು ಮೀರಿ, ಖರೀದಿ ಮಾಡುವುದಕ್ಕೆ ಹೋಗಬೇಡಿ. ಮಕ್ಕಳ ಅಥವಾ ಕುಟುಂಬದಲ್ಲಿನ ಕಿರಿಯರ ಶಿಕ್ಷಣದ ವಿಚಾರ ವಿಪರೀತ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ಇದೇ ಕಾರಣಕ್ಕೆ ನೀವೇ ಸಾಲ ಮಾಡಬೇಕಾಗಬಹುದು.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *