
ಈ ದಿನ ನೀವು ಹನುಮಾನ್ ಚಾಲೀಸಾ ಪಠಿಸುವುದರಿಂದ ಮಾತು ಮತ್ತು ಆರೋಗ್ಯದ ಏಳುಪೇರು ನಿಯಂತ್ರಣಕ್ಕೆ ಬರುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ಆಯಾ ಮಾದರಿಗೆ ತಕ್ಕಂತೆ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ನಿಮ್ಮಲ್ಲಿ ಯಾರಿಗೆ ಆಸ್ತಮಾ ಅಥವಾ ಸಮಸ್ಯೆ ಇರುತ್ತದೋ ಅಂಥವರಿಗೆ ಅದು ಉಲ್ಬಣಿಸುವ ಸಾಧ್ಯತೆ ಇದೆ. ನಿಮಗೆ ಮುಖ್ಯವಾಗಿ ಯಾವ ಆಹಾರ ಪದಾರ್ಥವು ಅಲರ್ಜಿಯೋ ಅಂತಹ ಪದಾರ್ಥಗಳ ಸೇವನೆಯಿಂದ ದೂರವಿರಬೇಕು.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಈ ದಿನ ನಿಮ್ಮ ಬಾಯಿಯ ಕಾರಣಕ್ಕೆ ತೊಂದರೆ ಮಾಡಿಕೊಳ್ಳಬಹುದು. ಅದು ಬಾಯಿ ಚಪ್ಪಲಕ್ಕೆ ಬಿದ್ದು, ವಿಪರೀತ ರುಚಿರುಚಿಯಾದದ್ದನ್ನು ಸೇವಿಸಿ ಸಮಸ್ಯೆ ಮಾಡಿಕೊಳ್ಳುತ್ತೀರೋ ಅಥವಾ ಆಡಬಾರದ ಮಾತು ಹಾಗೂ ಆಡಬಾರದ ಸ್ಥಳದಲ್ಲಿ ಆಡಿ, ತೊಂದರೆ ಮೈ ಮೇಲೆ ಎಳೆದುಕೊಳ್ಳುತ್ತೀರೋ ಒಟ್ಟಿನಲ್ಲಿ ನೆಮ್ಮದಿಯಂತೂ ಇಲ್ಲದಂತಾಗುತ್ತದೆ. ಇನ್ನು ಕೆಲವರಿಗೆ ಕೂದಲು ಹಾಗೂ ಚರ್ಮಕ್ಕೆ ಸಮಸ್ಯೆ ಕಾಡಬಹುದು. ಅಥವಾ ನೀವು ಸೂಚನೆಯಿಂದ ಸಮಸ್ಯೆಗೆ ಹೋಗಬಹುದು.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ನಿಮ್ಮ ಆಲೋಚನೆಗೆ ಮನ್ನಣೆ ದೊರೆಯಲಿದೆ. ನನ್ನ ಮಾತಿಗೆ ಯಾವ ಮಹತ್ವವಿದೆ ಎಂದು ಇಷ್ಟು ಸಮಯ ನೀವೇನಾದರೂ ಇದ್ದಲ್ಲಿ ಈ ದಿನ ಅಭಿಪ್ರಾಯವನ್ನೇ ಬದಕುವಂಥ ಬೆಳವಣಿಗೆಗಳು ಆಗಲಿವೆ. ಯಾರು ನಿಮ್ಮ ಬಗ್ಗೆ ಲಘುವಾಗಿ ಪರಿಗಣಿಸುತ್ತಾರೋ ಅಂಥವರಿಗಂತೂ ಭಾರೀ ಅಚ್ಚರಿ ಮೂಡುವಂತೆ ಆಗುತ್ತದೆ. ಒಂದು ವೇಳೆ ನೀವೇನಾದರೂ ಆಸ್ತಿ ಮಾರಾಟಕ್ಕೆ ಇಟ್ಟಿದ್ದಲ್ಲಿ ನೀವು ನಿರೀಕ್ಷಿಸಿದಂಥ ಅಥವಾ ನಿಮ್ಮಲ್ಲಿ ಕೆಲವರಿಗೆ ನಿರೀಕ್ಷೆ ಮೀರಿ ಬೆಲೆಯು ದೊರೆಯುತ್ತದೆ.
ಲೇಖನ- ಸ್ವಾತಿ ಎನ್.ಕೆ.