3 ತಿಂಗ್ಳಿಗಿಂತ ದೊಡ್ಡ ಮಗು ದತ್ತು ಪಡೆದ್ರೂ ಮಾತೃತ್ವ ರಜೆಗೆ ಅರ್ಹ- ವಿವಾದಿತ ಅಂಶ ಸುಪ್ರೀಂನಿಂದ ರದ್ದು | Adoptive Mothers Eligible For Maternity Leave Even If Child Is Over 3 Months

3 ತಿಂಗ್ಳಿಗಿಂತ ದೊಡ್ಡ ಮಗು ದತ್ತು ಪಡೆದ್ರೂ ಮಾತೃತ್ವ ರಜೆಗೆ ಅರ್ಹ- ವಿವಾದಿತ ಅಂಶ ಸುಪ್ರೀಂನಿಂದ ರದ್ದು | Adoptive Mothers Eligible For Maternity Leave Even If Child Is Over 3 Months



3 ತಿಂಗ್ಳಿಗಿಂತ ದೊಡ್ಡ ಮಗು ದತ್ತು ಪಡೆದ್ರೂ ಮಾತೃತ್ವ ರಜೆಗೆ ಅರ್ಹ- ವಿವಾದಿತ ಅಂಶ ಸುಪ್ರೀಂನಿಂದ ರದ್ದು | Adoptive Mothers Eligible For Maternity Leave Even If Child Is Over 3 Months

3 ತಿಂಗಳಿಗಿಂತ ದೊಡ್ಡ ಮಕ್ಕಳನ್ನು ದತ್ತುಪಡೆದ ಪೋಷಕರು ಮಾತೃತ್ವ ರಜೆಗೆ ಅರ್ಹರಲ್ಲ ಎಂಬ ನಿಯಮ ತಾರತಮ್ಯ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಇಂಥ ನಿಯಮವನ್ನು ರದ್ದುಪಡಿಸಿದೆ. ಅಲ್ಲದೆ ಇದಕ್ಕಿಂತ ಮೇಲಿನ ವಯಸ್ಸಿನ ಮಕ್ಕಳನ್ನು ದತ್ತುಪಡೆದವರೂ ಕೂಡಾ ರಜೆಗೆ ಅರ್ಹರು ಎಂದು ಮಹತ್ವದ ತೀರ್ಪು ನೀಡಿದೆ.

ನವದೆಹಲಿ: 3 ತಿಂಗಳಿಗಿಂತ ದೊಡ್ಡ ಮಕ್ಕಳನ್ನು ದತ್ತುಪಡೆದ ಪೋಷಕರು ಮಾತೃತ್ವ ರಜೆಗೆ ಅರ್ಹರಲ್ಲ ಎಂಬ ನಿಯಮ ತಾರತಮ್ಯ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಇಂಥ ನಿಯಮವನ್ನು ರದ್ದುಪಡಿಸಿದೆ. ಅಲ್ಲದೆ ಇದಕ್ಕಿಂತ ಮೇಲಿನ ವಯಸ್ಸಿನ ಮಕ್ಕಳನ್ನು ದತ್ತುಪಡೆದವರೂ ಕೂಡಾ ರಜೆಗೆ ಅರ್ಹರು ಎಂದು ಮಹತ್ವದ ತೀರ್ಪು ನೀಡಿದೆ.

3 ತಿಂಗಳೊಗಿನ ಮಗುವನ್ನು ದತ್ತು ಪಡೆದರೆ ಮಾತ್ರ ಮಾತೃತ್ವ ರಜೆಗೆ ಅರ್ಹರು ಎನ್ನುವ ನೀತಿಗೆ ಸಂಬಂಧಿಸಿದ

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್‌ ಅವರ ಪೀಠವು ಇದು ಸಂವಿಧಾನ ನಿಯಮಗಳ ಉಲ್ಲಂಘನೆ ಎಂದು ಅಭಿಪ್ರಾಯ ಪಟ್ಟಿದೆ.

ವಯಸ್ಸಿನ ಆಧಾರದಲ್ಲಿ ಮಾತೃತ್ವ ರಜೆ ಅನ್ವಯವಾಗುವುದಿಲ್ಲ

ಮುಂದುವರೆದಂತೆ ದತ್ತು ಪಡೆದ ಮಗುವಿನ ವಯಸ್ಸಿನ ಆಧಾರದಲ್ಲಿ ಮಾತೃತ್ವ ರಜೆ ಅನ್ವಯವಾಗುವುದಿಲ್ಲ. 3 ತಿಂಗಳೊಳಗಿನ ಮಗು ದತ್ತು ಪಡೆದರೂ, 3 ತಿಂಗಳ ಮೇಲ್ಪಟ್ಟ ಮಗುವಿನ ದತ್ತು ಪಡೆದ ತಾಯಿಯೂ ಮಾತೃತ್ವ ರಜೆಗೆ ಅರ್ಹಳು. ಮಕ್ಕಳನ್ನು ದತ್ತು ಪಡೆಯುವ ತಾಯಂದಿರೂ ಸಹ ಜೈವಿಕ ತಾಯಂದಿರಂತೆ ಹೆರಿಗೆ ಸೌಲಭ್ಯಗಳನ್ನು ಪಡೆಯುವ ಹಕ್ಕಿದೆ, ಅಲ್ಲದೇ ಆಕೆಗೂ ಮಾತೃತ್ವ ಸೌಲಭ್ಯಗಳನ್ನು ನೀಡಬೇಕು ಎಂದು ಮಹತ್ವದ ತೀರ್ಪು ನೀಡಿದೆ.

ಮಾತೃತ್ವ ರಜೆ ಎನ್ನುವುದು ಹೆರಿಗೆಯ ಪ್ರಕ್ರಿಯೆಗಳಿಗೆ ಸಂಬಂಧಿಸಿದಲ್ಲ

ಅಲ್ಲದೇ ‘ಮಾತೃತ್ವ ರಜೆ ಎನ್ನುವುದು ಹೆರಿಗೆಯ ಪ್ರಕ್ರಿಯೆಗಳಿಗೆ ಸಂಬಂಧಿಸಿದಲ್ಲ, ಬದಲಾಗಿ ತಾಯ್ತನಕ್ಕೆ ಸಂಬಂಧ ಪಟ್ಟಿದ್ದು. ಜನ್ಮ ನೀಡಿಲ್ಲ ಎಂದ ಮಾತ್ರಕ್ಕೆ ತಾಯ್ತನದ ಉದ್ದೇಶಗಳು ಬದಲಾಗಲ್ಲ. ಪಾತ್ರ ಉದ್ದೇಶಗಳು ಎಲ್ಲ ತಾಯಂದಿರನ್ನು, ಎಲ್ಲ ವಯಸ್ಸಿನ ಮಕ್ಕಳನ್ನು ದತ್ತು ಪಡೆದುಕೊಂಡವರಲ್ಲಿಯೂ ಸಮಾನಾಗಿರುತ್ತದೆ. ಮಗು ಮತ್ತು ತಾಯಿಯ ಭಾವನಾತ್ಮಕ, ಮಾನಸಿಕ ಹೊಂದಾಣಿಕೆ, ಕೌಟುಂಬಿಕ ವಾತವಾರಣಕ್ಕೆ ಹೊಂದಿಕೊಳ್ಳಲು ಇಂತಹ ರಜೆಗಳು ಅವಶ್ಯಕ’ ಎಂದು ಅಭಿಪ್ರಾಯ ಪಟ್ಟಿದೆ.

ಇದೇ ವೇಳೆ ಪಿತೃತ್ವ ರಜೆಯನ್ನು ನೀಡುವ ಬಗ್ಗೆಯೂ ಕಾನೂನು ತರುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತಿಳಿಸಿದೆ.



Source link

Leave a Reply

Your email address will not be published. Required fields are marked *