ನಾರಾಯಣ ಆಸ್ಪತ್ರೆಯಿಂದ ಡ್ರೋನ್‌ಲ್ಲಿ ಲ್ಯಾಬ್‌ಗೆ ಸ್ಯಾಂಪಲ್ ಸಾಗಣೆ! 4 ಕಿ.ಮೀ ದೂರ, ಹತ್ತೇ ನಿಮಿಷದಲ್ಲಿ ರೀಚ್! | Bengaluru First Narayana Health Uses Drones To Transport Lab Samples

ನಾರಾಯಣ ಹೆಲ್ತ್ ಸಮೂಹವು ಬೆಂಗಳೂರಿನಲ್ಲಿ ರೋಗಿಗಳ ಆರೋಗ್ಯ ತಪಾಸಣೆಯ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಸಾಗಿಸಲು ಡ್ರೋನ್ ಬಳಕೆಯನ್ನು ಆರಂಭಿಸಿದೆ. ಏರ್‌ಬೌಂಡ್ ಸಂಸ್ಥೆ ಅಭಿವೃದ್ಧಿಪಡಿಸಿದ ಈ ಡ್ರೋನ್‌ಗಳು, ಚಂದಾಪುರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಕೇವಲ 10 ನಿಮಿಷಗಳಲ್ಲಿ ಸ್ಯಾಂಪಲ್‌ಗಳನ್ನು ತಲುಪಿಸಿದೆ.

ಬೆಂಗಳೂರು (ಮಾ.18): ರೋಗಿಗಳ ಆರೋಗ್ಯ ತಪಾಸಣೆಯ ಸ್ಯಾಂಪಲ್‌ಗಳನ್ನು ಆಸ್ಪತ್ರೆಯಿಂದ ಪ್ರಯೋಗಾಲಯಕ್ಕೆ ರವಾನಿಸಲು ನಾರಾಯಣ ಹೆಲ್ತ್ ಸಮೂಹವು ಡ್ರೋನ್ ಬಳಕೆಯನ್ನು ಆರಂಭಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣ ಹೆಲ್ತ್‌ನ ಸಂಸ್ಥಾಪಕ ಡಾ. ದೇವಿ ಪ್ರಸಾದ್ ಶೆಟ್ಟಿ, ಏರ್‌ಬೌಂಡ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಡ್ರೋನ್ ಮೂಲಕ ಚಂದಾಪುರದ ನಾರಾಯಣ ಹೆಲ್ತ್‌ ಕ್ಲಿನಿಕ್‌ನಿಂದ 4 ಕಿ.ಮೀ ದೂರದ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಕೇಂದ್ರ ಪ್ರಯೋಗಾಲಯಕ್ಕೆ 10 ನಿಮಿಷಗಳ ಒಳಗೆ ಸ್ಯಾಂಪಲ್‌ಗಳನ್ನು ರವಾನಿಸಲಾಗುತ್ತದೆ ಎಂದರು.

ಎರಡು ತಿಂಗಳಿಂದ ಪ್ರಾಯೋಗಿಕವಾಗಿ ಡ್ರೋನ್ ಬಳಕೆ ಆರಂಭಿಸಲಾಗಿದ್ದು, 700ಕ್ಕೂ ಹೆಚ್ಚು ಬಾರಿ ಡ್ರೋನ್‌ 40 ಸ್ಯಾಂಪಲ್‌ಗಳೊಂದಿಗೆ ಹಾರಾಟ ನಡೆಸಿದೆ. ಮುಂದಿನ ದಿನಗಳಲ್ಲಿ ಬನಶಂಕರಿ ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವೆ ಈ ಸೇವೆ ಆರಂಭಿಸುವ ಉದ್ದೇಶವಿದೆ ಎಂದು ಶೆಟ್ಟಿ ತಿಳಿಸಿದರು.

ಏರ್‌ಬೌಂಡ್ ಸಂಸ್ಥಾಪಕ ನಮನ್ ಪುಷ್ಪ್ ಮಾತನಾಡಿ, ನಗರದ ಟ್ರಾಫಿಕ್‌ನಲ್ಲಿ ಸ್ಯಾಂಪಲ್ ಸಾಗಣೆಗೆ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಡ್ರೋನ್ ಮೂಲಕ ಕೆಲವೇ ನಿಮಿಷಗಳಲ್ಲಿ ಸಾಗಿಸಬಹುದು ಎಂದರು.

ಒಂದೂವರೆ ಕೆ.ಜಿ ತೂಕದ ಡ್ರೋನ್, 1 ಕೆ.ಜಿ ತೂಕದ ಸ್ಯಾಂಪಲ್ ಅನ್ನು ಸಾಗಣೆ ಮಾಡಬಲ್ಲದು. 120 ಅಡಿ ಎತ್ತರದವರೆಗೆ ಹಾರಾಡುವ ಡ್ರೋನ್ ಅನ್ನು ಏರ್‌ಬೌಂಡ್ ಸಿಬ್ಬಂದಿಯೇ ನಿರ್ವಹಿಸುತ್ತಾರೆ. ಹಗಲು ವೇಳೆ ಮಾತ್ರ ಇದು ಕಾರ್ಯಾಚರಣೆ ನಡೆಸುತ್ತದೆ.

Source link

Leave a Reply

Your email address will not be published. Required fields are marked *