
ಅನುಷ್ಕಾ ಶೆಟ್ಟಿ ಅವರಿಗೆ ಈಗ 44 ವರ್ಷ. ಅವರು ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರು ವಿವಾಹದ ಕಾರಣಕ್ಕೆ ಸುದ್ದಿ ಆಗೋದಕ್ಕಿಂತ ಹೆಚ್ಚಾಗಿ, ವಿವಾಹದ ಕಾರಣಕ್ಕೆ ಸುದ್ದಿ ಆಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಅವರು ವಿವಾಹವಾಗುತ್ತಾರೆ ಎಂಬ ಸುದ್ದಿ ಕೇಳಿ ಬರುತ್ತಲೇ ಇದೆ. ಈಗ ಮತ್ತೊಮ್ಮೆ ಅನುಷ್ಕಾ ವಿವಾಹ ವಿಷಯ ಚರ್ಚೆಗೆ ಕಾರಣ ಆಗಿದೆ.
ಸೆಲೆಬ್ರಿಟಿಗಳ ಜೀವನದ ಬಗ್ಗೆ ಅಭಿಮಾನಿಗಳು ಕಣ್ಣಿಡುತ್ತಾರೆ. ಸಾರ್ವಜನಿಕವಾಗಿ ಯಾರದ್ದಾದರೂ ಜೊತೆಗೆ ಕಾಣಿಸಿಕೊಂಡರೆ ವದಂತಿ ಹೆಚ್ಚುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಅನ್‌ಫಾಲೋ ಮಾಡಿದ್ದು, ಫಾಲೋ ಮಾಡಿದ್ದು ನೋಡಿ ಅನೇಕರು ಡಿಕೋಡ್ ಮಾಡಿದ್ದು ಇದೆ. ಅನುಷ್ಕಾ ವಿಷಯವೂ ಹಾಗೆಯೇ ಆಗಿದೆ.
ಅನುಷ್ಕಾ ಶೆಟ್ಟಿ ಅವರು ಪ್ರಭಾಸ್ ಜೊತೆ ಡೇಟ್ ಮಾಡುತ್ತಿದ್ದಾರೆ ಎಂದು ಹೇಳಿದರು. ಆದರೆ, ಈ ವಿಷಯ ನಿಜವಾಗಿಲ್ಲ. ಅವರು ಮಧ್ಯದಲ್ಲೇ ದೂರ ಆದರು. ಈಗ ಅನುಷ್ಕಾ ಆಗಲಿ, ಪ್ರಭಾಸ್ ಆಗಲಿ ಮದುವೆ ಆಗಿಲ್ಲ.ಪ್ರಭಾಸ್ ಅವರ ಮದುವೆ ವಿಷಯ ಬಂದಾಗ ಉತ್ತರಿಸೋಕೆ ಹೋಗಲ್ಲ. ಆದರೆ, ಅನುಷ್ಕಾ ವಿಷಯ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ.
ಅನುಷ್ಕಾ ಶೆಟ್ಟಿ ಅವರು ಬಾರಿ ಉದ್ಯಮಿಯೊಬ್ಬರ ಜೊತೆ ಮದುವೆ ಆಗಲಿದ್ದಾರೆ ಎಂದು ಹೇಳಿದರು. ಆದರೆ, ಈ ವಿಷಯವನ್ನು ನಟಿ ಅಧಿಕೃತ ಮಾಡಿಲ್ಲ. ಮನೆಯವರು ಈ ಬಗ್ಗೆ ಮಾತುಕತೆ ಎನ್ನುತ್ತಿದ್ದಾರೆ. ಸದ್ಯ ಹರಿದಾಡುತ್ತಿರುವ ವಿಷಯ ನಿಜವೇ ಅಥವಾ ಹತ್ತರಲ್ಲಿ ಹಂದನೆಯ ವದಂತಿಯಾಗಿ ಇಲ್ಲಿ ಕೊನೆಯಾಗಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ಇದನ್ನೂ ಓದಿ: ಮತ್ತೆ ಕೇಳಿಬಂತು ಅನುಷ್ಕಾ ಶೆಟ್ಟಿ ಮದುವೆ ವಿಷಯ: ಈ ಬಾರಿ ಪ್ರಭಾಸ್ ಹೆಸರಿಲ್ಲ
ಅನುಷ್ಕಾ ಶೆಟ್ಟಿ ಅವರು ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾದಿಂದ ದೊಡ್ಡ ಯಶಸ್ಸು ಕಂಡರು. ಆದರೆ, ಈ ಯಶಸ್ಸನ್ನು ಅವರು ಬಳಸಿಕೊಂಡಿಲ್ಲ. ಅವರು ದೊಡ್ಡ ಮಟ್ಟದಲ್ಲಿ ಗೆಲವು ಸಾಧಿಸಲು ಸಾಧ್ಯವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.