
‘ಧುರಂಧರ 2’ ಸಿನಿಮಾಗೆ (ಧುರಂಧರ 2 ) ಕೊನೆಯ ಕ್ಷಣದಲ್ಲಿ ತೊಂದರೆ ಎದುರಾಗಿದೆ. ಸಿನಿಮಾದ ಕೆಲವು ದೃಶ್ಯಗಳಿಗೆ ಕತ್ತರಿ ಹಾಗೂ ಬದಲಾವಣೆ ಮಾಡಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಕನ್ನಡ, ತೆಲುಗು ಸೇರಿದಂತೆ ಮೊದಲಾದ ಭಾಷೆಗಳಲ್ಲಿ ಸಿನಿಮಾ ಇಂದು ಪ್ರೀಮಿಯರ್ ಆಗೋದು ಅನುಮಾನ ಎಂದು ಹೇಳಲಾಗುತ್ತಿದೆ. ಇದರಿಂದ ಕನ್ನಡ, ತೆಲುಗು ವರ್ಷನ್ ಬುಕ್ ಮಾಡಿದವರಿಗೆ ಬೇಸರವಾಗಿದೆ. ಬೆಂಗಳೂರಿನಲ್ಲಿ ಕನ್ನಡ ವರ್ಷನ್ ಪ್ರೀಮಿಯರ್ ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ.
ಮಾರ್ಚ್ 17ರಂದು ‘ಧುರಂಧರ 2’ ಚಿತ್ರಕ್ಕೆ ಪ್ರಮಾಣ ಪತ್ರ ಸಿಕ್ಕಿದೆ. 21 ಬದಲಾವಣೆಗಳನ್ನು ಮಾಡಲು ಸೂಚಿಸಲಾಗಿದೆ. ಅತ್ಯಂತ ಹಿಂಸಾತ್ಮಕ ವಿಷಯಗಳನ್ನು ತೆಗೆಯಲು ಸೂಚಿಸಲಾಗಿದೆ. ಸದ್ಯ ಹಿಂದಿ ವರ್ಷನ್ ಬಗ್ಗೆ ತಂಡದವರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಅದರ ಎಡಿಟ್ ಮಾಡಿ ಯುಎಫ್‌ಓಗೆ ಅಪ್‌ಲೋಡ್ ಮಾಡುವ ಭರದಲ್ಲಿ ತಂಡದವರು ಇದ್ದಾರೆ. ಹೀಗಾಗಿ, ಇನ್ನು, ಕನ್ನಡ ಹಾಗೂ ತೆಲುಗು ವರ್ಷನ್ ಇಂದು ಪ್ರದರ್ಶನ ಕಾಣೋದು ಅನುಮಾನ ಎನ್ನುತ್ತಿದ್ದಾರೆ. ಸದ್ಯ ವೈಜಿಆರ್ ಮಾಲ್ ಅಲ್ಲಿ ಕನ್ನಡದ ಒಂದು ಶೋ ಇದೆ. ಅದು ಕೂಡ ಶೀಘ್ರವೇ ಕ್ಯಾನ್ಸಲ್ ಆಗಬಹುದು.
ಧುರಂಧರ 2
ಮೊದಲಾರ್ಧದ ಡಿಜಿಟಲ್ ಕಾಪಿ ಮಾತ್ರ ಪ್ರಸ್ತುತವಾಗಿದೆ. ಎರಡನೇ ಭಾಗದ ಎಡಿಟಿಂಗ್ ನಡೆಯುತ್ತಿದೆ. ಹೀಗಾಗಿ, ಹಿಂದಿ ವರ್ಷನ್ ಪ್ರೀಮಿಯರ್‌ಗೂ ತೊಂದರೆಯಾಗುತ್ತದೆ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ‘ಧುರಂಧರ 2’ ಸಿನಿಮಾದ ಭೀಕರ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ: ತಗ್ಗಿತು ಚಿತ್ರದ ಅವಧಿ
ಬೆಂಗಳೂರಿನಲ್ಲಿ ಕನ್ನಡ ವರ್ಷನ್ ಪ್ರೇಮಿಗಳನ್ನು ಇಂದು ನಡೆಸಲಾಯಿತು. ಪಿವಿಆರ್ ಗೋಪಾಲನ್ ಅಲ್ಲಿ ಶೋ ನೀಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಇದನ್ನು ಕ್ಯಾನ್ಸಲ್ ಮಾಡಿರೋದು ಚರ್ಚೆ ಹುಟ್ಟುಹಾಕಿದೆ. ಹೀಗಾಗಿ, ಇಂದು ಶೋ ಕನ್ನಡ, ತೆಲುಗು ವರ್ಷಗಳ ಪ್ರದರ್ಶನಗಳಲ್ಲಿ ಕಾಣೋದು ಅನುಮಾನವೇ.
ಕೊನೆಯ ಕ್ಷಣದ ಉದ್ವೇಗ #ಧುರಂಧರ ಪ್ರತೀಕಾರ!
ಚಿತ್ರದ ಡಿಸಿಪಿ(ಡಿಜಿಟಲ್ ಸಿನಿಮಾ ಪ್ಯಾಕೇಜ್) 1ನೇ ಅರ್ಧವನ್ನು ಮಾತ್ರ ವಿತರಿಸಲಾಗಿದೆ-2ನೇ ಅರ್ಧ ಇನ್ನೂ ಇಲ್ಲ. ಅವರು ಈಗ ಕಳುಹಿಸುತ್ತಿದ್ದಾರೆ.
ಕೊನೆಯ ನಿಮಿಷದ ಪರಿಶೀಲನೆಗಳು ಮತ್ತು ಮರು-ಸಂಪಾದನೆಗಳು ಈ ಅವ್ಯವಸ್ಥೆಯನ್ನು ಸೃಷ್ಟಿಸಿವೆ.
ತಂಡವು ಈಗ ಸಂಪೂರ್ಣ ಫೈರ್-ಸ್ಟಾರ್ ಮೋಡ್ನಲ್ಲಿದೆ, ಆದರೆ…
— ತಾರಕ್(ತಾರಕ್ ರಾಮ್) (@tarakviews) ಮಾರ್ಚ್ 18, 2026
‘ಧುರಂಧರ 2’ ಸಿನಿಮಾದ ರನ್ ಟೈಮ್ ಈ ಮೊದಲು 3 ಗಂಟೆ 55 ನಿಮಿಷ ಇತ್ತು. ಹೊಸ ವರ್ಷಕ್ಕೆ ಮೂರು ಗಂಟೆ 49 ನಿಮಿಷ ಇದೆ. ರಣವೀರ್ ಸಿಂಗ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಆದಿತ್ಯ ಧಾರ್ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಸೆನ್ಸಾರ್ ಪ್ರಮಾಣಪತ್ರದ ತೊಂದರೆಯನ್ನು ಅನೇಕ ಸಿನಿಮಾಗಳು ಎದುರಿಸುತ್ತಿವೆ. ‘ಧುರಂಧರ 2’ ಕೂಡ ಸಮಸ್ಯೆಗೆ ಒಳಗಾಗಿರೋದು ಅನೇಕರಿಗೆ ಅಚ್ಚರಿ ತಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.