Namma Metro: ಡಿಸ್ಕೋ ಬಾರ್‌ ಆದ ಬೆಂಗಳೂರು ಮೆಟ್ರೋ, ಯಾರ ಮನೆ ಮಕ್ಕಳಪ್ಪಾ ನೀವೆಲ್ಲಾ.. | Namma Metro Rules Violation Girls Group Singing Viral Video Bmrcl Action San

Namma Metro: ಡಿಸ್ಕೋ ಬಾರ್‌ ಆದ ಬೆಂಗಳೂರು ಮೆಟ್ರೋ, ಯಾರ ಮನೆ ಮಕ್ಕಳಪ್ಪಾ ನೀವೆಲ್ಲಾ.. | Namma Metro Rules Violation Girls Group Singing Viral Video Bmrcl Action San



Namma Metro: ಡಿಸ್ಕೋ ಬಾರ್‌ ಆದ ಬೆಂಗಳೂರು ಮೆಟ್ರೋ, ಯಾರ ಮನೆ ಮಕ್ಕಳಪ್ಪಾ ನೀವೆಲ್ಲಾ.. | Namma Metro Rules Violation Girls Group Singing Viral Video Bmrcl Action San

ಬೆಂಗಳೂರಿನ ‘ನಮ್ಮ ಮೆಟ್ರೋ’ದಲ್ಲಿ ಯುವತಿಯರ ಗುಂಪೊಂದು ನೆಲದ ಮೇಲೆ ಕುಳಿತು ಜೋರಾಗಿ ಹಾಡು ಹಾಡಿ ನಿಯಮ ಉಲ್ಲಂಘಿಸಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ದೆಹಲಿ ಮೆಟ್ರೋದಂತಹ ಸಂಸ್ಕೃತಿ ಬೆಂಗಳೂರಿಗೆ ಬೇಡವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಮಾ.18): ಸಿಲಿಕಾನ್ ಸಿಟಿಯ ಹೆಮ್ಮೆಯ ‘ನಮ್ಮ ಮೆಟ್ರೋ’ ಇತ್ತೀಚೆಗೆ ಕೇವಲ ಹೊಸ ಮಾರ್ಗಗಳಿಂದ ಮಾತ್ರವಲ್ಲದೆ, ಪ್ರಯಾಣಿಕರ ಅಶಿಸ್ತು ಮತ್ತು ನಿಯಮ ಉಲ್ಲಂಘನೆಯ ವಿಚಾರವಾಗಿಯೂ ಸುದ್ದಿಯಾಗುತ್ತಿದೆ. ಮೊನ್ನೆಯಷ್ಟೇ ಆಟಿಕೆ ಗನ್ ಹಿಡಿದು ಯುವಕನೊಬ್ಬ ಆತಂಕ ಸೃಷ್ಟಿಸಿದ್ದ ಘಟನೆ ಮಾಸುವ ಮುನ್ನವೇ, ಈಗ ಯುವತಿಯರ ಗುಂಪೊಂದು ಮೆಟ್ರೋ ನಿಯಮಗಳನ್ನು ಗಾಳಿಗೆ ತೂರಿ ಉದ್ಧಟತನ ಮೆರೆದಿದೆ. ನಮ್ಮ ಮೆಟ್ರೋದಲ್ಲಿನ ಮೂಲ ನಿಯಮ ಏನೆಂದರೆ, ಅಲ್ಲಿನ ಪ್ಲೋರ್‌ ಮೇಲೆ ಯಾರೂ ಕುಳಿತುಕೊಳ್ಳಬಾರದು. ಹಾಗೂ ಗಟ್ಟಿ ದನಿಯಲ್ಲಿ ಮಾತನಾಡಬಾರದು ಅನ್ನೋದು. ಆದರೆ, ಇತ್ತಿಚೆಗೆ ವೈರಲ್‌ ಆದ ವಿಡಿಯೋದಲ್ಲಿ ಪರಭಾಷಾ ಯುವತಿಯರು ಬೆಂಗಳೂರು ಮೆಟ್ರೋವನ್ನು ಅಕ್ಷರಶಃ ಡಿಸ್ಕೋಬಾರ್‌ ರೀತಿ ಮಾಡಿದ್ದಾರೆ.ಫ್ಲೋರ್‌ನಲ್ಲಿ ಕುಳಿತುಕೊಂಡಿರೋದು ಮಾತ್ರವಲ್ಲದೆ, ಜೋರಾದ ದನಿಯಲ್ಲಿ ಹಾಡು ಹಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಪ್ರಕಾರ, ಮೆಟ್ರೋ ರೈಲಿನ ಮಹಿಳಾ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಯುವತಿಯರ ಗುಂಪೊಂದು, ಸೀಟುಗಳು ಭರ್ತಿಯಾಗಿದ್ದ ಕಾರಣ ಬೋಗಿನ ನೆಲದ (Floor) ಮೇಲೆಯೇ ಗುಂಪಾಗಿ ಕುಳಿತಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಜೋರು ಧ್ವನಿಯಲ್ಲಿ ಹಾಡುಗಳನ್ನು ಹೇಳುತ್ತಾ ಸಹ ಪ್ರಯಾಣಿಕರಿಗೆ ತೀವ್ರ ಕಿರಿಕಿರಿ ಉಂಟುಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವಿಲ್ಲದೆ ಈ ಯುವತಿಯರು ವರ್ತಿಸಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

‘ದೆಹಲಿ ಮೆಟ್ರೋ’ ಮಾದರಿ ಬೇಡ ಎಂದು ಆಕ್ರೋಶ!

ದೆಹಲಿ ಮೆಟ್ರೋದಲ್ಲಿ ಪ್ರೇಮಿಗಳ ರೋಮ್ಯಾನ್ಸ್, ರೀಲ್ಸ್ ಹಾವಳಿ ಮತ್ತು ವಿಚಿತ್ರ ವರ್ತನೆಗಳು ಸಾಮಾನ್ಯ ಎಂಬಂತಾಗಿವೆ. ಈಗ ಬೆಂಗಳೂರು ಮೆಟ್ರೋ ಕೂಡ ಅದೇ ಹಾದಿ ಹಿಡಿಯುತ್ತಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. “ನಮ್ಮ ಮೆಟ್ರೋ ನಿಯಮದಂತೆ ನೆಲದ ಮೇಲೆ ಕುಳಿತುಕೊಳ್ಳುವಂತಿಲ್ಲ.” “ಲೈಕ್ಸ್ ಮತ್ತು ಕಂಟೆಂಟ್‌ಗಾಗಿ ಈ ರೀತಿ ಮಾಡುವುದು ಸರಿಯಲ್ಲ, ಇವರಿಗೆ ಕಠಿಣ ಶಿಕ್ಷೆ ವಿಧಿಸದಿದ್ದರೆ ಬೇರೆಯವರೂ ಇದನ್ನೇ ಅನುಸರಿಸುತ್ತಾರೆ.” “ಇಂತಹ ವರ್ತನೆಗಳಿಂದ ಬೆಂಗಳೂರಿನ ಘನತೆಗೆ ಧಕ್ಕೆ ಉಂಟಾಗುತ್ತಿದೆ” ಎಂದು ನೆಟ್ಟಿಗರು ಬಿಎಂಆರ್‌ಸಿಎಲ್ (BMRCL) ಗಮನ ಸೆಳೆದಿದ್ದಾರೆ.

Scroll to load tweet…

BMRCL ನಿಯಮಗಳು ಏನು ಹೇಳುತ್ತವೆ?

ಸುಗಮ ಮತ್ತು ಶಾಂತಿಯುತ ಪ್ರಯಾಣದ ದೃಷ್ಟಿಯಿಂದ ಬಿಎಂಆರ್‌ಸಿಎಲ್ ಈಗಾಗಲೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಜೋರು ಧ್ವನಿಯಲ್ಲಿ ರೀಲ್ಸ್ ನೋಡುವುದು ಅಥವಾ ಹಾಡು ಕೇಳುವುದನ್ನು ನಿಷೇಧಿಸಲಾಗಿದೆ. ರೈಲಿನ ನೆಲದ ಮೇಲೆ ಕುಳಿತುಕೊಳ್ಳುವುದು, ತಿಂಡಿ ತಿನ್ನುವುದು, ಅತಿಯಾದ ಪಾನಮತ್ತರಾಗಿ ಸಂಚರಿಸುವುದು ಮತ್ತು ಗುಟ್ಕಾ ಸೇವನೆಗೆ ಕಟ್ಟುನಿಟ್ಟಿನ ನಿಷೇಧವಿದೆ. ನಿಯಮ ಉಲ್ಲಂಘಿಸಿದರೆ ದಂಡದ ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೂಡ ಅವಕಾಶವಿದೆ.

ಕೆಲ ದಿನಗಳ ಹಿಂದೆ ಬಿಹಾರ ಮೂಲದ ವ್ಯಕ್ತಿಯೊಬ್ಬ ದೀಪಾಂಜಲಿ ನಗರ ನಿಲ್ದಾಣದಲ್ಲಿ ಆಟಿಕೆ ಗನ್ ಹಿಡಿದು ಪ್ರಯಾಣಿಕರನ್ನು ಹೆದರಿಸುವ ‘ಪ್ರಾಂಕ್’ ಮಾಡಿದ್ದ. ಕೂಡಲೇ ಆತನನ್ನು ವಶಕ್ಕೆ ಪಡೆದ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು ಹಾಗೂ ಮೆಟ್ರೋ ಅಧಿಕಾರಿಗಳು 400 ರೂಪಾಯಿ ದಂಡ ವಿಧಿಸಿದ್ದರು. ಸತತವಾಗಿ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದರಿಂದ, ಮೆಟ್ರೋ ಸಿಬ್ಬಂದಿ ಭದ್ರತೆ ಮತ್ತು ತಪಾಸಣೆಯನ್ನು ಇನ್ನಷ್ಟು ಬಿಗಿಗೊಳಿಸಬೇಕು ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.



Source link

Leave a Reply

Your email address will not be published. Required fields are marked *