
ವಾಷಿಂಗ್ಟನ್, ಮಾರ್ಚ್ 18: ಅಕ್ರಮವಾಗಿ ವಾಸಿಸುತ್ತಿರುವ ವಲಸಿಗರನ್ನು ಹೊರಗೆ ಕಳುಹಿಸಲು ಅಮೆರಿಕದ ಸರ್ಕಾರ ಹೊಸ ಯೋಜನೆ ಹಾಕಿದೆ. ವಲಸಿಗರು ತಾವಾಗಿಯೇ ಹೊರಡಲು ಅಗತ್ಯವಿರುವ ಒಂದಷ್ಟು ಹಣಕಾಸು ನೆರವು ಕೊಡುವುದಾಗಿ ಹೇಳಿದೆ. ಈ ವಲಸಿಗರು ಹೊರಹೋಗುವುದಾದರೆ ಅವರಿಗೆ 2,600 ಡಾಲರ್‌ಗಳ ಎಕ್ಸಿಟ್ ಬೋನಸ್ ಕೊಡಲಾಗುವುದು. ಅಂದರೆ, ಸುಮಾರು ಎರಡೂವರೆ ಲಕ್ಷ ರೂ ಪ್ರೋತ್ಸಾಹಧನ ಕೊಡಲಾಗುವುದು. ಜೊತೆಗೆ, ದಂಡಪಾವತಿ ಇತ್ಯಾದಿಗಳಿಂದ ವಿನಾಯಿತಿ ಸಿಗುತ್ತದೆ. ವಿಮಾನ ಟಿಕೆಟ್ ಅನ್ನೂ ಸರ್ಕಾರವೇ ಕೊಡುಗೆ.
ಅಮೆರಿಕದ ಗೃಹ ಭದ್ರತಾ ಇಲಾಖೆ ಇಂಥದ್ದೊಂದು ಆಫರ್ ಅನ್ನು ಅಕ್ರಮ ವಲಸಿಗರಿಗೆ ನೀಡಲಾಗಿದೆ. ಎಲ್ಲಾ ದೇಶದಿಂದ ಅಕ್ರಮವಾಗಿ ನೆಲಸಿರುವ ವಲಸಿಗರಿಗೆ ಇದು ಅನ್ವಯವಾಗುತ್ತದೆ. ತಮ್ಮ ದೇಶಕ್ಕೆ ವಾಪಸ್ ಹೋಗುವಂತೆ ಕೊಟ್ಟಿರುವ ಗಡುವು ಮೀರಿ ನೆಲಸಿರುವವರನ್ನು ಬಂಧಿಸಿ, ದಂಡ ವಿಧಿಸಿ, ಬಲವಂತವಾಗಿ ಗಡಿಪಾರು ಮಾಡುವ ಕಾನೂನು ಅಮೆರಿಕದಲ್ಲಿ ತರಲಾಗಿದೆ. ಆದರೆ, ಆ ಪರಿಸ್ಥಿತಿಯಲ್ಲಿ ಸಿಲುಕಲು ಬಯಸದೆ ಗೌರವಯುತವಾಗಿ ಹೊರಹೋಗಲು ಅವಕಾಶ ಬಯಸುತ್ತಿರುವವರಿಗೆ ಗೃಹ ಇಲಾಖೆ ಆಫರ್ ಕೊಟ್ಟಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಕಟ್ಟಡಕ್ಕೆ ಬೆಂಕಿ; ಮೂರು ಮಕ್ಕಳು ಸೇರಿ ಆರು ಮಂದಿ ಬಲಿ
ಅಮೆರಿಕದಿಂದ ತಾವಾಗೇ ಹೊರಹೋಗಲು ಬಯಸುವ ಅಕ್ರಮ ವಲಸಿಗರಿಗೆ 2,600 ಡಾಲರ್‌ಗಳ ಎಕ್ಸಿಟ್ ಬೋನಸ್ ಕೊಡದಿದ್ದರೆ. ಯಾವುದೇ ಪ್ರಯಾಣದ ಸರ್ಕಾರವೇ ಮಾಡುತ್ತದೆ. ಕೆಲ ದಂಡಗಳಿಂದಲೂ ವಿನಾಯಿತಿ ಕೊಡುತ್ತದೆ.
ಅಮೆರಿಕದ ಗೃಹ ಇಲಾಖೆಯ ಟ್ವೀಟ್
ನೀವು ಹೊಸ ಪ್ರಾರಂಭದೊಂದಿಗೆ ಮನೆಗೆ ಹೋಗಬಹುದು!
ನೀವು ಸ್ವಯಂ-ಗಡೀಪಾರು ಮಾಡಲು CBP ಹೋಮ್ ಅನ್ನು ಬಳಸಿದಾಗ ಉಚಿತ ಫ್ಲೈಟ್ ಹೋಮ್ ಮತ್ತು $2,600 ಎಕ್ಸಿಟ್ ಬೋನಸ್ ಪಡೆಯಿರಿ: https://t.co/YGo3uuNvrE pic.twitter.com/ZdSBlrJryO
– ಹೋಮ್ಲ್ಯಾಂಡ್ ಸೆಕ್ಯುರಿಟಿ (@DHSgov) ಮಾರ್ಚ್ 17, 2026
‘ನೀವು ನಿಮ್ಮ ದೇಶಕ್ಕೆ ಹೋಗಬಹುದು. ಅಥವಾ ನಿಮಗೆ ಕಾನೂನುಬದ್ಧ ವಾಸಕ್ಕೆ ಅವಕಾಶ ಇರುವ ದೇಶಕ್ಕೆ ಬೇಕಾದರೂ ಹೋಗಬಹುದು. ನೀವಾಗಿಯೇ ಹೋದರೆ ಭತ್ಯೆ ಕೊಡೆ’ ಎಂದು ಅಮೆರಿಕದ ಗೃಹ ಇಲಾಖೆ ಹೇಳಿದೆ.
ಇದನ್ನೂ ಓದಿ: ವಿಮಾನದಲ್ಲಿ ಶುಲ್ಕರಹಿತ ಸೀಟುಗಳು ಕನಿಷ್ಠ ಶೇ. 60 ಇರಬೇಕು; ಸರ್ಕಾರದಿಂದ ಹೊಸ ನಿಯಮಗಳು
ಇಲಾಖೆ ತನ್ನ ಎಕ್ಸ್ ಅಕೌಂಟ್‌ನಿಂದ ಮಾಡಿದ ಒಂದು ಟ್ವೀಟ್‌ನಲ್ಲಿ ತಾಜ್ಮಹಲ್ ಫೋಟೋ ಕೂಡ ಇದೆ. ಅದು ಅಕ್ರಮವಾಗಿ ನೆಲಸಿರುವ ಭಾರತೀಯರನ್ನು ಉದ್ದೇಶಿಸಿ ಮಾಡಿರುವಂಥದ್ದು. ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವ ವಲಸಿಗರಲ್ಲಿ ಭಾರತೀಯ ಸಮುದಾಯ 3ನೇ ಸ್ಥಾನ ಪಡೆಯುತ್ತದೆ.
ಹೆಚ್ಚಿನ ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ