
ಇಂಡಿಯನ್ ಪ್ರೀಮಿಯರ್ ಲೀಗ್’ ಸೀಸನ್-18 ರ ಫೈನಲ್ ಪಂದ್ಯ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 18 ವರ್ಷಗಳ ಕಾಯುವಿಕೆ ಅಂತ್ಯಗೊಳಿಸಿತ್ತು. ಆದರೆ ಈ ಕಾಯುವಿಕೆ ಈ ವರ್ಷವೇ ಅಂತ್ಯವಾಗಿದ್ದು ವಿರಾಟ್ ಕೊಹ್ಲಿಗೆ ಮೊದಲೇ ಗೊತ್ತಿತ್ತು. ಏಕೆಂದರೆ ಐಪಿಎಲ್ ನ ಹರಾಜಿನ ಬಳಿಕ ಆರ್ಸಿಬಿ ತಂಡದ ಸಮತೋಲನವನ್ನು ನೋಡಿದ್ದ ಕೊಹ್ಲಿ ಅಂತಹದೊಂದು ವಿಶ್ವಾಸ ಹೊಂದಿದ್ದರು. ಇದೇ ವಿಶ್ವಾಸದೊಂದಿಗೆ ತನ್ನ ಗೆಳೆಯ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌ಗೆ ವಿಶೇಷ ಸಂದೇಶವನ್ನೂ ರವಾನಿಸಿದ್ದರು.
202 ರ ಮೆಗಾ ಹರಾಜಿನ ನಂತರ, ಆರ್ಸಿಬಿ ತಂಡದ ಸಮತೋಲನವನ್ನು ನೋಡಿ ವಿರಾಟ್ ಕೊಹ್ಲಿ ನನಗೆ ಮೆಸೇಜ್ ಕಳಿಸಿದ್ದರು. “ಬಿಸ್ಕೆಟ್, ನಾವು ಈ ವರ್ಷ ಕಪ್ ಗೆಲ್ಲುತ್ತೇವೆ. ನಾವು ಫೈನಲ್ ತಲುಪಿದಾಗ ನೀನು ಅಲ್ಲಿರುತ್ತೇನೆ.” ಎಂದು ಸಂದೇಶ ರವಾನಿಸಿದ್ದರು.
ಅವರ ಈ ನಂಬಿಕೆ ನಿಜವಾಗಿದೆ. 17 ವರ್ಷಗಳಲ್ಲಿ ಸಾಧ್ಯವಾಗದೇ ಇರುವುದನ್ನು ಆರ್ಸಿಬಿ 18ನೇ ಸೀಸನ್‌ನಲ್ಲಿ ಸಾಧಿಸಲಾಗಿದೆ. ಅತ್ತ ಫೈನಲ್ ಪಂದ್ಯದ ವೇಳೆ ನಾನು ಸಹ ಅಲ್ಲಿದದ್ದು ಖುಷಿಯ ವಿಚಾರ. ಜೊತೆಗೆ ವಿರಾಟ್ ಸಾಕ್ಷಿಯ ಅಭೂತಪೂರ್ವ ಕ್ಷಣಗಳಿಗೆ.
ಈ ವೇಳೆ ವಿರಾಟ್ ಕೊಹ್ಲಿ, “ಇದು ನಮಗೆ ಎಷ್ಟು ಸೇರುತ್ತದೆಯೋ ಹಾಗೆಯೇ ನಿಮಗೂ (ಡಿವಿಲಿಯರ್ಸ್‌ಗೆ) ಸೇರುತ್ತದೆ” ಎಂದಿದ್ದರು. ನಿಜವಾಗಿಯೂ ಅವೆಲ್ಲವೂ ಅತ್ಯಮೂಲ್ಯ ಕ್ಷಣಗಳಾಗಿದ್ದವು ಎಂದು ಎಬಿ ಡಿವಿಲಿಯರ್ಸ್ ಆರ್ಸಿಬಿ ಫೈನಲ್ ಗೆಲುವನ್ನು ಸ್ಮರಿಸಿದ್ದಾರೆ.
ಫೈನಲ್ ಪಂದ್ಯದ ಮುಖ್ಯಾಂಶಗಳು:
ಜೂನ್ 3, 2025 ರಂದು ಅಹಮದಾಬಾದ್ ನಡೆದ ನರೇಂದ್ರ ಮೋದಿ ಮೈದಾನದಲ್ಲಿ ಫೈನಲ್‌ನಲ್ಲಿ ಬ್ಯಾಟ್ ಮಾಡಿದ ರಾಯಲ್ ಚಾಲೆರ್ಸ್ ಬೆಂಗಳೂರು ತಂಡ 20 ಪಂದ್ಯಗಳಲ್ಲಿ 190 ರನ್ ಕಲೆಹಾಕಿದ್ದರು.
ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 20 ಪಂದ್ಯಗಳಲ್ಲಿ 184 ರನ್‌ಗಳಷ್ಟೇ ಶಕ್ತವಾಗಿದೆ. ಈ ಮೂಲಕ ಆರ್ಸಿಬಿ ತಂಡ 6 ರನ್ಗಳ ರೋಚಕ ಜಯ ಸಾಧಿಸಿ ಚೊಚ್ಚಲ ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಇದೀಗ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಯಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಈ ಬಾರಿ ಕೂಡ ಈ ಹಿಂದಿನ ತಂಡವನ್ನೇ ಉಳಿಸಿಕೊಂಡಿರುವ ಆರ್ಸಿಬಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ.
ಇದನ್ನೂ ಓದಿ: ಮೂರು ತಂಡಗಳಿಗೆ ಆಸ್ಟ್ರೇಲಿಯನ್ ‘ಕ್ಯಾಪ್ಟನ್ಸ್’