Headlines

ನಡು ಸಮುದ್ರದಲ್ಲೇ ಡೀಲ್‌, ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ನೌಕೆ ಈಗ ಮಂಗಳೂರಿನತ್ತ ಯು-ಟರ್ನ್! | Russia Oil Tanker Aqua Titan U Turn From China To India New Mangalore Port San

ನಡು ಸಮುದ್ರದಲ್ಲೇ ಡೀಲ್‌, ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ನೌಕೆ ಈಗ ಮಂಗಳೂರಿನತ್ತ ಯು-ಟರ್ನ್! | Russia Oil Tanker Aqua Titan U Turn From China To India New Mangalore Port San



ನಡು ಸಮುದ್ರದಲ್ಲೇ ಡೀಲ್‌, ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ನೌಕೆ ಈಗ ಮಂಗಳೂರಿನತ್ತ ಯು-ಟರ್ನ್! | Russia Oil Tanker Aqua Titan U Turn From China To India New Mangalore Port San

ಚೀನಾದತ್ತ ಸಾಗುತ್ತಿದ್ದ ರಷ್ಯಾದ ಕಚ್ಚಾ ತೈಲ ಹೊತ್ತ ಹಲವು ನೌಕೆಗಳು ತಮ್ಮ ಮಾರ್ಗ ಬದಲಿಸಿ ಭಾರತದತ್ತ ಧಾವಿಸುತ್ತಿವೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಬದಲಾವಣೆ ಮತ್ತು ಮಧ್ಯಪ್ರಾಚ್ಯದ ಪೂರೈಕೆ ಕೊರತೆಯನ್ನು ನೀಗಿಸಲು ಭಾರತವು ರಷ್ಯಾದಿಂದ ತನ್ನ ತೈಲ ಆಮದನ್ನು ಗಣನೀಯವಾಗಿ ಹೆಚ್ಚಿಸಿದೆ.

ನವದೆಹಲಿ (ಮಾ.18): ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಚೀನಾದತ್ತ ಮುಖ ಮಾಡಿದ್ದ ರಷ್ಯಾದ ಕಚ್ಚಾ ತೈಲ ಹೊತ್ತ ಬೃಹತ್ ನೌಕೆಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಇದ್ದಕ್ಕಿದ್ದಂತೆ ‘ಯು-ಟರ್ನ್’ (U-Turn) ಪಡೆದು ಈಗ ಭಾರತದತ್ತ ಧಾವಿಸುತ್ತಿವೆ. ರಷ್ಯಾದಿಂದ ತೈಲ ಆಮದನ್ನು ಭಾರತವು ದುಪ್ಪಟ್ಟುಗೊಳಿಸುತ್ತಿರುವ ಬೆನ್ನಲ್ಲೇ ಈ ವಿದ್ಯಮಾನ ಜರುಗಿದೆ.

ಶಿಪ್-ಟ್ರ್ಯಾಕಿಂಗ್ ಡೇಟಾ ಪ್ರಕಾರ, ‘ಆಕ್ವಾ ಟೈಟನ್’ (Aqua Titan) ಎಂಬ ನೌಕೆಯು ಮಾರ್ಚ್ 21 ರಂದು ಮಂಗಳೂರಿನ ನವಮಂಗಳೂರು ಬಂದರನ್ನು ತಲುಪುವ ನಿರೀಕ್ಷೆಯಿದೆ. ಜನವರಿ ಕೊನೆಯಲ್ಲಿ ರಷ್ಯಾದ ಬಾಲ್ಟಿಕ್ ಸಮುದ್ರದ ಬಂದರಿನಿಂದ ‘ಯುರಲ್ಸ್’ (Urals) ತೈಲವನ್ನು ಲೋಡ್ ಮಾಡಿಕೊಂಡಿದ್ದ ಈ ಹಡಗು, ಆರಂಭದಲ್ಲಿ ಚೀನಾದ ‘ರಿಝಾವೊ’ (Rizhao) ಬಂದರಿನತ್ತ ಸಾಗುತ್ತಿತ್ತು. ಆದರೆ, ಆಗ್ನೇಯ ಏಷ್ಯಾದ ಜಲಪ್ರದೇಶಕ್ಕೆ ಬರುತ್ತಿದ್ದಂತೆ ದಿಕ್ಕು ಬದಲಿಸಿ ಭಾರತದತ್ತ ಮುಖ ಮಾಡಿದೆ. ಅಚ್ಚರಿಯೆಂದರೆ, ರಷ್ಯಾದಿಂದ ತೈಲ ಖರೀದಿಯನ್ನು ತಾತ್ಕಾಲಿಕವಾಗಿ ಹೆಚ್ಚಿಸಲು ಅಮೆರಿಕವು ಭಾರತಕ್ಕೆ ಹಸಿರು ನಿಶಾನೆ ತೋರಿಸಿದ ಕೆಲವೇ ದಿನಗಳಲ್ಲಿ ಬದಲಾವಣೆ ನಡೆದಿದೆ.

ಭಾರತದಿಂದ 30 ಮಿಲಿಯನ್ ಬ್ಯಾರೆಲ್ ತೈಲ ಖರೀದಿ!

ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಸ್ಥಗಿತಗೊಂಡಿರುವ ತೈಲ ಪೂರೈಕೆಯ ಕೊರತೆಯನ್ನು ನೀಗಿಸಲು ಭಾರತವು ರಷ್ಯಾದತ್ತ ಮೊರೆ ಹೋಗಿದೆ. ಕಳೆದ ಒಂದೇ ವಾರದಲ್ಲಿ ಭಾರತೀಯ ತೈಲ ಕಂಪನಿಗಳು ಬರೋಬ್ಬರಿ 30 ಮಿಲಿಯನ್ ಬ್ಯಾರೆಲ್ ರಷ್ಯಾದ ತೈಲವನ್ನು ಖರೀದಿಸಿವೆ.

ಇತ್ತೀಚಿನ ತಿಂಗಳುಗಳಲ್ಲಿ ಭಾರತವು ಖರೀದಿ ಕಡಿಮೆ ಮಾಡಿದ್ದರಿಂದ ರಷ್ಯಾಕ್ಕೆ ಚೀನಾ ಏಕೈಕ ದೊಡ್ಡ ಗ್ರಾಹಕನಾಗಿತ್ತು. ಆದರೆ ಈಗ ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಹೆಚ್ಚಿನ ದೇಶಗಳಿಗೆ ರಷ್ಯಾದಿಂದ ತೈಲ ಖರೀದಿಸಲು ಅನುಮತಿ ಸಿಕ್ಕಿರುವುದರಿಂದ, ಚೀನಾದತ್ತ ಹೋಗಬೇಕಿದ್ದ ಹಡಗುಗಳು ಬೇರೆಡೆಗೆ ತಿರುಗುತ್ತಿವೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಯೂ ಇದೆ.

ಬದಲಾದ ಏಳು ಟ್ಯಾಂಕರ್‌ಗಳ ಪಯಣ

ವೋರ್ಟೆಕ್ಸಾ ಲಿಮಿಟೆಡ್ (Vortexa Ltd.) ವರದಿಯ ಪ್ರಕಾರ, ಚೀನಾದತ್ತ ಹೋಗಬೇಕಿದ್ದ ಕನಿಷ್ಠ ಏಳು ರಷ್ಯಾದ ತೈಲ ನೌಕೆಗಳು ಮಧ್ಯ ಹಾದಿಯಲ್ಲಿ ತಮ್ಮ ಗುರಿಯನ್ನು ಭಾರತಕ್ಕೆ ಬದಲಿಸಿವೆ. ಭಾರತದ ಬಹುತೇಕ ಎಲ್ಲಾ ಪ್ರಮುಖ ತೈಲ ಸಂಸ್ಕರಣಾ ಘಟಕಗಳು (Refiners) ಈಗ ರಷ್ಯಾದ ಕಚ್ಚಾ ತೈಲಕ್ಕಾಗಿ ಮಾರುಕಟ್ಟೆಯಲ್ಲಿ ಮುಗಿಬಿದ್ದಿವೆ.

ಇದಲ್ಲದೆ, ‘ಜೌಜೌ ಎನ್’ (Zouzou N.) ಎಂಬ ಮತ್ತೊಂದು ಬೃಹತ್ ನೌಕೆಯು ಮಾರ್ಚ್ 25 ರಂದು ಗುಜರಾತ್‌ನ ಸಿಕ್ಕಾ ಬಂದರನ್ನು ತಲುಪುವ ಸಾಧ್ಯತೆಯಿದೆ. ಇದು ಕಝಾಕಿಸ್ತಾನದ ತೈಲವನ್ನು ಹೊತ್ತಿದ್ದು, ಇದು ಕೂಡ ಚೀನಾದ ರಿಝಾವೊ ಕಡೆಗೆ ಹೋಗುತ್ತಿತ್ತು. ಆದರೆ ಮಾರ್ಚ್ ಆರಂಭದಲ್ಲಿಯೇ ಇದು ತನ್ನ ದಿಕ್ಕನ್ನು ಬದಲಿಸಿ ಭಾರತದತ್ತ ಪ್ರಯಾಣ ಬೆಳೆಸಿದೆ.



Source link

Leave a Reply

Your email address will not be published. Required fields are marked *