Headlines

ಮುರಿಯಿತು 34 ವರ್ಷಗಳ ಸ್ನೇಹ: ಎಆರ್ ರೆಹಮಾನ್ ಕೈಬಿಟ್ಟ ಮಣಿರತ್ನಂ

ಮುರಿಯಿತು 34 ವರ್ಷಗಳ ಸ್ನೇಹ: ಎಆರ್ ರೆಹಮಾನ್ ಕೈಬಿಟ್ಟ ಮಣಿರತ್ನಂ


ಮುರಿಯಿತು 34 ವರ್ಷಗಳ ಸ್ನೇಹ: ಎಆರ್ ರೆಹಮಾನ್ ಕೈಬಿಟ್ಟ ಮಣಿರತ್ನಂ

ಮಣಿರತ್ನಂ ಮತ್ತು ಎಆರ್ ರೆಹಮಾನ್ (ಎಆರ್ ರೆಹಮಾನ್) ಜೋಡಿ ಭಾರತದ ಅತ್ಯುತ್ತಮ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ಜೋಡಿ. ಈ ಜೋಡಿ ನೀಡಿರುವ ಸಿನಿಮಾ ಮತ್ತು ಹಾಡುಗಳು ಮೂರು ನಂತರದ ನಂತರ ಟ್ರೆಂಡಿಂಗ್ ನಲ್ಲಿವೆ. ಆದರೆ ಈಗ ಬರೋಬ್ಬರಿ 34 ವರ್ಷಗಳ ಬಳಿಕ ಈ ಸ್ನೇಹ ಮುರಿದಂತಿದೆ. 1992ರ ‘ರೋಜಾ’ ಸಿನಿಮಾದಿಂದ ಆರಂಭಿಸಿ ಇತ್ತೀಚೆಗಿನ ‘ಥಗ್ ಲೈಫ್’ ಸಿನಿಮಾದವರೆಗೆ ಮಣಿರತ್ನಂ ಅವರ ಎಲ್ಲ ಸಿನಿಮಾಗಳಿಗೆ ಎಆರ್ ರೆಹಮಾನ್ ಸಂಗೀತ ನೀಡಿದ್ದರು. ಆದರೆ ಇದೀಗ ಮಣಿರತ್ನಂ ತಮ್ಮ ಹೊಸ ಸಿನಿಮಾಕ್ಕೆ ಹೊಸ ಸಂಗೀತ ನಿರ್ದೇಶಕರನ್ನು ಆಯ್ಕೆ ಮಾಡಿದ್ದಾರೆ.

ಮಣಿರತ್ನಂ, ಅವರು ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ಹೊಸ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ, ಈ ಸಿನಿಮಾಕ್ಕೆ ಯುವ ಸಂಗೀತ ನಿರ್ದೇಶಕರೊಬ್ಬರನ್ನು ಮಣಿರತ್ನಂ ಆಯ್ಕೆ ಮಾಡಿದ್ದಾರೆ. ಮಣಿರತ್ನಂ ಅವರ ಸಿನಿಮಾಕ್ಕೆ 21 ವರ್ಷ ವಯಸ್ಸಿನ ಸಾಯಿ ಅಭಯಂಕರ್ ಅವರು ಸಂಗೀತ ನೀಡಲಿದ್ದಾರೆ. ಯುವ ಸಂಗೀತ ನಿರ್ದೇಶಕನನ್ನು ಮಣಿರತ್ನಂ ಆಯ್ಕೆ ಮಾಡಿದ್ದು, ಇದು ಹಲವರ ಹುಬ್ಬೇರುವಂತೆ ಮಾಡಿದೆ.

ಮಣಿರತ್ನಂ ಅವರು ಕಳೆದ 43 ವರ್ಷಗಳಿಂದ ಸಿನಿಮಾ ನಿರ್ದೇಶನದಲ್ಲಿ ತೊಡಗಿದ್ದಾರೆ. ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಮಣಿರತ್ನಂ ಒಬ್ಬರು. ಇಷ್ಟು ಸುದೀರ್ಘ ಸಿನಿಮಾ ವೃತ್ತಿಯಲ್ಲಿ ಅವರು ಕೆಲಸ ಮಾಡಿರುವುದು ಕೇವಲ ಇಬ್ಬರು ಸಂಗೀತ ನಿರ್ದೇಶಕರ ಜೊತೆಗೆ ಮಾತ್ರವೇ. ಅವರ ಮೊದಲ 10 ಸಿನಿಮಾಗಳಿಗೆ ಇಳಯರಾಜ ಸಂಗೀತ ನೀಡಿದ್ದರು. ಬಳಿಕ 1992 ರ ‘ರೋಜಾ’ ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಇದೀಗ 34 ವರ್ಷಗಳ ಬಳಿಕ ಸಂಗೀತ ನಿರ್ದೇಶಕರನ್ನು ಮಣಿರತ್ನಂ ಬದಲಿಸುತ್ತಿದ್ದಾರೆ, ಬಹೊಸ ಸಿನಿಮಾಕ್ಕೆ ಸಾಯಿ ಅಭಯಂಕರ್ ಸಂಗೀತ ನೀಡಲಿದ್ದಾರೆ.

ಇದನ್ನೂ ಓದಿ:ಇರಾನ್‌ಗೆ ಮೆಡಿಕಲ್ ಕಿಟ್ ಕಳುಹಿಸಿ ಮಾನವೀಯತೆ ಮೆರೆದ ಭಾರತ

ಮಣಿರತ್ನಂ ಅವರ ಈ ಹೊಸ ಸಿನಿಮಾದಲ್ಲಿ ವಿಜಯ್ ಸೇತುಪತಿ ನಾಯಕ, ಸಾಯಿ ಪಲ್ಲವಿ ನಾಯಕಿ. ಈ ಮೊದಲು ವಿಜಯ್ ಸೇತುಪತಿ ಅವರು ಮಣಿರತ್ನಂ ಜೊತೆಗೆ ‘ಚಿಕ್ಕ ಚಿವಂತಿ ವಾನಂ’ ಸಿನಿಮಾದಲ್ಲಿ ನಟಿಸಿದ್ದರು. ಮಣಿರತ್ನಂ ಅವರೊಟ್ಟಿಗೆ ಇದು ಅವರ ಎರಡನೇ ಸಿನಿಮಾ. ಇನ್ನು ನಟಿ ಸಾಯಿ ಪಲ್ಲವಿ ಅವರಿಗೆ ಮಣಿರತ್ನಂ ಜೊತೆಗೆ ಇದು ಮೊದಲನೇ ಸಿನಿಮಾ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *