Headlines

Hit sprayed on fish : ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಮೀನಿಗೆ ಜಿರಳೆ ಔಷಧಿ ಹಿಟ್ ಸ್ಪ್ರೇ ಮಾಡಿದ ಯುವಕ | Fish Vendor Sprayed Cockroach Medicine On Fish Which Kept For Sale In Market

ಮಹಾರಾಷ್ಟ್ರದ ವಸೈನಲ್ಲಿ ವ್ಯಾಪಾರಿಯೊಬ್ಬ ಮಾರಾಟಕ್ಕಿಟ್ಟ ಮೀನುಗಳ ಮೇಲೆ ಜಿರಳೆ ನಾಶಕ ‘ಹಿಟ್’ ಸ್ಪ್ರೇ ಮಾಡುತ್ತಿರುವ ಆಘಾತಕಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಆಹಾರ ಸುರಕ್ಷತೆ ಮತ್ತು ಸಾರ್ವಜನಿಕರ ಆರೋಗ್ಯದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.

ಮಾರಾಟಕ್ಕಿಟ್ಟ ಮೀನಿಗೆ ಜಿರಳೆ ಔಷಧಿ ಸಿಂಪಡಿಸಿದ ಯುವಕ

ಇತ್ತೀಚೆಗೆ ಹೊರಗೆ ತಿನ್ನುವುದು ಮಾತ್ರವಲ್ಲ, ಹೊರಗಿನಿಂದ ತಂದು ಮನೆಯಲ್ಲಿ ಬೇಯಿಸಿ ತಿನ್ನುವ ಆಹಾರವೂ ಸುರಕ್ಷಿತವಲ್ಲ.. ಇತ್ತೀಚೆಗೆ ಹೊಟೇಲೊಂದರ ಪ್ರಿಡ್ಜ್‌ನಲ್ಲಿ ಕೊಳೆತ ಮಾಂಸ ಪತ್ತೆಯಾದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಆಹಾರ ಸಂಬಂಧಿ ಅನಾಹುತದ ಮತ್ತೊಂದು ವೀಡಿಯೋ ವೈರಲ್ ಆಗಿದೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್ ಆಗಿದ್ದು, ವೀಡಿಯೋದಲ್ಲಿ ಯುವಕನೋರ್ವ ಮಾರಾಟಕ್ಕಿಟ್ಟ ಮೀನಿಗೆ, ಜಿರಳೆಗಳನ್ನು ಓಡಿಸುವುದಕ್ಕೆ ಬಳಸುವ ಕೀಟನಾಶಕ ಸ್ಪ್ರೇ ಆಗಿರುವ ಹಿಟ್ ಅನ್ನು ಸ್ಪ್ರೇ ಮಾಡುತ್ತಿರುವುದು ಕಂಡು ಬಂದಿದೆ.

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮಹಾರಾಷ್ಟ್ರದ ವಸೈನಲ್ಲಿ ಈ ಘಟನೆ ನಡೆದಿದೆ. ವ್ಯಾಪಾರಿಯೊಬ್ಬ ಮಾರಾಟಕ್ಕೆ ತೆರದಿಟ್ಟಿರುವ ಮೀನಿನ ಮೇಲೆ ಹಾಗೂ ಅದರ ಸುತ್ತಮುತ್ತಲೂ ಈ ವಿಷಕಾರಿ ಕೀಟನಾಶಕವಾದ ಹಿಟ್‌ ಅನ್ನು ಸ್ಪ್ರೇ ಮಾಡುತ್ತಿರುವುದು ಕಂಡು ಬಂದಿದೆ. ಇದು ಸಾರ್ವಜನಿಕರ ಆರೋಗ್ಯ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನುಂಟು ಮಾಡಿದೆ. ಕೆಲ ಮಾಧ್ಯಮಗಳ ವರದಿಯ ಪ್ರಕಾರ, ವಸೈನ ನವಜೀವನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ವ್ಯಾಪಾರಿಯೊಬ್ಬ ಜಿರಳೆ ಸಾಯಿಸಲು ಬಳಸುವ ಈ ಕೀಟನಾಶಕವನ್ನು ಮನುಷ್ಯರು ತಿನ್ನುವ ಮೀನಿನ ಮೇಲೆ ಸಿಂಪಡಿಸಿದ್ದಾನೆ.

ಇದನ್ನೂ ಓದಿ: ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ: ಡ್ರಗ್ಸ್ ಕಂಟ್ರೋಲರ್ ಲೋಕಾ ಬಲೆಗೆ

ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಈ ದೃಶ್ಯ ನೋಡಿ ಆಘಾತ ವ್ಯಕ್ತಪಡಿಸಿದ್ದಾರೆ. ಸೊಳ್ಳೆ ಹಾಗೂ ಕೀಟಗಳ ಕಾಟವನ್ನು ತಡೆಯುವ ಭರದಲ್ಲಿ ಈ ಯುವಕ ಮನುಷ್ಯರನ್ನೇ ಮರೆತುಬಿಟ್ಟಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. 

ಇದನ್ನೂ ಓದಿ: ನಿಂಗೆ ಮಗಳನ್ನ ಕೊಡಲ್ಲ ಎಂದಿದ್ದಕ್ಕೆ ಯುವತಿ ತಲೆ ಒಡೆದು ಆಕೆಯ ಮನೆಯವರ ಮೇಲೆ ಹಲ್ಲೆ ಮಾಡಿದ ಕಿರಾತಕ

Source link

Leave a Reply

Your email address will not be published. Required fields are marked *