Headlines

ಎಸ್.ಪಿ.ಬಾಲಸುಬ್ರಹ್ಮಣ್ಯಂ ಧ್ವನಿಗೆ ಮಾಟ-ಮಂತ್ರ ಮಾಡಿಸಿದ್ರಾ? ಆ ಒಂದು ಹಾಡು ನರಕ ತೋರಿಸಿತ್ತಂತೆ!

ಎಸ್.ಪಿ.ಬಾಲಸುಬ್ರಹ್ಮಣ್ಯಂ ಧ್ವನಿಗೆ ಮಾಟ-ಮಂತ್ರ ಮಾಡಿಸಿದ್ರಾ? ಆ ಒಂದು ಹಾಡು ನರಕ ತೋರಿಸಿತ್ತಂತೆ!

ಎಸ್.ಪಿ.ಬಾಲಸುಬ್ರಹ್ಮಣ್ಯಂ ಧ್ವನಿಗೆ ಮಾಟ-ಮಂತ್ರ ಮಾಡಿಸಿದ್ರಾ? ಆ ಒಂದು ಹಾಡು ನರಕ ತೋರಿಸಿತ್ತಂತೆ!

ದಿಗ್ಗಜ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಧ್ವನಿಗೆ ಯಾರಾದರೂ ಮಾಟ ಮಾಡಿಸಿದ್ದರೇ? ಅವರ ಧ್ವನಿಗೆ ಬಂದಿದ್ದ ಸಮಸ್ಯೆ ಏನು? ಮನೆಯವರು ಯಾಕೆ ಹಾಗೆ ಅನುಮಾನಪಟ್ಟರು? ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ನರಕ ತೋರಿಸಿದ ಆ ಹಾಡು ಯಾವುದು?

ಎಸ್.ಪಿ.ಬಾಲಸುಬ್ರಹ್ಮಣ್ಯಂ ಭಾರತೀಯ ಚಿತ್ರರಂಗದ ಧ್ರುವತಾರೆ. ಸುಮಾರು 10 ಭಾಷೆಗಳಲ್ಲಿ 45,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿ ಅವರು ದಾಖಲೆ ಬರೆದಿದ್ದಾರೆ. ಕನ್ನಡ, ತಮಿಳು, ತೆಲುಗು ಮಾತ್ರವಲ್ಲದೆ ಹಿಂದಿ, ಮಲಯಾಳಂನಲ್ಲೂ ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೇವಲ ಗಾಯಕರಲ್ಲ, ಅವರು ಸಂಗೀತ ನಿರ್ದೇಶಕ, ನಟ, ನಿರ್ಮಾಪಕ, ನಿರೂಪಕರೂ ಆಗಿದ್ದರು. 2020ರಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾದರು. ಆದರೆ ಅವರ ಹಾಡುಗಳು ಇಂದಿಗೂ ಪ್ರತಿ ಮನೆಯಲ್ಲೂ ಜೀವಂತವಾಗಿವೆ.

’ಗೀತಾಂಜಲಿ’ ಚಿತ್ರದ ಸಮಯದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಧ್ವನಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ತಮಿಳು ಮತ್ತು ಮಲಯಾಳಂ ಡಬ್ಬಿಂಗ್ ವೇಳೆ ‘ಓ ಪಾಪಾ ಲಾಲಿ’ ಹಾಡನ್ನು ಹಾಡುವಾಗ ಧ್ವನಿ ಒಡೆದುಹೋಗುತ್ತಿತ್ತು. ಈ ಒಂದು ಹಾಡು ತನಗೆ ನರಕ ತೋರಿಸಿತ್ತು ಎಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಗಂಟಲಲ್ಲಿ ಒಂದು ಸಣ್ಣ ಗಡ್ಡೆ (nodule) ಬೆಳೆದಿತ್ತು. ಇದರಿಂದಾಗಿ ಹಾಡುವಾಗ ಧ್ವನಿ ಕೆಲವೊಮ್ಮೆ ಒಡೆಯುತ್ತಿತ್ತು. ಇನ್ನು ಹಾಡಲು ಸಾಧ್ಯವೇ ಇಲ್ಲವೇನೋ ಎಂಬ ಭಯ ಅವರನ್ನು ಕಾಡಿತ್ತು. ಕೊನೆಗೆ ಧೈರ್ಯ ಮಾಡಿ ಗಂಟಲಿನ ಆಪರೇಷನ್ ಮಾಡಿಸಿಕೊಳ್ಳಲು ನಿರ್ಧರಿಸಿದರು.

ಆಪರೇಷನ್ ಬಳಿಕ ಹಾಡಲು ಸಾಧ್ಯವಾಗುತ್ತದೋ ಇಲ್ಲವೋ ಎಂದು ವೈದ್ಯರು ಗ್ಯಾರಂಟಿ ನೀಡಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬದವರು, ಯಾರೋ ಮಾಟ-ಮಂತ್ರ ಮಾಡಿಸಿದ್ದಾರೆಂದು ಅನುಮಾನಪಟ್ಟರು. ಪೂಜೆ, ಹೋಮಗಳನ್ನು ಮಾಡಿಸಿದರು. ಆದರೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇವನ್ನು ನಂಬದೆ ಆಪರೇಷನ್‌ಗೆ ಮುಂದಾದರು.

ಎಸ್.ಪಿ.ಬಾಲಸುಬ್ರಹ್ಮಣ್ಯಂ ಆಪರೇಷನ್‌ಗೆ ಸಿದ್ಧರಾದಾಗ, ಭಾರತರತ್ನ ಲತಾ ಮಂಗೇಶ್ಕರ್ ಫೋನ್ ಮಾಡಿ, ‘ಸರ್ಜರಿ ಮಾಡಿಸಬೇಡಿ, ಇರುವ ಧ್ವನಿಯನ್ನೂ ಕಳೆದುಕೊಳ್ಳಬೇಡಿ’ ಎಂದು ಸಲಹೆ ನೀಡಿದ್ದರು. ಆದರೂ ಎಸ್.ಪಿ.ಬಾಲಸುಬ್ರಹ್ಮಣ್ಯಂ ಧೈರ್ಯ ಮಾಡಿ ಆಪರೇಷನ್ ಮಾಡಿಸಿಕೊಂಡು ತಮ್ಮ ಧ್ವನಿಯನ್ನು ಮರಳಿ ಪಡೆದರು.

Source link

Leave a Reply

Your email address will not be published. Required fields are marked *