ಕ್ರೈಸ್ತ ವ್ಯಕ್ತಿಯಿಂದ ದೈವ ನರ್ತನ ಸೇವೆ ಆರೋಪ:ಜಾತಿ ಪ್ರಮಾಣಪತ್ರ ಮೂಲಕ ದೈವ ನರ್ತಕ ಸ್ಪಷ್ಟನೆ

ಕ್ರೈಸ್ತ ವ್ಯಕ್ತಿಯಿಂದ ದೈವ ನರ್ತನ ಸೇವೆ ಆರೋಪ:ಜಾತಿ ಪ್ರಮಾಣಪತ್ರ ಮೂಲಕ ದೈವ ನರ್ತಕ ಸ್ಪಷ್ಟನೆ


ಕ್ರೈಸ್ತ ವ್ಯಕ್ತಿಯಿಂದ ದೈವ ನರ್ತನ ಸೇವೆ ಆರೋಪ:ಜಾತಿ ಪ್ರಮಾಣಪತ್ರದ ಮೂಲಕ ದೈವ ನರ್ತಕ ಸ್ಪಷ್ಟನೆ

ಮಂಗಳೂರು, (ಮಾರ್ಚ್ 18): ಮಂಗಳೂರಿನ ದೈವಸ್ಥಾನದಲ್ಲಿ ನಡೆದ ದೈವ ನರ್ತನ ಸೇವೆ ಇದೀಗ ದೊಡ್ಡ ವಿವಾದಕ್ಕೆ (ಮಂಗಳೂರು ದೈವಾರಾಧನೆ ಸಾಲು) ಎಂದು. ಪಂಬದ ಸಮಾಜದ ಸಂಶೋಧಕಿ ಡಾ. ರತಿ ಕೆಲವು ದಿನಗಳ ಹಿಂದೆ ಗಂಭೀರ ಆರೋಪ ಮಾಡಲಾಗಿತ್ತು. ಬಂಟ ದೈವದ ನರ್ತನ ಸೇವೆ ವೇಳೆ ಕ್ರೈಸ್ತ ಧರ್ಮದ ವ್ಯಕ್ತಿಯಿಂದ ದೈವ ನರ್ತನ ಮಾಡಿಸಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದರು. ಶ್ರೀ ಜಾರಂದಾಯ ದೈವಕ್ಕೆ ನಿಯಮಾನುಸಾರ ಪಂಬದ ಸಮುದಾಯದವರೇ ನರ್ತನ ಮಾಡಿದ್ದರೂ, ಬಂಟ ದೈವಕ್ಕೆ ಮಾತ್ರ ಅನ್ಯಧರ್ಮದ ವ್ಯಕ್ತಿಗೆ ಅವಕಾಶ ಎಂಬ ಆರೋಪ ಕೇಳಿಬಂದಿತ್ತು. ಆರೋಪ ಕೇಳಿ ಬಂದ ಕೂಡಲೇ ತುಳುನಾಡಿನ ದೈವಾರಾಧನೆ ವಲಯದಲ್ಲಿ ತೀವ್ರ ಚರ್ಚೆ,ವಿರೋಧ,ಸಂಶಯಗಳ ವಾತಾವರಣ ನಿರ್ಮಾಣವಾಯಿತು. ಆದರೆ ಈ ಎಲ್ಲಾ ಆರೋಪಗಳನ್ನು ಈಗ ದೈವತಕರು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ದೈವಸ್ಥಾನದ ಆಡಳಿತ ಮಂಡಳಿ ದೈವ ನರ್ತಕ ಗಣೇಶ್ ಪಂಬದರಿಗೆ ನೇಮ ಕಟ್ಟುವ ಜವಾಬ್ದಾರಿ ವಹಿಸಿಕೊಟ್ಟಿದ್ದರು. ಹೀಗಾಗಿ ಅವರೇ ಸ್ಪಷ್ಟನೆ ನೀಡಿದ್ದು ಬಂಟ ದೈವಕ್ಕೆ ನರ್ತನ ಸೇವೆ ಮಾಡಿದ ಸುಶಾಂತ್ ನಮ್ಮದೇ ಪಂಬದ ಸಮುದಾಯದವನು ಎಂದು ಸ್ಪಷ್ಟಪಡಿಸಿದ್ದಾರೆ.

ಸುಶಾಂತ ಕ್ರೈಸ್ತನಲ್ಲ, ಅವನ ತಾಯಿ ನಮ್ಮ ಜಾತಿಗೆ ಸೇರಿದವರು. ಮದುವೆಯಾದ ಬಳಿಕ ಹಿಂದೂ ಧರ್ಮ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಇವನು ಮೊದಲ ಬಾರಿಗೆ ನರ್ತನ ಮಾಡ್ತಿರುವವನಲ್ಲ ಹಲವು ಕ್ಷೇತ್ರಗಳಲ್ಲಿ ಸೇವೆ ಮಾಡಿದ್ದಾನೆ ಎಂದಿದ್ದಾನೆ. ಆರೋಪ ಮಾಡಿದವರ ಮೇಲೆಯೇ ಪ್ರಶ್ನೆ ಎತ್ತಿರುವ ಗಣೇಶ್ ಪಂಬದ ರತಿಯವರ ಕುಟುಂಬವೇ ಇವನ ಸಹೋದರನಿಂದ ಬೇರೆಡೆ ನರ್ತನ ಮಾಡುತ್ತಿದೆ ಆಗ ಸಮಸ್ಯೆ ಇಲ್ಲ ಎಂದು ಪ್ರಶ್ನಿಸಿದ್ದಾರೆ. ಕ್ಷೇತ್ರಕ್ಕೆ ಯಾವುದೇ ಅಪಚಾರವಾಗಿಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.

ಇದನ್ನೂ ಓದಿ: ತುಳುನಾಡಿನಲ್ಲೇ ದೈವಕ್ಕೆ ಅಪಚಾರ? ಕ್ರಿಶ್ಚಿಯನ್ ಹುಡುಗನಿಂದ ದೈವ ನರ್ತನ ಆರೋಪ!

ಇತ್ತ ಆರೋಪದ ಸಂಕಷ್ಟಕ್ಕೆ ಸಿಲುಕಿರುವ ದೈವ ನರ್ತಕ ಸುಶಾಂತ್ ಪಂಬದ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ನನಗೆ ಈಗ ಯಾರಿಗೂ ಮುಖ ತೋರಿಸಲು ಆಗುತ್ತಿಲ್ಲ. ಈ ಆರೋಪ ಬಂದ ನಂತರ ಜೀವನವೇ ಬದಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಹಲವಾರು ಕಡೆ ದೈವ ನರ್ತನ ಸೇವೆಗೆ ಕರೆ ಬಂದಿದ್ದರೂ ಈಗ ಎಲ್ಲರೂ ಕರೆ ಮಾಡಿ ಏನು ಮಾಡೋದು. ತಮ್ಮ ಬಳಿ ಜಾತಿ ಪ್ರಮಾಣಪತ್ರವಿದ್ದು ತಾವು ಪಂಬದ ಸಮುದಾಯದವರು ಎಂದು ಸ್ಪಷ್ಟಪಡಿಸಿದ್ದಾರೆ. ನನಗೆ ನ್ಯಾಯ ಸಿಗಬೇಕು ಎಂಬುದು ಅವರ ಬೇಡಿಕೆ.

ಇನ್ನೂ ಸುಶಾಂತ್ ತಾಯಿ ಸವಿತಾ ಕೂಡ ಸ್ಪಷ್ಟನೆ ನೀಡಿ ನಾನು ಮೊದಲು ಕ್ರಿಶ್ಚಿಯನ್ ಆಗಿದ್ದರೂ ಮದುವೆಯ ಬಳಿಕ ಹಿಂದೂ ಧರ್ಮಕ್ಕೆ ಸೇರಿದ್ದೇನೆ. ನಾವು ಚರ್ಚ್‌ಗೆ ಹೋಗೋದಿಲ್ಲ, ಮಕ್ಕಳು ಸಹ ಹಿಂದೂ ಧರ್ಮ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ನನ್ನ ಮಗ ಕ್ರಿಶ್ಚಿಯನ್ ಎಂದು ಮಾಡಿದ್ರೆ ದೈವನರ್ತನಕ್ಕೆ ಕಳಿಸಲ್ಲ. ಮಂಗಳೂರಿನ ಎಲ್ಲಾ ಚರ್ಚ್‌ಗಳಿಂದ ದಾಖಲೆ ತರಲಿ ಎಂದು ಸವಾಲು ಹಾಕಿದ್ದಾರೆ.

ಒಟ್ಟಿನಲ್ಲಿ ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡುವ ಕೆಲಸವನ್ನು ದೈವ ನರ್ತಕರು ಮಾಡಿದ್ದಾರೆ. ಆದರೆ ಇದನ್ನು ಯಾವ ದೈವರಾಧಕರು, ಭಕ್ತರು ರೀತಿ ಸ್ವೀಕರಿಸುತ್ತಾರೆ ಕಾದುನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *