
ಇಸ್ಲಾಮಾಬಾದ್, ಮಾರ್ಚ್ 18: ವಿಶ್ವಾದ್ಯಂತ ಉಂಟಾಗಿರುವ ಇಂಧನ ಮತ್ತು ಅನಿಲ ಬಿಕ್ಕಟ್ಟಿನಿಂದ ನೆರೆಯ ದೇಶ ಪಾಕಿಸ್ತಾನವೂ ಕಂಗೆಟ್ಟಿದೆ. ಇದೇ ಕಾರಣದಿಂದ ಈ ವರ್ಷ ಪಾಕಿಸ್ತಾನದಲ್ಲಿ ‘ಪಾಕಿಸ್ತಾನ ದಿನಾಚರಣೆ'(ಪಾಕಿಸ್ತಾನದ ರಿಪಬ್ಲಿಕ್ ಡೇ) ಆಚರಿಸದಿರಲು ನಿರ್ಧರಿಸಲಾಗಿದೆ. ಮಾರ್ಚ್ 23 ರಂದು ಪಾಕಿಸ್ತಾನದ (ಪಾಕಿಸ್ತಾನ) ಗಣರಾಜ್ಯೋತ್ಸವ ಆಚರಿಸಬೇಕಾಗಿತ್ತು. ಆದರೆ, ಹಣ ಹಾಗೂ ಇಂಧನದ ಬಿಕ್ಕಟ್ಟಿನಿಂದ ಈ ಸಂಭ್ರಮಾಚರಣೆಯನ್ನು ರದ್ದುಗೊಳಿಸಲಾಗಿದೆ.
“ಸಹೋದರರೇ, ಆಹಾರ ಮತ್ತು ಪಾನೀಯಗಳನ್ನು ಸೇವಿಸಿ ಸಂಭ್ರಮಿಸಬೇಡಿ. ಕೇಕ್ ಕತ್ತರಿಸಿ ಮನೆಗೆ ಹೋಗಿ!” ಎಂದು ಸರ್ಕಾರದಿಂದ ಪಾಕಿಸ್ತಾನದ ಜನರಿಗೆ ಸೂಚನೆ ನೀಡಲಾಗಿದೆ.
ಇರಾನ್ ಜೊತೆ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಯುದ್ಧವು ಪಾಕಿಸ್ತಾನವನ್ನು ಎಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರೆ ಪಾಕಿಸ್ತಾನ ದಿನಾಚರಣೆಯ ಮೆರವಣಿಗೆಯನ್ನು ರದ್ದುಗೊಳಿಸಲಾಗಿದೆ. ಈ ಸರ್ಕಾರ ದಿಟ್ಟ ಘೋಷಣೆ ಮಾಡಿದೆ. ಈ ವರ್ಷ ಯಾವುದೇ ಮಿಲಿಟರಿ ಮೆರವಣಿಗೆ ಇರುವುದಿಲ್ಲ, ಯಾವುದೇ ಅಲಂಕಾರಿಕ ಸಮಾರಂಭಗಳು ಮತ್ತು ಟ್ಯಾಂಕ್-ಕ್ಷಿಪಣಿ ಪ್ರದರ್ಶನಗಳಿಲ್ಲ. ಗಲ್ಫ್ ರಾಷ್ಟ್ರಗಳ ತೈಲ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನ ದಿವಾಳಿಯಾಗಿದೆ.
ಇದನ್ನೂ ಓದಿ: ಬಹ್ರೇನ್ ಮೇಲಿನ ಇರಾನ್ ದಾಳಿಯ ವಿಡಿಯೋ ಶೇರ್ ಮಾಡಿದ್ದಕ್ಕೆ 5 ಪಾಕಿಸ್ತಾನಿ ಪ್ರಜೆಗಳ ಬಂಧನ
ಪಾಕಿಸ್ತಾನ IMFನಿಂದ ಸಾಲ ಪಡೆದಿದೆ. ಆ ಸಾಲದ ಭಾರದ ಜೊತೆಗೆ ಇದೀಗ ತೈಲ ಬಿಕ್ಕಟ್ಟು ಕೂಡ ಉಂಟಾಗಿದೆ. ಹೀಗಾಗಿ, ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಜೆಟ್ಗಳನ್ನು ಹಾರಿಸಲು ಹಣ ಮತ್ತು ಇಂಧನವೆರಡೂ ಇಲ್ಲದೆ ಪಾಕ್ ಈ ನಿರ್ಧಾರ ಮಾಡಿದೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರ ಕಚೇರಿಯ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪಾಕಿಸ್ತಾನ ದಿನದಂದು ಮೆರವಣಿಗೆ ಇರುವುದಿಲ್ಲ ಎಂದು ಘೋಷಿಸಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನದ ಮೇಲಿನ ದ್ವೇಷದಿಂದ ಭಾರತ, ಇರಾನ್, ಅಫ್ಘಾನ್ ಒಂದಾಗಿ ಸಂಚು; ಖವಾಜಾ ಆಸಿಫ್ ಆರೋಪ
ಮಾರ್ಚ್ 23 ರಂದು ಪ್ರಧಾನಿಯವರು ಸರಳ ಧ್ವಜಾರೋಹಣ ಸಮಾರಂಭವನ್ನು ಪ್ರಕಟಿಸಿದ್ದಾರೆ. ಸಚಿವಾಲಯಗಳು ಮತ್ತು ಇಲಾಖೆಗಳು ಸರಳ ಧ್ವಜಾರೋಹಣ ಮಾಡುವಂತೆ ಸೂಚಿಸಲಾಗಿದೆ. ಆ ದಿನ ಪ್ರಧಾನಿ ಕಚೇರಿಯಲ್ಲಿ ಧ್ವಜಾರೋಹಣ ಮಾಡಿದರು. ಯಾವುದೇ ಭಾಷಣ, ಮೆರವಣಿಗೆ, ಸಮಾರಂಭಗಳು ಇರುವುದಿಲ್ಲ. ಪಾಕಿಸ್ತಾನದಲ್ಲಿ ಸರ್ಕಾರಿ ವಾಹನಗಳಿಗೆ ಶೇ. 50% ಕಡಿಮೆ ಇಂಧನ, ವಾರಕ್ಕೆ 4 ದಿನಗಳ ಕಚೇರಿ ಸಮಯ, ಅರ್ಧದಷ್ಟು ಸಿಬ್ಬಂದಿ ಮನೆಯಲ್ಲಿ ಕೆಲಸ ಮಾಡುವುದು ಮತ್ತು SOE ಉದ್ಯೋಗಿಗಳಿಗೆ ಶೇ. 5 ರಿಂದ ಶೇ. 30ರವರೆಗೆ ವೇತನ ಕಡಿತದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ