Headlines

ಬದಲಾಗಲಿದೆ ಕನ್ನಡದ ಮೊಟ್ಟಮೊದಲ ಸ್ಯಾಟಲೈಟ್‌ ಚಾನೆಲ್‌ ಉದಯ ಟಿವಿ ಹೆಸರು? ಕನ್ನಡಿಗರಿಗೆ ಇದೆ ಖುಷಿ ಸುದ್ದಿ | Udaya Tv Rebranding New Name Sun Udaya Tv Sun Network Kannada Channel San

ಬದಲಾಗಲಿದೆ ಕನ್ನಡದ ಮೊಟ್ಟಮೊದಲ ಸ್ಯಾಟಲೈಟ್‌ ಚಾನೆಲ್‌ ಉದಯ ಟಿವಿ ಹೆಸರು? ಕನ್ನಡಿಗರಿಗೆ ಇದೆ ಖುಷಿ ಸುದ್ದಿ | Udaya Tv Rebranding New Name Sun Udaya Tv Sun Network Kannada Channel San



ಬದಲಾಗಲಿದೆ ಕನ್ನಡದ ಮೊಟ್ಟಮೊದಲ ಸ್ಯಾಟಲೈಟ್‌ ಚಾನೆಲ್‌ ಉದಯ ಟಿವಿ ಹೆಸರು? ಕನ್ನಡಿಗರಿಗೆ ಇದೆ ಖುಷಿ ಸುದ್ದಿ | Udaya Tv Rebranding New Name Sun Udaya Tv Sun Network Kannada Channel San

ಕನ್ನಡದ ಪ್ರಖ್ಯಾತ ಚಾನೆಲ್ ಉದಯ ಟಿವಿಯು ಸನ್ ನೆಟ್‌ವರ್ಕ್‌ನಿಂದ ಮರು ಬ್ರ್ಯಾಂಡಿಂಗ್‌ಗೆ ಒಳಗಾಗುತ್ತಿದೆ. ಯುಗಾದಿಯ ವೇಳೆಗೆ ‘ಸನ್ ಉದಯ ಟಿವಿ’ ಎಂದು ಹೊಸ ಹೆಸರು ಮತ್ತು ಲೋಗೋದೊಂದಿಗೆ ಬದಲಾಗುವ ನಿರೀಕ್ಷೆಯಿದೆ. 

ಬೆಂಗಳೂರು (ಮಾ.18): ಧಾರಾವಾಹಿ, ಲೆಕ್ಕವಿಲ್ಲದಷ್ಟು ಹೆಸರಾಂತ ಕನ್ನಡ ಸಿನಿಮಾಗಳ ಹಕ್ಕುಗಳನ್ನು ಹೊಂದಿರುವ ಕನ್ನಡದ ಪ್ರಖ್ಯಾತ ಚಾನೆಲ್‌ ಉದಯ ಟಿವಿಯ ಹೆಸರು ಬದಲಾಗುತ್ತಿದೆ. 2026ರ ಮಾರ್ಚ್‌ ವೇಳೆಗೆ ಉದಯ ಟಿವಿಯನ್ನು ಮರು ಬ್ರ್ಯಾಂಡಿಂಗ್‌ ಮಾಡಲಾಗುತ್ತದೆ ಎಂದು ಇದರ ಮಾಲೀಕರಾದ ಸನ್‌ಟಿವಿ ನೆಟ್‌ವರ್ಕ್‌ ತಿಳಿಸಿತ್ತು. ಉದಯ ಟಿವಿ ಮಾಲೀಕತ್ವ ಹೊಂದಿರುವ, ಸನ್ ಟಿವಿ ನೆಟ್‌ವರ್ಕ್ ಲಿಮಿಟೆಡ್ ಇಂಡಿಯನ್‌ ಮೀಡಿಯಾ ಕಂಪನಿಯಾಗಿದ್ದು, ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು ಸನ್ ಗ್ರೂಪ್‌ನ ಒಂದು ಭಾಗವಾಗಿದೆ. 1993ರ ಏಪ್ರಿಲ್‌ 14 ರಂದು ಕಲಾನಿಧಿ ಮಾರನ್‌ ಇದನ್ನು ಸ್ಥಾಪಿಸಿದರೆ, ಮರು ವರ್ಷವೇ ಉದಯ ಟಿವಿ ಹೆಸರಲ್ಲಿ ಕನ್ನಡದಲ್ಲೂ ಚಾನೆಲ್‌ ಏರ್‌ ಆಗಿತ್ತು.

ಕನ್ನಡದ ಮೊಟ್ಟ ಮೊದಲ ಸ್ಯಾಟಲೈಟ್‌ ಚಾನೆಲ್‌ ಎನಿಸಿಕೊಂಡಿದ್ದ ಉದಯ ಟಿವಿ, ಕನ್ನಡದ ಹೆಸರಾಂತ ಧಾರವಾಹಿಗಳು ಹಾಗೂ ಸಿನಿಮಾ ಹಕ್ಕುಗಳನ್ನು ಹೊಂದಿದೆ. ಮೂಲಗಳ ಪ್ರಕಾರ ಯುಗಾದಿಯ ದಿನದಂದು ಹೆಸರಿನ ಮರು ಬ್ರ್ಯಾಂಡಿಂಗ್‌ ಆಗಲಿದ್ದು, ಉದಯ ಟಿವಿ ಲೋಗೋವನ್ನು ಈಗಾಗಲೇ ಕೆಳಗಿನಿಂದ ಮೇಲಿನ ಬಲ ಮೂಲೆಗೆ ಸ್ಥಳಾಂತರಿಸಲಾಗಿದೆ. ತನ್ನ ದೊಡ್ಡ ನೆಟ್‌ವರ್ಕ್‌ನ ಲುಕ್‌ಅನ್ನು ಸಂಪೂರ್ಣವಾಗಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ಹೆಸರು ಹಾಗೂ ಲೋಗೋವನ್ನು ಮರು ಬ್ರ್ಯಾಂಡ್‌ ಮಾಡಲಿದೆ.

ಏನಾಗಲಿದೆ ಹೆಸರು?

ಮೂಲಗಳ ಪ್ರಕಾರ ಉದಯ ಟಿವಿ ಇನ್ನುಮುಂದೆ ಸದೇ ಹೆಸರನ್ನು ಉಳಿಸಿಕೊಳ್ಳುವುದಿಲ್ಲ ಅದರ ಬದಲಾಗಿ, ಸನ್‌ ಉದಯ ಟಿವಿ ಎನ್ನುವ ಹೊಸ ಹೆಸರನ್ನು ಪಡೆದುಕೊಳ್ಳಲಿದೆ. ಇದರಲ್ಲಿ ಸನ್‌ ಎನ್ನುವ ಪದ ಇಂಗ್ಲೀಷ್‌ನಲ್ಲಿ ಇದ್ದರೆ, ಉದಯ ಎನ್ನುವ ಪದ ಕನ್ನಡದಲ್ಲಿ ಇರಲಿದೆ.ಅದರೊಂದಿಗೆ ಲೋಗೋದ ಹಿಂದೆ ಇರುವ ಸೂರ್ಯನ ಚಿತ್ರದಲ್ಲಿ ಕೂಡ ಬದಲಾವಣೆ ಆಗಿದೆ. ಸುಮಾರು ಮೂರು ದಶಕಗಳಿಂದ ಕನ್ನಡ ಜನ ಉದಯ ಟಿವಿ ಅನ್ನೋ ಹೆಸರಿನಿಂದಲೇ ಚಿರಪರಿಚಿತರಾಗಿದ್ದರು.

ಸನ್‌ನೆಟ್‌ವರ್ಕ್‌ ಕನ್ನಡದಲ್ಲಿ ಉದಯ ನ್ಯೂಸ್‌ ಅನ್ನೋ ನ್ಯೂಸ್‌ ಚಾನೆಲ್‌ ಕೂಡ ಹೊಂದಿತ್ತು. 2000ದಲ್ಲಿ ಅನಾವರಣಗೊಂಡಿದ್ದ ಚಾನೆಲ್‌ , 2019ರಲ್ಲಿ ಮುಚ್ಚಿತ್ತು. ಇನ್ನು ಉಷೆ ಹೆಸರಿನಲ್ಲಿ ಇದ್ದ ಚಾನೆಲ್‌ ಅನ್ನು ಉದಯ ಮೂವೀಸ್‌ ಆಗಿ ಬದಲಾಯಿಸಿತ್ತು. ಇದು ಕನ್ನಡದ ಮೊಟ್ಟಮೊದಲ ಮೂವಿ ಚಾನೆಲ್‌ ಎನಿಸಿತ್ತು. ಉದಯ 2 ಅಥವಾ ಯು2 ಹೆಸರಿನಲ್ಲಿ ಇದ್ದ ಮ್ಯೂಸಿಕ್‌ ಚಾನೆಲ್‌ 2006ರಲ್ಲಿ ಆರಂಭವಾಗಿತ್ತು. ಅದನ್ನೀಗ ಉದಯ ಮ್ಯೂಸಿಕ್‌ ಎಂದು ಬದಲಾಯಿಸಲಾಗಿದೆ. ಈ ಎಲ್ಲಾ ಚಾನೆಲ್‌ಗಳ ಹೆಸರೂ ಕೂಡ ಸನ್‌ ಉದಯ ಬ್ರ್ಯಾಂಡ್‌ನಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ.



Source link

Leave a Reply

Your email address will not be published. Required fields are marked *