
ಯಾವುದೇ ಬಂಡವಾಳ ಇಲ್ಲದೇ ಜನರು ಉನ್ನತ ಹಂತಕ್ಕೆ ಹೋಗಿರುವ ಬಗ್ಗೆ ಹಲವಿವೆ. ಪಿತ್ರಾರ್ಜಿತ ಆಸ್ತಿ ಅಥವಾ ತಂದೆ ತಾಯಿಯ ಹಣದ ನೆರವು, ಮನೆ ಇತ್ಯಾದಿ ಯಾವ ಸೌಲಭ್ಯವೂ ಸ್ವಂತವಾಗಿ ಹಣ, ಆಸ್ತಿ ಸಂಪಾದನೆ ಮಾಡುವುದು ನಿಜಕ್ಕೂ ಸಾಧನೆಯೇ. ಈ ವ್ಯಕ್ತಿಯ ಯಾವುದೇ ಶಕ್ತಿಯ ಮೊದಲ ಮುಖ್ಯ ಅಂಶ ಆತನ ಸಂಪಾದನೆಯ. ಹಣ ಸಂಪಾದನೆಗೆ ಬೇಕಾದ ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಬಹಳ ಮುಖ್ಯ.
ಹಣವಂತರಾಗಲು ಮೂರು ಅಂಶಗಳಿರಬೇಕು. ಹಣ ಗಳಿಕೆ, ಹಣ ಉಳಿಸುವಿಕೆ ಮತ್ತು ಹಣ ಹೂಡಿಕೆ. ಹಣ ಗಳಿಕೆಗೆ ಬೇಕಾಗಿರುವುದು ಕೌಶಲ್ಯ. ತಂತ್ರಜ್ಞಾನ, ಎಂಜಿನಿಯರಿಂಗ್, ಫೈನಾನ್ಸ್, ಬ್ಯೂಸಿನೆಸ್ ಇತ್ಯಾದಿ ಕೌಶಲ್ಯಗಳನ್ನು ಕಲಿತಿರಬೇಕು.
ಇದನ್ನೂ ಓದಿ: ಹೂಡಿಕೆಗೆ ಯಾವ ರೀತಿಯ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು? ಗಮನಿಸಬೇಕಾದ ಅಂಶಗಳಿವು
ಹಣಕಾಸು ಶಿಸ್ತು
ಹೆಚ್ಚೆಚ್ಚು ಹಣ ಸಂಪಾದಿಸುವುದು ಎಷ್ಟು ಮುಖ್ಯವೋ, ಸಾಧ್ಯವಾದಷ್ಟೂ ಹಣವನ್ನು ಉಳಿಸುವುದೂ ಅಷ್ಟೇ ಮುಖ್ಯ. ಗಳಿಸಿದ ಹಣದಲ್ಲಿ ಅರ್ಧದಷ್ಟು ಹಣ ಉಳಿಸಲು ಸಾಧ್ಯವಾದರೆ ಬಹಳ ದೊಡ್ಡ ಸಂಗತಿ. ಎಮರ್ಜೆನ್ಸಿ ಫಂಡ್ ಇಟ್ಟಿರುವುದು, ಅಧಿಕ ಬಡ್ಡಿಯ ಸಾಲ ಪಡೆಯುವುದು ಇತ್ಯಾದಿ ಆರ್ಥಿಕ ಶಿಸ್ತನ್ನು ಪಡೆದವರು ಹಣವಂತರಾಗಲು ಸಾಧ್ಯ.
ಹೂಡಿಕೆ
ಉಳಿಸಿದ ಹಣವನ್ನು ಹಾಗೆಯೇ ಇಟ್ಟುಕೊಂಡರೆ ಉಪಯೋಗವಿಲ್ಲ. ತಕ್ಕಮಟ್ಟಿಗೆ ಹಣ ಬೆಳೆಯುವ ಕಡೆ ಅದನ್ನು ಹೂಡಿಕೆ ಮಾಡಬೇಕು. ಫಿಕ್ಸೆಡ್ ಡೆಪಾಸಿಟ್, ಸ್ಮಾಲ್ ಸೇವಿಂಗ್ಸ್ ಸ್ಕೀಮ್, ಮ್ಯೂಚುವಲ್ ಫಂಡ್, ಐಟಿಎಫ್, ರಿಯಲ್ ಎಸ್ಟೇಟ್, ಷೇರುಗಳು ಇತ್ಯಾದಿ ಹಲವು ಹೂಡಿಕೆ ಮಾರ್ಗಗಳಿವೆ. ಐಟಿಎಫ್, ಇಂಡೆಕ್ಸ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ದೀರ್ಘಾವಧಿ ದೃಷ್ಟಿಯಲ್ಲಿ ಸುರಕ್ಷಿತ ಮತ್ತು ಲಾಭದಾಯಕ ಎಂಬುದು ತಿಳಿದಿರುವ ಸಂಗತಿ. ನೀವು ಸಂಪಾದನೆ ಆರಂಭಿಸಿದರೆ ಹೂಡಿಕೆ ಆರಂಭಿಸಿದರೆ ಬಹಳ ದೀರ್ಘಾವಧಿ ಹೂಡಿಕೆ ಮಾಡಬಹುದು. ಹಣದ ಕಾಂಪೌಂಡಿಂಗ್ ಗುಣ ನಿಮಗೆ ವರದಾನವಾಗುತ್ತದೆ.
ಇದನ್ನೂ ಓದಿ: ಮಾರುಕಟ್ಟೆ ಟ್ರೆಂಡ್, ಎಕ್ಸ್‌ಪೆನ್ಸ್ ರೇಶಿಯೋ, ಎಮರ್ಜೆನ್ ಫಂಡ್ ಇತ್ಯಾದಿ.. ಜನಸಾಮಾನ್ಯರು ಮಾಡುವ ಹೂಡಿಕೆ ತಪ್ಪುಗಳಿವು
ನೀವು ಒಮ್ಮೆ ಹಣ ಉಳಿಸಿ, ಅದರಿಂದ ಉತ್ತಮ ಆಸ್ತಿ ಸಂಪಾದನೆ ಆರಂಭಿಸಿದರೆ ಆ ಗುಣ ಶಾಶ್ವತವಾಗಿ ಉಳಿಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ