ಓದಿದ್ದು ಬಿಇ, ಕುರಿ ಕಾಳಗದ ಶೋಕಿ, ಬೆಂಗಳೂರಿಗೆ ನಾಡ ಪಿಸ್ತೂಲ್ ಪೂರೈಸುತ್ತಿದ್ದವನ ಬಂಧನ, ಯಾರು ಇವ್ನು ಇರ್ಫಾನ್? | Be Graduate Arrested For Supplying Illegal Country Made Pistols In Bengaluru Rav

ಬೆಂಗಳೂರಿಗೆ ಅಕ್ರಮವಾಗಿ ನಾಡ ಪಿಸ್ತೂಲ್‌ಗಳನ್ನು ಪೂರೈಸುತ್ತಿದ್ದ ಮಧ್ಯಪ್ರದೇಶದ ಬಿಇ ಪದವೀಧರ ಇರ್ಫಾನ್ ಹೈದರ್ ರಿಜ್ವಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕುರಿ ಕಾಳಗದ ಶೋಕಿಯಿಂದ ಶುರುವಾದ ಗೆಳೆತನವು ಶಸ್ತ್ರಾಸ್ತ್ರ ಪೂರೈಕೆಗೆ ಕಾರಣವಾಗಿದ್ದು, ಆರೋಪಿಯಿಂದ ಪಿಸ್ತೂಲ್‌ ಹಾಗೂ ಗುಂಡುಗಳನ್ನು ವಶಕ್ಕೆ

 ಬೆಂಗಳೂರು (ಮಾ.19): ಅಕ್ರಮವಾಗಿ ಬೆಂಗಳೂರಿಗೆ ನಾಡ ಪಿಸ್ತೂಲ್‌ಗಳನ್ನು ಪೂರೈಸಿದ್ದ ಬಿಇ ಪದವೀಧರನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ

ಮಧ್ಯಪ್ರದೇಶದ ಭೋಪಾಲ್‌ ನಿವಾಸಿ ಇರ್ಫಾನ್ ಬಂಧಿತನಾಗಿದ್ದು, ಆರೋಪಿಯಿಂದ ಮೂರು ನಾಡ ಪಿಸ್ತೂಲ್‌ಗಳು, ಒಂದು ರಿವಾಲ್ವರ್‌ನ ಬಿಡಿಭಾಗಗಳು ಹಾಗೂ 2 ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಅಕ್ರಮವಾಗಿ ನಾಡ ಪಿಸ್ತೂಲ್ ಇಟ್ಟುಕೊಂಡಿದ್ದ ಮಸೂದ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ತನಿಖೆ ಮುಂದುವರಿಸಿದಾಗ ಇರ್ಫಾನ್ ಕುರಿತು ಮಾಹಿತಿ ಸಿಕ್ಕಿದೆ. ಈ ಸುಳಿವು ಆಧರಿಸಿ ಮಧ್ಯಪ್ರದೇಶಕ್ಕೆ ತೆರಳಿದ ಪೊಲೀಸರು, ಆತನ ಮನೆ ಮೇಲೆ ದಾಳಿ ನಡೆಸಿ ಮಾಲಿನ ಸಮೇತ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕುರಿ ಸ್ಪರ್ಧೆ ಶೋಕಿ:

ಇರ್ಫಾನ್ ಬಿಇ ಪದವೀಧರನಾಗಿದ್ದು, ಭೋಪಾಲ್‌ನಲ್ಲಿ ಆತ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಈತನ ತಂದೆ ವಕೀಲರಾಗಿದ್ದರು. ಇರ್ಫಾನ್‌ಗೆ ಕುರಿಗಳ ಕಾಳಗ ಆಯೋಜನೆಯ ಖಯಾಲಿ ಇತ್ತು. ಕುರಿಗಳ ಸ್ಪರ್ಧೆಗೆ ಹೋದಾಗ ಆತನಿಗೆ ಸದ್ದುಗುಂಟೆಪಾಳ್ಯದ ಮಸೂದ್‌ನ ಪರಿಚಯವಾಗಿತ್ತು. ಬಳಿಕ ಇಬ್ಬರಲ್ಲಿ ಒಂದೇ ಶೋಕಿ ಇದ್ದ ಕಾರಣ ಆತ್ಮೀಯತೆ ಬೆಳೆದಿದೆ.

ಈ ಗೆಳೆತನದಲ್ಲಿ ಸ್ನೇಹಿತ ಇರ್ಫಾನ್‌ ಬಳಿ ಕಂಟ್ರಿಮೆಡ್ ಪಿಸ್ತೂಲ್ ಕೊಡಿಸುವಂತೆ ಮಸೂದ್ ಕೇಳಿದ್ದ. ಇದಕ್ಕೆ ಒಪ್ಪಿದ ಆತ, ಭೋಪಾಲ್‌ನ ವ್ಯಕ್ತಿ ಮೂಲಕ ಆತನಿಗೆ ಪಿಸ್ತೂಲ್ ಹಾಗೂ 52 ಜೀವಂತ ಗುಂಡುಗಳನ್ನು ಪೂರೈಸಿದ್ದ. ಇತ್ತೀಚೆಗೆ ಕಾನೂನುಬಾಹಿರವಾಗಿ ಪಿಸ್ತೂಲ್ ಹೊಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಮಸೂದ್ ಹಾಗೂ ಆತನ ಸಹಚರರನ್ನು ಸಿಸಿಬಿ ಬಂಧಿಸಿತ್ತು. ಆಗ ವಿಚಾರಣೆ ವೇಳೆ ಇರ್ಫಾನ್‌ ಬಗ್ಗೆ ಆತ ಬಾಯ್ಬಿಟ್ಟಿದ್ದ. ಈ ಸುಳಿವು ಆಧರಿಸಿ ಸಿಸಿಬಿ ಡಿಸಿಪಿ ರಾಜಾ ಇಮಾಮ್ ಕಾಸಿಂ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಎಂ. ಹೇಮಂತ್ ಕುಮಾರ್ ನೇತೃತ್ವದ ತಂಡವು, ಭೋಪಾಲ್‌ಗೆ ತೆರಳಿ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಗರಕ್ಕೆ ಇದೇ ಮೊದಲು ಪೂರೈಕೆ:

ಬೆಂಗಳೂರಿಗೆ ಇದೇ ಮೊದಲು ಬಾರಿಗೆ ಪಿಸ್ತೂಲ್ ಅನ್ನು ಇರ್ಫಾನ್‌ ಪೂರೈಸಿರುವುದು ಖಚಿತವಾಗಿದೆ. ಆದರೆ 2014ರಲ್ಲಿ ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡಿದ ಸಂಬಂಧ ಆತನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಪಿಸ್ತೂಲ್ ಪೂರೈಕೆ ಮಾಡಿದ್ದ ಮತ್ತೊಬ್ಬನ ಪತ್ತೆಗೆ ಶೋಧ ನಡೆದಿದೆ. ಇದೊಂದು ವ್ಯವಸ್ಥಿತ ಸಂಪರ್ಕ ಜಾಲವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Source link

Leave a Reply

Your email address will not be published. Required fields are marked *