
‘ಧುರಂಧರ್ 2’ ಸಿನಿಮಾ (ಧುರಂಧ 2) ಮಾರ್ಚ್ 19 ರಂದು ರಿಲೀಸ್ ಆಗಲಿದೆ. ಅದಕ್ಕೂ ಒಂದು ದಿನ ಮೊದಲು ಎಲ್ಲ ಕಡೆ ಪೇಯ್ಡ್ ಪ್ರೀಮಿಯರ್‌ಗಳನ್ನು ಆಯೋಜನೆ ಮಾಡಲಾಗಿದೆ. ಹೀಗಾಗಿ, ಒಂದು ದಿನ ಮೊದಲೇ ಅನೇಕರು ಸಿನಿಮಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಚಿತ್ರ ನೋಡಿದ ಅನೇಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಚಿತ್ರ ಪೇಯ್ಡ್ ಪ್ರೀಮಿಯರ್ ನಿಂದಲೇ ಸಿನಿಮಾಗೆ ಭರ್ಜರಿ ಗಳಿಕೆ ಮಾಡಿದೆ. ಇದು ನಿರ್ಮಾಪಕರ ಖುಷಿ ಹೆಚ್ಚಿಸಿದೆ.
‘ಧುರಂಧರ 2’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಲು ಕಾರಣ ಮೊದಲ ಭಾಗ. ‘ಧುರಂಧರ’ ಸಿನಿಮಾ ಹಿಟ್ ಆದ ಬಳಿಕ ‘ಧುರಂಧರ 2’ ಸಿನಿಮಾ ರಿಲೀಸ್ ಆಯಿತು. ವಿಶೇಷ ಎಂದರೆ, ‘ಧುರಂಧರ’ ಸಿನಿಮಾ ಇನ್ನೂ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣುತ್ತಿದೆ.ಹಾಗಾಗಿಯೇ ‘ಧುರಂಧರ 2’ ತೆರೆಗೆ ಅಪ್ಪಳಿಸಿದೆ. ಈ ಚಿತ್ರವನ್ನು ನೋಡಿದ ವೀಕ್ಷಕರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
‘ಧುರಂಧರ್ 2’ ಸಿನಿಮಾ ಪೇಯ್ಡ್ ಪ್ರೀಮಿಯರ್ ಗಳಿಂದಲೇ 50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಈ ಮೊದಲು ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ಪ್ರೀಮಿಯರ್ ಶೋಗಳಿಂದ 25 ಕೋಟಿ ರೂಪಾಯಿಗಳಿಗೆ ದಾಖಲೆ ಮಾಡಿತ್ತು. ಆ ದಾಖಲೆಗಳನ್ನು ‘ಧುರಂಧರ 2’ ಮುರಿದು ಹಾಕಿದೆ. ಪ್ರೀಮಿಯರ್ ಶೋಗಳಿಂದ ‘ಓಜಿ’ ಚಿತ್ರ ಮಾಡಿದ ಗಳಿಕೆಗಿಂತ ದುಪ್ಪಟ್ಟು ಚಿತ್ರಗಳಿಗೆ ‘ಧುರಂಧರ 2’ ಸಿನಿಮಾ ಮಾಡಿದೆ.
ಇಂದು ಯುಗಾದಿ ಪ್ರಯುಕ್ತ ರಾಜ ಇದೆ. ಇದು ‘ಧುರಂಧರ 2’ ಸಿನಿಮಾಗೆ ಸಹಕಾರಿ ಆಗಲಿದೆ. ಈ ಬುಕಿಂಗ್ ಜೋರಾಗಿಯೇ ನಡೆಯುತ್ತಿದೆ. ಹೀಗಾಗಿ, ಮೊದಲ ದಿನ ಸಿನಿಮಾದ ಕಲೆಕ್ಷನ್ 200-300 ಕೋಟಿ ರೂಪಾಯಿ ಆಗಬಹುದು ಎಂದು ಹೇಳಲಾಗಿದೆ. ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಈ ಕಾರಣದಿಂದಲೂ ಚಿತ್ರ ಹೆಚ್ಚು ಗಳಿಕೆ ಮಾಡಬಹುದು.
ಇದನ್ನೂ ಓದಿ: ಆ ವ್ಯಕ್ತಿ ಇಲ್ಲದೆ ಸಿನಿಮಾ ಅಪೂರ್ಣ; ‘ಧುರಂಧರ 2’ ಬಗ್ಗೆ ವೀಕ್ಷಕರ ಅಸಮಾಧಾನ ಏನು?
ರಣವೀರ್ ಸಿಂಗ್, ಸಾರಾ ಅರ್ಜುನ್, ಅರ್ಜುನ್ ರಾಮ್‌ಪಾಲ್, ಸಂಜಯ್ ದತ್ ಮೊದಲಾದವರು ‘ಧುರಂಧರ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಆದಿತ್ಯ ಧಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.