
ಕರ್ನಾಟಕ ಉಪ ಚುನಾವಣೆ ಟಿಕೆಟ್ ಘೋಷಣೆ, ಅಚ್ಚರಿ ತೀರ್ಮಾನ ಕೈಗೊಂಡ ಬಿಜೆಪಿ, ಕಾವು ಪಡೆದುಕೊಂಡಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ಅಚ್ಚರಿ ನಿರ್ಧಾರ ಕೈಗೊಂಡಿದೆ.
ಬೆಂಗಳೂರು (ಮಾ.19) ಕರ್ನಾಟಕ ಉಪ ಚುನಾವಣೆಗೆ ಕಾವು ತೀವ್ರಗೊಂಡಿದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಈ ಬಾರಿ ಬಿಜೆಪಿ ಕೆಲ ಅಚ್ಚರಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ಬಾಗಲಕೋಟೆ ಕ್ಷೇತ್ರದ ಟಿಕೆಟ್ ವೀರಣ್ಣ ಚರಂತಿಮಠ್ಗೆ ನೀಡಲಾಗಿದ್ದರೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಶ್ರೀನಿವಾಸ್ ಟಿ ದಾಸಕರಿಯಪ್ಪ ಪಾಲಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಎಸ್ಟಿ ಸಮುದಾಯದ ನಾಯಕನಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿ ನಿರ್ಧಾರ ಕೈಗೊಂಡಿದೆ.
ಎಸ್ಟಿ ಸಮುದಾಯದ ಉಪಾಧ್ಯಕ್ಷನಿಗೆ ಟಿಕೆಟ್
ದಾವಣಗೆರೆ ಕ್ಣೇತ್ರದಲ್ಲಿಸಿದ್ದೇಶ್ವರ ಬಣದ ಮುಖಂಡ ಶ್ರೀನಿವಾಸ್ ಟಿ ದಾಸಕರಿಯಪ್ಪಗೆ ಟಿಕೆಟ್ ನೀಡಲಾಗಿದೆ. ದಾವಣೆಗರೆಯಲ್ಲಿರವು ಪ್ರಬಲ ಲಿಂಗಾಯತ, ಮರಾಠ ಸಮುದಾಯ ಬಿಟ್ಟು ಎಸ್ ಟಿ ಸಮುದಾಯಕ್ಕೆ ಟಿಕೆಟ್ ಘೋಷಣ ಮಾಡಲಾಗಿದೆ. ದಾವಣೆಗೆರೆ ದಕ್ಷಿಣ ಕ್ಷೇತ್ರದಲ್ಲಿ 13 ಸಾವಿರ ಮತ ಹೊಂದಿರುವ ಎಸ್ ಟಿ ಸಮೂದಾಯಕ್ಕೆ ಇದೀಗ ಟಿಕೆಟ್ ಘೋಷಣೆಯಾಗಿದೆ. ಬಿಜೆಪಿಯ ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷರಾಗಿರುವ ಶ್ರೀನಿವಾಸ್ ಹಲವು ಚುನಾವಣೆಗಳಲ್ಲಿ ಟಿಕೆಟ್ ವಂಚಿತರಾಗಿ ಬೇಸರಗೊಂಡಿದ್ದರು. ಇತ್ತೀಚೆಗೆ ಪಕ್ಷೇತ್ರರಾಗಿ ಸ್ಪರ್ಧೆ ಮಾಡುವ ಕುರಿತು ಶ್ರೀನಿವಾಸ್ ಇಂಗಿತ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಬಾರಿ ಬಿಜೆಪಿ ಪ್ರಬಲ ಸಮುದಾಯದ ಬದಲು ಪರಿಶಿಷ್ಠ ಪಂಗಡಕ್ಕೆ ಅವಕಾಶ ನೀಡಿದೆ.