
ವಿಚ್ಛೇದನದ ಸಮಯದಲ್ಲಿ ಹೆಂಡತಿ ಕೇಳಿದಷ್ಟು ಜೀವನಾಂಶವನ್ನು ಗಂಡ ಕೊಡಬೇಕಾ? ನ್ಯಾಯಾಲಯವು ಯಾವ ಆಧಾರದ ಮೇಲೆ ಜೀವನಾಂಶವನ್ನು ನಿರ್ಧರಿಸುತ್ತದೆ? ಗಂಡನ ಆಸ್ತಿಯಲ್ಲಿ ಹೆಂಡತಿಗೆ ಅರ್ಧದಷ್ಟು ಪಾಲು ಸಿಗುತ್ತದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.<img>ಹೆಂಡತಿ ಕೇಳಿದಷ್ಟು ಹಣ ಕೊಡಲು ಜೀವನಾಂಶವೇನು ‘ಬ್ಲಾಂಕ್ ಚೆಕ್’ ಅಲ್ಲ. ಕೋರ್ಟ್ ಜೀವನಾಂಶದ ಮೊತ್ತವನ್ನು ನಿರ್ಧರಿಸುವ ಮುನ್ನ ಹಲವು ಅಂಶಗಳನ್ನು ಪರಿಶೀಲಿಸುತ್ತದೆ. ದಂಪತಿ ಯಾಕೆ ಬೇರೆಯಾಗುತ್ತಿದ್ದಾರೆ, ಇದರಲ್ಲಿ ಗಂಡನ ತಪ್ಪಿದೆಯೇ ಎಂಬುದನ್ನು ಮೊದಲು ನೋಡುತ್ತದೆ.<img>ಕೋರ್ಟ್, ಹೆಂಡತಿ ಓದಿದ್ದಾರಾ, ಸ್ವಂತವಾಗಿ ದುಡಿಯುವ ಶಕ್ತಿ ಇದೆಯಾ ಎಂದು ಪರಿಶೀಲಿಸುತ್ತದೆ. ಮಕ್ಕಳ ಜವಾಬ್ದಾರಿ ಯಾರ ಮೇಲಿದೆ ಎನ್ನುವುದೂ ಮುಖ್ಯವಾಗುತ್ತದೆ. ಜೊತೆಗೆ, ಗಂಡನ ಆದಾಯ ಮತ್ತು ಆಸ್ತಿಯ ಸ್ಥಿತಿಗತಿಯನ್ನೂ ಕೋರ್ಟ್ ಅಂದಾಜು ಮಾಡುತ್ತದೆ.<img><p>ಗಂಡ ಎಷ್ಟೇ ಕೋಟ್ಯಧಿಪತಿಯಾಗಿದ್ದರೂ, ವಿಚ್ಛೇದನದ ಸಮಯದಲ್ಲಿ ಆತನ ಆಸ್ತಿಯಲ್ಲಿ ಅರ್ಧದಷ್ಟು ಭಾಗವನ್ನು ಹೆಂಡತಿಗೆ ನೀಡಬೇಕೆಂಬ ನಿಯಮ ಎಲ್ಲೂ ಇಲ್ಲ. </p><img><p>ಹೆಂಡತಿಯರು ಲಕ್ಷಾಂತರ ಅಥವಾ ಕೋಟ್ಯಂತರ ರೂಪಾಯಿ ಜೀವನಾಂಶ ಕೇಳುವುದು ಕೇವಲ ಸಮಯ ವ್ಯರ್ಥವೇ ಹೊರತು, ಅದರಿಂದ ಪ್ರಯೋಜನವಿಲ್ಲ. ಹಾಗಾಗಿ ಗಂಡಂದಿರು ಆತಂಕ ಪಡುವ ಅಗತ್ಯವಿಲ್ಲ.</p><img><p>ವಿಚ್ಛೇದನದ ಸಮಯದಲ್ಲಿ ಜೀವನಾಂಶವನ್ನು ಕೇವಲ ಅಗತ್ಯಗಳು ಮತ್ತು ಜವಾಬ್ದಾರಿಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆಯೇ ಹೊರತು, ಬೇಡಿಕೆಗಳನ್ನು ಆಧರಿಸಿಯಲ್ಲ. </p><img><p>ಈ ಬಗ್ಗೆ ಕಾನೂನಿನ ಅರಿವು ಇಟ್ಟುಕೊಂಡರೆ ಅನಗತ್ಯ ಭಯ ಮತ್ತು ಆತಂಕವನ್ನು ತಪ್ಪಿಸಬಹುದು.</p>
Source link
Divorce Maintenance: ಹೆಂಡತಿ ಕೇಳಿದಷ್ಟು ಜೀವನಾಂಶ ಕೊಡ್ಬೇಕಾ? ಗಂಡಂದಿರಿಗೆ ಈ ಸತ್ಯ ಗೊತ್ತಾದ್ರೆ ನಿರಾಳ!