Headlines

Minor ಡಿಜೆ ಹಳ್ಳಿ ಅಪ್ರಾಪ್ತೆ ಕೊಲೆ ಕೇಸ್ ಸ್ಫೋಟಕ ಮಾಹಿತಿ, ಆರೋಪಿ ಶಬೀಲ್ ಕೌರ್ಯಕ್ಕೆ ಬೆಚ್ಚಿ ಬಿದ್ದ ಬೆಂಗಳೂರು | Dj Halli Shocker Brutal Details Emerge In Minor Fiance Killing In Bengaluru

Minor ಡಿಜೆ ಹಳ್ಳಿ ಅಪ್ರಾಪ್ತೆ ಕೊಲೆ ಕೇಸ್ ಸ್ಫೋಟಕ ಮಾಹಿತಿ, ಆರೋಪಿ ಶಬೀಲ್ ಕೌರ್ಯಕ್ಕೆ ಬೆಚ್ಚಿ ಬಿದ್ದ ಬೆಂಗಳೂರು | Dj Halli Shocker Brutal Details Emerge In Minor Fiance Killing In Bengaluru



Minor ಡಿಜೆ ಹಳ್ಳಿ ಅಪ್ರಾಪ್ತೆ ಕೊಲೆ ಕೇಸ್ ಸ್ಫೋಟಕ ಮಾಹಿತಿ, ಆರೋಪಿ ಶಬೀಲ್ ಕೌರ್ಯಕ್ಕೆ ಬೆಚ್ಚಿ ಬಿದ್ದ ಬೆಂಗಳೂರು | Dj Halli Shocker Brutal Details Emerge In Minor Fiance Killing In Bengaluru

ಡಿಜೆ ಹಳ್ಳಿ ಅಪ್ರಾಪ್ತೆ ಕೊಲೆ ಕೇಸ್ ಸ್ಫೋಟಕ ಮಾಹಿತಿ, ಆರೋಪಿ ಶಬೀಲ್ ಕೌರ್ಯಕ್ಕೆ ಬೆಚ್ಚಿ ಬಿದ್ದ ಬೆಂಗಳೂರು, ಅಪ್ರಾಪ್ತೆಯನ್ನು ಪಾಳು ಬಿದ್ದ ಮನೆಗೆ ಕರೆಯಿಸಿ ಅತೀ ಭೀಕರವಾಗಿ ಕೊಲೆ ಮಾಡಿದ ಘಟನೆ ಬಹಿರಂಗವಾಗಿದೆ. 

ಬೆಂಗಳೂರು (ಮಾ.19) ಡಿಜೆ ಹಳ್ಳಿಯಲ್ಲಿ ಎರಡು ದಿನ ಹಿಂದೆ ನಡೆದ ಕೊಲೆ ಪ್ರಕರಣ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಅನುಮಾನದಿಂದ ಅಪ್ರಾಪ್ತೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿ ಶಬೀಲ್ ನಾಪತ್ತೆಯಾಗಿದ್ದು, ಪೊಲೀಸರ ಹುಡುಕಾಟ ತೀವ್ರಗೊಂಡಿದೆ. ಡಿಜೆ ಹಳ್ಳಿಯ ಪಾಳು ಬಿದ್ದ ಮನೆಗೆ ಅಪ್ರಾಪ್ತಯನ್ನು ಕರೆಯಿಸಿಕೊಂಡಿದ್ದಾನೆ. ಬಳಿಕ ಅಪ್ರಾಪ್ತೆಯ ಗುಪ್ತಾಂಗಕ್ಕೆ ಚಾಕು ಇರಿದಿದ್ದಾನೆ. ಅತೀವ ನೋವಿನಿಂದ ನರಳಾಡುತ್ತಿದ್ದ ಅಪ್ರಾಪ್ತೆ ಕತ್ತು ಸೀಳಿ ಕೊಲೈಗೆದ ಘಟನೆ ಬಹಿರಂಗವಾಗಿದೆ.ಘಟನೆ ನಡೆದು ಎರಡ ದಿನವಾದರೂ ಆರೋಪಿ ಶಬೀಲ್ ಪತ್ತೆಯಾಗಿಲ್ಲ.

ಅಪ್ರಾಪ್ತೆ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ಶಬೀಲ್

ಆರೋಪಿ ಶಬೀಲ್ ಬೆಂಗಳೂರು ನಿವಾಸಿಯಾಗಿದ್ದರೆ, ಕೊಲೆಯಾದ ಅಪ್ರಾಪ್ತೆ ಕೋಲಾರ ನಿವಾಸಿ. ಇವರ ನಿಶ್ಚಿತಾರ್ಥ್ ಜೂನ್ ತಿಂಗಳಲ್ಲಿ ನಡೆದಿತ್ತು. ಇತ್ತೀಚೆಗೆ ರಂಜಾನ್ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಅಪ್ರಾಪ್ತೆ ಆಗಮಿಸಿದ್ದರು. ಇದರ ನಡುವೆ ಅಪ್ರಾಪ್ತೆ ಹಾಗೂ ಶಬೀಲ್ ರಹಸ್ಯವಾಗಿ ಭೇಟಿಯಾಗುತ್ತಿದ್ದರು. ಪೋಷಕರು, ಮನೆಯವರು ಯಾರಿಗೂ ತಿಳಿಯದೇ ಇಬ್ಬರು ಭೇಟಿಯಾಗುತ್ತಿದ್ದರು. ಇತ್ತ ಶಬೀಲ್ ಮನೆಯಲ್ಲಿ ಇಬ್ಬರು ಪಾಳು ಬಿದ್ದ ಮನೆಯಲ್ಲಿ ಭೇಟಿಯಾಗುತ್ತಿರುವ ಮಾಹಿತಿ ಕೆಲವರಿಗೆ ಇದ್ದರೂ ಮದುವೆಯಾಗುತ್ತಾರೆ ಎಂದು ಸುಮ್ಮನಾಗಿದ್ದರು.

ಅಪ್ರಾಪ್ತೆ ಮೇಲೆ ಅನುಮಾನಗೊಂಡ ಶಬೀಲ್ ಎರಡು ದಿನದ ಹಿಂದೆ ಭೇಟಿಯಾಗಿದ್ದಾರೆ. ಫೋನ್ ಮೂಲಕ ಪಾಳು ಬಿದ್ದ ಮನೆಗೆ ಬರುವಂತೆ ಶಬೀಲ್ ಸೂಚಿಸಿದ್ದಾನೆ. ಎಂದಿಂತೆ ಯಾರಿಗೂ ತಿಳಿಯದಂತೆ ಅಪ್ರಾಪ್ತೆ ಶಬೀಲ್ ಭೇಟಿಯಾಗಲು ಡಿಜೆ ಹಳ್ಳಿಯ ಪಾಳುಬಿದ್ದ ಮನೆಗೆ ತೆರಳಿದ್ದಾಳೆ. ಮೊಬೈಲ್ ಫೋನ್ ಮನೆಯಲ್ಲೇ ಇಟ್ಟು ಶಬೀಲ್ ಭೇಟಿಗೆ ಹೋಗಿದ್ದಾಳೆ. ಅಪ್ರಾಪ್ತೆ ಆಗಮಿಸಿದ ಬಳಿಕ ಆಕೆಯ ಮೇಲೆ ಎರಗಿದ್ದಾನೆ. ಮೊದಲು ಎದೆಯ ಭಾಗ ಹರಿತ ಚಾಕುವಿನಿಂದ ಸೀಳಿದ್ದಾನೆ. ಬಳಿಕ ಗುಪ್ತಾಂಗಕ್ಕೆ ಚಾಕು ಇರಿದಿದ್ದಾನೆ. ಇದಾದ ಬಳಿಕ ಅಪ್ರಾಪ್ತಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.

ಸಂಜೆಯಾದರೂ ಅಪ್ರಾಪ್ತೆ ನಾಪತ್ತೆ

ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿದ್ದ ಅಪ್ರಾಪ್ತೆ ಸಂಜೆಯಾದರೂ ಮನೆಗೆ ಮರಳಿಲ್ಲ. ಇತ್ತ ಕೋಲಾರದಲ್ಲಿರುವ ಪೋಷಕರು ಕರೆ ಮಾಡಿದ್ದಾರೆ. ಈ ವೇಳೆ ಫೋನ್ ಮನೆಯಲ್ಲೇ ಇಟ್ಟಿದ್ದಾಳೆ. ಹೀಗಾಗಿ ಹುಡುಕಾಟ ಆರಂಭಗೊಂಡಿದೆ. ಶಬೀಲ್ ಮನೆಯವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ವೇಳೆ ಪಾಳು ಬಿದ್ದ ಮನೆಯಲ್ಲಿ ಶಬೀಲ್ ಹಾಗೂ ಅಪ್ರಾಪ್ತೆ ಭೇಟಿಯಾಗುತ್ತಿರುವುದಾಗಿ ಮಾಹಿತಿ ಸಿಕ್ಕಿದೆ. ಹೀಗಾಗಿ ಡಿಜೆ ಹಳ್ಳಿಯ ಪಾಳು ಬಿದ್ದ ಮನೆಯತ್ತ ಓಡೋಡಿ ಹೋಗಿದ್ದಾರೆ. ಅಷ್ಟರಲ್ಲೇ ಅಪ್ರಾಪ್ತೆ ಭೀಕರವಾಗಿ ಕೊಲೆಯಾಗಿದ್ದಳು. ಇತ್ತ ಆರೋಪಿ ಶಬೀಲ್ ನಾಪತ್ತೆಯಾಗಿದ್ದ.

ಡಿಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು

ಘಟನೆ ಸಂಬಂಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ದಿನ ಕಳೆದರೂ ಆರೋಪಿ ಶಬೀಲ್ ಪತ್ತೆಯಾಗಿಲ್ಲ. ಅನುಮಾನದ ಕಾರಣಕ್ಕೆ ಅಪ್ರಾಪ್ತೆ ಕೊಲೆಯಾಗಿದ್ದಾಳೆ. ಇತ್ತ ಪೋಷಕರು ಕಂಗಾಲಾಗಿದ್ದಾರೆ.



Source link

Leave a Reply

Your email address will not be published. Required fields are marked *