Headlines

ಏಕಾಏಕಿ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ! ಇಂದು ಬರೋಬ್ಬರಿ ₹2,780 ಕುಸಿತ; ಯುಗಾದಿಯಂದು ಚಿನ್ನ ಕೊಳ್ಳೋರಿಗೆ ಬಂಪರ್!

ಏಕಾಏಕಿ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ! ಇಂದು ಬರೋಬ್ಬರಿ ₹2,780 ಕುಸಿತ; ಯುಗಾದಿಯಂದು ಚಿನ್ನ ಕೊಳ್ಳೋರಿಗೆ ಬಂಪರ್!

ಏಕಾಏಕಿ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ! ಇಂದು ಬರೋಬ್ಬರಿ ₹2,780 ಕುಸಿತ; ಯುಗಾದಿಯಂದು ಚಿನ್ನ ಕೊಳ್ಳೋರಿಗೆ ಬಂಪರ್!

ಬೆಂಗಳೂರು: ಇಂದು ದೇಶಾದ್ಯಂತ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹೀಗಿರುವಾಗಲೇ ಆಭರಣ ಖರೀದಿಸುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮಾರ್ಚ್ 19ರಂದು ಅತ್ಯಂತ ಕನಿಷ್ಠ ಮೊತ್ತಕ್ಕೆ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದೆ.

ಮದುವೆ, ಯುಗಾದಿ ಹಾಗೂ ರಂಜಾನ್ ಹಬ್ಬ ಹೀಗೆ ಸಾಲು ಸಾಲು ಶುಭ ಸಮಾರಂಭಗಳಿಗೆ ಚಾಲನೆ ಸಿಕ್ಕಿರುವ ಬೆನ್ನಲ್ಲೇ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿರುವುದು ಆಭರಣ ಖರೀದಿಸುವ ಸಾಮಾನ್ಯ ವರ್ಗದ ಜನರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಇದೀಗ ಯುಗಾದಿಯ ಶುಭ ಸಂದರ್ಭದಲ್ಲಿ ಚಿನ್ನ ಖರೀದಿಸಲು ಎದುರು ನೋಡುತ್ತಿದ್ದ ಗ್ರಾಹಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಕುಸಿತ ಕಂಡಿದ್ದು, ಆಭರಣ ಖರೀದಿಸುವವರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಹೌದು, ಮಾರ್ಚ್ 19ರ ಯುಗಾದಿಯ ದಿನದಂದು ಬೆಳಗ್ಗೆ 10.30ರ ಸುಮಾರಿಗೆ 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2780 ರುಪಾಯಿ ಇಳಿಕೆ ಕಂಡಿದೆ. ಈ ಮೂಲಕ ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 15,464 ರುಪಾಯಿಗೆ ಬಂದು ನಿಂತಿದೆ.

ಇನ್ನೊಂದೆಡೆ ಆಭರಣ ಚಿನ್ನ ಎಂದು ಕರೆಸಿಕೊಳ್ಳುವ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕೂಡಾ ಭಾರೀ ಇಳಿಕೆ ಕಂಡಿದೆ. ಇದೀಗ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 2550 ರುಪಾಯಿ ಇಳಿಕೆ ಕಂಡಿದ್ದು, ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,175 ರುಪಾಯಿಗೆ ಬಂದು ನಿಂತಿದೆ.

ಇನ್ನು ಚಿನ್ನ ಮಾತ್ರವಲ್ಲದೇ ಬೆಳ್ಳಿಯ ಬೆಲೆಯಲ್ಲೂ ಕೊಂಚ ಇಳಿಕೆ ಕಂಡಿದೆ. ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಐದು ಸಾವಿರ ರುಪಾಯಿ ಇಳಿಕೆ ಕಂಡಿದೆ. ಮಾರ್ಚ್ 19ರಂದು ಒಂದು ಕೆಜಿ ಬೆಳ್ಳಿ ಬೆಲೆ 2,60,000 ರುಪಾಯಿಗಳಾಗಿವೆ.

ಒಟ್ಟಿನಲ್ಲಿ ಯುಗಾದಿಯ ಶುಭ ಸಂದರ್ಭದಲ್ಲೇ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿರುವುದರಿಂದ ಆಭರಣ ಪ್ರಿಯರು ಚಿನ್ನ ಹಾಗೂ ಬೆಳ್ಳಿ ಖರೀದಿಸಲು ಅಂಗಡಿಗೆ ಮುಗಿ ಬೀಳುವ ಸಾಧ್ಯತೆಯಿದೆ.

Source link

Leave a Reply

Your email address will not be published. Required fields are marked *