
ಪುಟಾಣಿ ಮಕ್ಕಳು (ಚಿಕ್ಕ ಮಕ್ಕಳು) ಏನು ಮಾಡಿದ್ರು ನೋಡೋಕೆ ಚಂದ. ಈ ಪುಟಾಣಿ ತೊಡಲು ನುಡಿಗಳನ್ನು ಕೇಳುವುದು ಇನ್ನು ಚಂದ. ಏನಾದ್ರೂ ಬೈದರೆ, ಹೊಡೆದರೆ ಅಪ್ಪನ ಬಳಿ ಹೋಗಿ ದೂರು ಹೇಳುವುದನ್ನು ನೀವು ಅಮ್ಮ ನೋಡುತ್ತೀರಿ. ಆದರೆ ಈ ಪುಟಾಣಿ ಮಾತ್ರ ಹಾಗೆ ಮಾಡಿಲ್ಲ. ಅಮ್ಮ ಬೈದರೆಂದು ದೇವರ ಮುಂದೆ ಅಳುತ್ತಾ ಅಮ್ಮನ ಬಗ್ಗೆ ದೂರು ಹೇಳಿದೆ. ಈ ಮುದ್ದಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮುಗ್ಧತೆ ಕರಗಿ ಹೋಗಿದ್ದಾರೆ.
ಲವ್ಕುಶ್ ಯಾದವ್ ಬಾಬಾ ನಾಮ್ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿ ಅಮ್ಮ ಬೈದದ್ದಂತಿದೆ. ಇದರಿಂದ ಬೇಸರಗೊಂಡ ಪುಟ್ಟ ಕಂದಮ್ಮ ದೇವರ ಮುಂದೆ ಅಳುತ್ತಾ ಅಮ್ಮನ ಬಗ್ಗೆ ಕಂಪ್ಲೇಂಟ್ ಮಾಡಿರುವುದನ್ನು ನೀವು ನೋಡಬಹುದು. ಅಮ್ಮನತ್ತ ಕೈ ತೋರಿಸಿ ದೇವರ ಮುಂದೆ ದೂರು ಹೇಳುತ್ತಿದೆ ಈ ದೃಶ್ಯ.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಹಗ್ಗ ಎಳೆದ್ರೂ ಕದಲದೇ ನಿಂತಿದ್ದ ಎಮ್ಮೆ ಕರುವಿಗೆ ಸವಾಲು ಹಾಕಿದ ಪುಟಾಣಿ
ಈ ವಿಡಿಯೋ ಅಧಿಕವಾಗಿ ವೀಕ್ಷಿಸಿದ್ದು, ಒಬ್ಬ ಬಳಕೆದಾರ, ಪುಟಾಣಿಯ ದೂರು ಕೇಳಿ ದೇವ್ರು ಖಂಡಿತವಾಗಿ ನಕ್ಕಿರುತ್ತಾರೆ. ಇತರರು, ಮುಗ್ಧತೆ ಅಂದ್ರೆ ಇದೆ ಅಲ್ಲವೇ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ