Headlines

why kids like strangers food : ಮನೆಯಲ್ಲಿ ಹಲವು ವೆರೈಟಿ ತಿನಿಸುಗಳಿದ್ದರೂ ಮಕ್ಕಳಿಗೇಕೆ ಪಕ್ಕದ್ಮನೆ ಊಟನೇ ಇಷ್ಟ | Netizens Asks Why Kids Like Strangers Food After Video Of Kid Asking Food With Stranger Goes Viral

why kids like strangers food : ಮನೆಯಲ್ಲಿ ಹಲವು ವೆರೈಟಿ ತಿನಿಸುಗಳಿದ್ದರೂ ಮಕ್ಕಳಿಗೇಕೆ ಪಕ್ಕದ್ಮನೆ ಊಟನೇ ಇಷ್ಟ | Netizens Asks Why Kids Like Strangers Food After Video Of Kid Asking Food With Stranger Goes Viral



why kids like strangers food : ಮನೆಯಲ್ಲಿ ಹಲವು ವೆರೈಟಿ ತಿನಿಸುಗಳಿದ್ದರೂ ಮಕ್ಕಳಿಗೇಕೆ ಪಕ್ಕದ್ಮನೆ ಊಟನೇ ಇಷ್ಟ | Netizens Asks Why Kids Like Strangers Food After Video Of Kid Asking Food With Stranger Goes Viral

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿದ್ದು, ತಂದೆಯ ತೋಳಲ್ಲಿದ್ದ ಮಗುವೊಂದು ಅಪರಿಚಿತ ಯುವತಿಯ ಬಳಿ ತಿಂಡಿಗಾಗಿ ಕೈಚಾಚಿದೆ. ಈ ಮುದ್ದಾದ ಆದರೆ ಮುಜುಗರದ ಸನ್ನಿವೇಶವು ಅನೇಕರಿಗೆ ತಮ್ಮ ಬಾಲ್ಯ ಮತ್ತು ಮಕ್ಕಳ ಇದೇ ರೀತಿಯ ವರ್ತನೆಯನ್ನು ನೆನಪಿಸಿದೆ.

ಪುಟ್ಟ ಮಕ್ಕಳಿಗೆ ಮನೆ ಊಟಕ್ಕಿಂತ ಹೊರಗಿನ ಊಟವೇ ಬಲು ಇಷ್ಟ:

ಪುಟ್ಟ ಮಕ್ಕಳಿಗೆ ಮನೆಯಲ್ಲಿ ತಿಂದು ಬಿಡಿಯುವಷ್ಟು ತಂದು ಹಾಕಿದರು ಅದ್ಯಾವುದು ಅವರಿಗೆ ಇಷ್ಟವಾಗುವುದಿಲ್ಲ, ಬೇರೆಯವರ ಕೈಗಳಲ್ಲಿರುವ ತಿನಿಸುಗಳೇ ಮಕ್ಕಳಿಗೆ ತುಂಬಾ ಇಷ್ಟ, ನೀವೆಷ್ಟೇ ಸೊಗಸಾಗಿ ತಿನಿಸುಗಳನ್ನು ಮಾಡಿಕೊಡಿ, ಅಥವಾ ಶಾಪ್‌ಗಳಿಂದ ತಂದು ಕೊಡಿ ಪುಟ್ಟ ಮಕ್ಕಳು ಬೇರೆಯವರ ಕೈನಲ್ಲಿರುವ ತಿಂಡಿ ನೋಡಿದರೆ ಕೈ ಚಾಚುತ್ತಾರೆ. ಇದು ಮಕ್ಕಳ ಸಹಜ ಲಕ್ಷಣ. ತಮ್ಮ ಮನೆಯಲ್ಲಿ ಅಮ್ಮ ಎಷ್ಟೇ ರುಚಿರುಚಿಯಾಗಿ ಮಾಡಿದ್ರು ಪಕ್ಕದ ಮನೆಯ ಊಟವೇ ಅನೇಕರಿಗೆ ಇಷ್ಟವಾಗುವಂತೆ ಇದು ಕೂಡ ಹಾಗೆಯೇ. ಮಕ್ಕಳು ಮಾಡುವುದನ್ನು ನೋಡಿ ಪೋಷಕರಿಗೆ ಟೆನ್ಶನ್ ಆಗುತ್ತೆ. ಹೋದ ಕಡೆಗಳಲ್ಲಿ ಈ ಮಕ್ಕಳ ವರ್ತನೆ ನೋಡಿದರೆ ಮನೆಯಲ್ಲಿ ಪೋಷಕರು ಇವರಿಗೆ ಊಟನೇ ಹಾಕೋದಿಲ್ವೇನೋ ಅನ್ನೋ ತರ ಆಡ್ತಾರೆ. ಬೇರೆಯವರ ಮನೆಯಲ್ಲಿ ಇಷ್ಟಪಟ್ಟು ತಿನ್ನುವ ಮಕ್ಕಳಿಗೆ ತಮ್ಮ ಮನೆಯ ಊಟ ಎಷ್ಟೇ ರುಚಿಯಾಗಿದ್ದರೂ ಅದೊಂತರ ಅಸಡ್ಡೆ, ಎಲ್ಲಿಯಾದರೂ ಕರೆದುಕೊಂಡು ಹೋದ್ರೆ ಇವ್ರು ಇವ್ರಿಗೆ ನಾವು ಊಟನೇ ಕೊಟ್ಟಿಲ್ವೇನೋ ಅನ್ನೋ ತರ ವರ್ತಿಸ್ತಾರೆ. ಹುಟ್ಟಿದ ಮೇಲೆ ಅವುಗಳನ್ನು ಕಾಣದಂತೆ ವರ್ತಿಸ್ತಾರೆ ಎಂದೆಲ್ಲಾ ಪೋಷಕರು ಮಕ್ಕಳಿಗೆ ಬೈಯುವುದನ್ನು ನೀವು ನೋಡಿರಬಹುದು. 

ಇದೊಂತರ ಮನುಷ್ಯರ ಸಹಜ ಲಕ್ಷಣ, ಬೇಕಾದಷ್ಟು ಇದ್ದರೂ ಬೇರಯವರ ವಸ್ತುಗಳ ಮೇಲೆ ಆಸೆ ಜಾಸ್ತಿ, ಕಂಟ್ರೋಲ್ ಮಾಡಿದಷ್ಟು ಮಕ್ಕಳಿಗೆ ಕುತೂಹಲ ಜಾಸ್ತಿ. ಮನೆಯಲ್ಲಿ ಏನ್ ಕೊಟ್ರು ಬೇಡ, ಅದೇ ಬೇರೆಯವರ ಮನೆಯಲ್ಲಿ ಕೇಳಿ ತಿನ್ತಾರೆ ಈ ಮಕ್ಕಳು. ಹಾಗೆಯೇ ಇಲ್ಲೊಂದು ಕಡೆ ಮಗುವೊಂದು ಅಪರಿಚಿತ ಮಹಿಳೆ ಏನೋ ತಿನ್ತಿರುವಾಗ ಮಗುವೊಂದು ತನಗೂ ನೀಡುವಂತೆ ಕೈ ಚಾಚಿ ಕೇಳಿದ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರಿಗೆ ಇದು ಅವರ ಬಾಲ್ಯವನ್ನು ನೆನಪು ಮಾಡಿದೆ.

ಅಪರಿಚಿತರ ಬಳಿ ಆಹಾರ ಕೇಳಿದ ಮಗು

infobazzarnet ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವೀಡಿಯೋದಲ್ಲಿ ಕಾಣುವಂತೆ ತಂದೆಯೊಬ್ಬರು ತಮ್ಮ ಮಗುವನ್ನು ಹಿಡಿದುಕೊಂಡು ಮನೆ ಮುಂದಿನ ರಸ್ತೆ ಬದಿ ನಿಂತಿರುತ್ತಾರೆ. ಈ ವೇಳೆ ಅದೇ ರಸ್ತೆಯ ಫುಟ್‌ಪಾಥ್ ಮೇಲೆ ಹುಡುಗಿಯೊಬ್ಬಳು ಏನನ್ನೋ ತಿನ್ನುತ್ತಾ ಬರುತ್ತಿದ್ದು, ಆಕೆಯನ್ನು ನೋಡಿ ಅಪ್ಪನ ತೋಳಲ್ಲಿದ್ದ ಮಗು ತನಗೂ ನೀಡುವಂತೆ ಆ ಯುವತಿಯ ಬಳಿ ಕೈ ನೀಡುತ್ತಾಳೆ. ಈ ವೇಳೆ ಅಚ್ಚರಿಯಿಂದಲೇ ಆ ಯುವತಿ ಆ ಪುಟಾಣಿಗೆ ತಾನು ತಿನ್ನುತ್ತಿದ್ದಿದ್ದರಲ್ಲಿ ಪಾಲು ನೀಡಿದ್ದು, ಇದನ್ನು ನೋಡಿ ಮಗುವನ್ನು ಎತ್ತಿಕೊಂಡಿದ್ದ ತಂದೆಗೆ ಶಾಕ್ ಹಾಗೂ ಮುಜುಗರ ಎರಡು ಜೊತೆ ಜೊತೆಗೆ ಆಗಿದ್ದು, ಅವರು ಮುಖ ಮುಚ್ಚಿಕೊಂಡು ನಕ್ಕಿದ್ದಾರೆ. ಅವರು ಅಪರಿಚಿತರಿಂದ ಆಹಾರ ಸ್ವೀಕರಿಸದಂತೆ ಮಗುವಿಗೆ ಸಿಗ್ನಲ್ ನೀಡಿದ್ದರು ಆಕೆ ಮಾತ್ರ ಕೇಳದೇ ಅಪರಿಚಿತ ಯುವತಿ ಕೈನಿಂದ ತಿನಿಸು ಕೇಳಿ ಪಡೆದಿದ್ದಾಳೆ.

ಇದನ್ನೂ ಓದಿ: ಚಿಕ್ಕಮಗಳೂರು: ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಯ್ತು ಕಾಡಾನೆಗಳ ಅಪರೂಪದ ದೃಶ್ಯ

ತಮ್ಮ ಅನುಭವ ಹೇಳಿದ ನೆಟ್ಟಿಗರು

ಈ ವೀಡಿಯೋ ಭಾರಿ ವೈರಲ್ ಆಗಿದ್ದು ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಅನೇಕರು ತಮ್ಮ ಮಕ್ಕಳಿಂದ ತಮಗೂ ಇದೇ ರೀತಿಯ ಅನುಭವ ಆಗಿದ್ದಾಗಿ ಹೇಳಿಕೊಂಡಿದ್ದಾರೆ. ನಾವು ಕಳೆದ ವಾರಾಂತ್ಯದಲ್ಲಿ ಐಸ್ ಕ್ರೀಮ್ ಅಂಗಡಿಗೆ ಹೋಗಿದ್ದೆವು, ನನ್ನ ಮಗ ಅವನ ನೆಚ್ಚಿನ ಮಾವಿನ ಐಸ್‌ಕ್ರೀಂ ಬಿಟ್ಟು ಬಂದ, ನನಗೆ ಏಕೆ ಎಂದು ತಿಳಿಯಲಿಲ್ಲ, ನಂತರ ಅವನು ಅಪರಿಚಿತ ದಂಪತಿಗಳ ಬಳಿಗೆ ಹೋಗಿ ಅವರ ಬಟರ್ ಸ್ಕಾಚ್ ಐಸ್‌ ಕ್ರೀಂ ತಿನ್ನಲು ಹೋದ. ಇದರಿಂದ ನನ್ನ ಹೆಂಡತಿ ತುಂಬಾ ಕೋಪಗೊಂಡಳು ಮತ್ತು ಮುಜುಗರಕ್ಕೊಳಗಾದಳು, ಅವಳು ನನ್ನನ್ನು ಒದೆಯಲು ಶುರು ಮಾಡಿದಳು, ನನಗೆ ಇದೇಕೆ ಹೀಗೆ ಎಂದು ಗೊತ್ತಿಲ್ಲ, ನಾನು ಅವರಿಗೆ ನಮ್ಮ ಐಸ್‌ಕ್ರೀಂ ಆಫರ್ ಮಾಡಿದೆ ಅವರು ಬೇಡ ಎಂದರು ಆದರೆ ನಮ್ಮ ಮಗ ಅವರ ಐಸ್‌ಕ್ರೀಂನ ಅರ್ಧದಷ್ಟು ತಿಂದು ಖಾಲಿ ಮಾಡಿದ ಅವನಿಗೆ 3 ವರ್ಷ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ ದಕ್ಷಿಣ ಬಿಜೆಪಿ ಟಿಕೆಟ್ ಸಿಗ್ತಿದ್ದಂತೆ ಹಮಾಲಿಯಾಗಿದ್ದ ತಂದೆಯ ನೆನೆದು ಭಾವುಕರಾದ ಶ್ರೀನಿವಾಸ್ ದಾಸಕರಿಯಪ್ಪ

ತಮಾಷೆಯೆಂದರೆ, ಮನೆಯಲ್ಲಿ ಅವರು ಒಂದೇ ರೀತಿಯ 20 ಬಗೆಯ ತಿಂಡಿಗಳನ್ನು ತಿನ್ನುತ್ತಾರೆ ಮತ್ತು ಅವುಗಳನ್ನು ಅವರು ಹೆಚ್ಚು ಇಷ್ಟಪಡುವುದಿಲ್ಲ, ಆದರೂ ಅಪರಿಚಿತರ ಆಹಾರದ ಮೇಲೆ ಅವರಿಗೆ ಎಲ್ಲಿಲ್ಲದ ಆಸೆ ಏಕೆ ಹೀಗೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. 

ಮಕ್ಕಳಿಗೇಕೆ ಅಪರಿಚಿತರ ಊಟವೆಂದರೆ ಇಷ್ಟ:

ಮಕ್ಕಳು ಸಾಮಾನ್ಯವಾಗಿ ಅಪರಿಚಿತರು ಅಥವಾ ಇತರ ಪರಿಸರಗಳಿಂದ ಬರುವ ಆಹಾರದ ಹೊಸತನ, ಒತ್ತಡದ ಕೊರತೆ ಮತ್ತು ಗೆಳೆಯರ ಪ್ರಭಾವದಿಂದ ಇಷ್ಟಪಡುತ್ತಾರೆ. ಹೊಸಬರ ಬಳಿ ಇರುವ ಆಹಾರ ಮಕ್ಕಲ್ಲಿ ಕುತೂಹಲದ ಜೊತೆ ರೋಮಾಂಚನಗೊಳಿಸುತ್ತದೆ. ಹೀಗಾಗಿಯೇ ಮನೆಯಲ್ಲಿ ಮಾಡುವ ಹಲವು ವೆರೈಟಿ ಅಡುಗೆಗಳ ನಂತರವೂ ಮಕ್ಕಳು ಹೊರಗಿನವರ ಊಟಕ್ಕೆ ಹಂಬಲಿಸುತ್ತಾರೆ.ಚಿಕ್ಕ ಮಕ್ಕಳು ತಮ್ಮ ಗೆಳೆಯರು ಏನು ತಿನ್ನುತ್ತಿದ್ದಾರೆ ಎಂಬುದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ ಮತ್ತು ಆಗಾಗ್ಗೆ ಅದೇ ರೀತಿ ತಿನ್ನಲು ಬಯಸುತ್ತಾರೆ ಎಂದು ಹೇಳುತ್ತಾರೆ ತಜ್ಞರು



Source link

Leave a Reply

Your email address will not be published. Required fields are marked *