Headlines

ಕುಡಿದ ಅಮಲಿನಲ್ಲಿ ಬಿಎಂಟಿಸಿ ಬಸ್ ಚಾಲನೆ: ಸರಣಿ ಅಪಘಾತಗಳಾಗುತ್ತಿದ್ದರೂ ಚಾಲಕರಿಗೆ ಬುದ್ಧಿ ಬರುತ್ತಿಲ್ಲವೇ?

ಕುಡಿದ ಅಮಲಿನಲ್ಲಿ ಬಿಎಂಟಿಸಿ ಬಸ್ ಚಾಲನೆ: ಸರಣಿ ಅಪಘಾತಗಳಾಗುತ್ತಿದ್ದರೂ ಚಾಲಕರಿಗೆ ಬುದ್ಧಿ ಬರುತ್ತಿಲ್ಲವೇ?


ಅಮಲಿನಲ್ಲಿ ಬಿಎಂಟಿಸಿ ಬಸ್ ಚಾಲನೆ: ಸರಣಿ ಅಪಘಾತವಾಗುತ್ತಿದ್ದರೂ ಚಾಲಕರಿಗೆ ಬುದ್ಧಿ ಬರುತ್ತಿಲ್ಲವೇ?

ಬೆಂಗಳೂರು, ಮಾ.19: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಬಿಎಂಟಿಸಿ ಚಾಲಕರ ಅಟ್ಟಹಾಸ ಮುಂದುವರಿದಿದೆ. ನಿನ್ನೆ ರಾತ್ರಿ ಸುಮಾರು 7:30ರ ಸುಮಾರಿಗೆ ಟಿನ್ ಫ್ಯಾಕ್ಟರಿ ಬಳಿ ಮದ್ಯದ ಅಮಲಿನಲ್ಲಿ ಬಸ್ ಓಡಿಸುತ್ತಿದ್ದ ಚಾಲಕನೊಬ್ಬ ಮಹಿಳಾ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದಾನೆ. KA 57 F 3660 ನೋಂದಣಿ ಸಂಖ್ಯೆ ಬಿಎಂಟಿಸಿ ಬಸ್ ಚಾಲಕ ಪೂರ್ಣ ಪ್ರಮಾಣದಲ್ಲಿ ಮದ್ಯ ಸೇವಿಸಿ ಬಸ್ ಚಲಾಯಿಸುತ್ತಿದ್ದ. ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬಸ್ ಓಡಿಸುತ್ತಿದ್ದುದನ್ನು ಕಂಡು ಪ್ರಯಾಣಿಕರು ಭೀತಿಗೊಳಗಾಗಿದ್ದರು. ಚಾಲಕನ ವರ್ತನೆಯಿಂದ ಗಾಬರಿಗೊಂಡ ಮಹಿಳೆಯೊಬ್ಬರು ಬಸ್ ನಿಲ್ಲಿಸುವಂತೆ ಕೇಳಿದ್ದಾರೆ. ಈ ವೇಳೆ ಬಸ್ ನಿಲ್ಲಿಸಿದ ಚಾಲಕ, ಮಹಿಳೆಯ ಜೊತೆ ಉದ್ಧಟತನದಿಂದ ವಾಗ್ವಾದಕ್ಕಿಳಿದಿದ್ದಾನೆ. ಚಾಲಕನ ಅಸಭ್ಯ ವರ್ತನೆ ಮತ್ತು ಆತ ಮದ್ಯ ಸೇವಿಸಿರುವುದನ್ನು ಖಚಿತಪಡಿಸಿಕೊಳ್ಳಲು ಮಹಿಳೆ ತನ್ನ ಮೊಬೈಲ್‌ನಲ್ಲಿ ವಿಡಿಯೋ ಹಿಡಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ವರದಿ: ನಟರಾಜ್ ಟಿವಿ9 ಕನ್ನಡ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 



Source link

Leave a Reply

Your email address will not be published. Required fields are marked *