Headlines

Bengaluru Cab Scam: ₹285ರ ಟ್ರಿಪ್‌ಗೆ ₹5,950 ಬಿಲ್! ಬೆಂಗಳೂರಲ್ಲಿ ಕ್ಯಾಬ್ ಡ್ರೈವರ್‌ಗಳ ಹೊಸ ಕಳ್ಳಾಟ ಬಯಲು | Bengaluru Commuter Exposes Ola Driver S Rs 5950 Fare Scam For Rs 285 Ride Rav

Bengaluru Cab Scam: ₹285ರ ಟ್ರಿಪ್‌ಗೆ ₹5,950 ಬಿಲ್! ಬೆಂಗಳೂರಲ್ಲಿ ಕ್ಯಾಬ್ ಡ್ರೈವರ್‌ಗಳ ಹೊಸ ಕಳ್ಳಾಟ ಬಯಲು | Bengaluru Commuter Exposes Ola Driver S Rs 5950 Fare Scam For Rs 285 Ride Rav



Bengaluru Cab Scam: ₹285ರ ಟ್ರಿಪ್‌ಗೆ ₹5,950 ಬಿಲ್! ಬೆಂಗಳೂರಲ್ಲಿ ಕ್ಯಾಬ್ ಡ್ರೈವರ್‌ಗಳ ಹೊಸ ಕಳ್ಳಾಟ ಬಯಲು | Bengaluru Commuter Exposes Ola Driver S Rs 5950 Fare Scam For Rs 285 Ride Rav

ಬೆಂಗಳೂರಿನಲ್ಲಿ ಓಲಾ ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕರೊಬ್ಬರಿಗೆ ಶಾಕ್! ₹285ರ ಬಾಡಿಗೆ ಬದಲಿಗೆ ಚಾಲಕ ₹5,950 ಕೇಳಿದ್ದಾನೆ. ಹಳೆ ಕ್ಯಾನ್ಸಲೇಷನ್‌ಗೆ ಈ ದುಡ್ಡು ಅಂತ ಹೇಳಿ ಜಗಳಕ್ಕಿಳಿದಿದ್ದಾನೆ. ಓಲಾ ಎಮರ್ಜೆನ್ಸಿ ಸಪೋರ್ಟ್ ಕೂಡ ಕೈಕೊಟ್ಟಿದ್ದು, ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ಟ್ಯಾಕ್ಸಿ ಡ್ರೈವರ್‌ಗಳು ಪ್ರಯಾಣಿಕರನ್ನು ಸುಲಿಯಲು ಹೊಸ ದಾರಿ ಕಂಡುಕೊಂಡಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಜಾಲಹಳ್ಳಿಗೆ ಓಲಾ ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕರೊಬ್ಬರಿಗೆ ವಿಚಿತ್ರ ಅನುಭವವಾಗಿದೆ. ಆ್ಯಪ್‌ನಲ್ಲಿ ₹285 ಎಂದು ತೋರಿಸಿದ ಟ್ರಿಪ್‌ಗೆ, ಡ್ರೈವರ್ ತನ್ನ ಪರ್ಸನಲ್ ಫೋನ್‌ನಲ್ಲಿ ₹5,950 ಬಿಲ್ ತೋರಿಸಿ ಹಣಕ್ಕೆ ಪೀಡಿಸಿದ್ದಾನೆ. ಈ ಘಟನೆಯನ್ನು ಪ್ರಯಾಣಿಕರು ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲ ಚಾಲಕರು ಅಮಾಯಕ ಗ್ರಾಹಕರನ್ನು ಹೇಗೆ ವಂಚಿಸುತ್ತಿದ್ದಾರೆ ಎಂಬುದನ್ನು ಬಯಲು ಮಾಡಿದ್ದಾರೆ.

‘ಹಿಂದೆ ನಾನು ಕೆಲವು ರೈಡ್‌ಗಳನ್ನು ಕ್ಯಾನ್ಸಲ್ ಮಾಡಿದ್ದೆ, ಆ ಹಣವನ್ನು ಈಗ ಕೊಡದಿದ್ದರೆ ತನ್ನ ಅಕೌಂಟ್‌ನಿಂದ ಕಟ್ ಆಗುತ್ತದೆ ಎಂದು ಡ್ರೈವರ್ ವಾದಿಸಿದ. ನನ್ನ ಆ್ಯಪ್‌ನಲ್ಲಿ ₹285 ಮಾತ್ರ ತೋರಿಸುತ್ತಿದೆ ಎಂದು ಹೇಳಲು ಪ್ರಯತ್ನಿಸಿದಾಗ, ಚಾಲಕ ರೇಗಾಡಲು ಶುರು ಮಾಡಿದ. ₹5950 ಕೊಡಲೇಬೇಕು ಎಂದು ಪದೇ ಪದೇ ಪಟ್ಟು ಹಿಡಿದ’ ಎಂದು ಪ್ರಯಾಣಿಕರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಚಾಲಕ ಹೆಚ್ಚಾಗಿ ಕನ್ನಡದಲ್ಲೇ ಮಾತನಾಡುತ್ತಿದ್ದರಿಂದ, ಕನ್ನಡ ಬಾರದ ಪ್ರಯಾಣಿಕರಿಗೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಿ, ಒತ್ತಡದ ಸನ್ನಿವೇಶ ನಿರ್ಮಾಣವಾಗಿತ್ತು. ಈ ಬಗ್ಗೆ ಓಲಾ ಕಂಪನಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ತಕ್ಷಣ ಸಹಾಯ ಸಿಗಬಹುದೆಂದು ನಾನು ಆ್ಯಪ್ ಮೂಲಕ ಓಲಾದ ಎಮರ್ಜೆನ್ಸಿ ಸಪೋರ್ಟ್‌ಗೆ ಕರೆ ಮಾಡಿದೆ. ಆದರೆ, ಅಲ್ಲಿನ ಸಿಬ್ಬಂದಿಯ ಪ್ರತಿಕ್ರಿಯೆ ತುಂಬಾ ನಿರಾಶಾದಾಯಕವಾಗಿತ್ತು. ಅವರು ಉಡಾಫೆಯಿಂದ ವರ್ತಿಸಿದರು ಎಂದು ಪ್ರಯಾಣಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

Scroll to load tweet…

ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಪ್ರಯಾಣಿಕರ ಪರವಾಗಿ ನಿಂತಿದ್ದಾರೆ. ಇಂತಹ ಸಮಯದಲ್ಲಿ ತಕ್ಷಣ ಪೊಲೀಸರಿಗೆ ಕರೆ ಮಾಡಬೇಕಿತ್ತು ಎಂದು ಹಲವರು ಸಲಹೆ ನೀಡಿದ್ದಾರೆ. ‘ಈ ರೀತಿ ಆದಾಗ ತಕ್ಷಣ 112ಕ್ಕೆ ಕರೆ ಮಾಡಿ, ಅವರು 5 ರಿಂದ 10 ನಿಮಿಷದಲ್ಲಿ ಸ್ಥಳಕ್ಕೆ ಬರುತ್ತಾರೆ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.’ನನಗೂ ಹೀಗೆ ಆಗಿದೆ, ಅವರು ‘ಇದು ಎಮರ್ಜೆನ್ಸಿ ಅಲ್ಲ’ ಅಂತ ಹೇಳಿ ಫೋನ್ ಕಟ್ ಮಾಡುತ್ತಾರೆ. ಇದು ನಿಜಕ್ಕೂ ಬೇಸರದ ಸಂಗತಿ’ ಎಂದು ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಮೂರನೇಯವರು, ‘ಈ ಕ್ಯಾಬ್ ಕಂಪನಿಗಳು ಹೆಚ್ಚೆಂದರೆ ಹಣ ವಾಪಸ್ ಕೊಡುತ್ತವೆ ಅಷ್ಟೇ. ಇಂತಹ ಚಾಲಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ, ಇದು ಕಹಿ ಸತ್ಯ’ ಎಂದು ಬರೆದಿದ್ದಾರೆ.

ನಾಲ್ಕನೇಯವರೊಬ್ಬರು, ‘ಇಂಥ ಸಮಸ್ಯೆಗಳಿಗೆ ಒಂದು ಸಿಂಪಲ್ ಸೊಲ್ಯೂಷನ್ ಇದೆ. ನಿಮ್ಮ ಆ್ಯಪ್‌ನಿಂದ ಕ್ಯಾಶ್ ಟ್ರಿಪ್ ಆಯ್ಕೆಯನ್ನು ತೆಗೆದುಹಾಕಿ ಪ್ರಿಪೇಯ್ಡ್ ಮಾಡೆಲ್‌ಗೆ ಬದಲಿಸಿ. ಟ್ರಿಪ್ ಒಪ್ಪಿಕೊಂಡ ನಂತರ ಹಣ ಕಡಿತವಾಗಬೇಕು’ ಎಂದು ಸಲಹೆ ನೀಡಿದ್ದಾರೆ.



Source link

Leave a Reply

Your email address will not be published. Required fields are marked *