
ಪಠಾಣ್, ಮಾರ್ಚ್ 19: ಹರಿತವಾದ ಆಯುಧಗಳ ಜತೆ ಬಂದಿದ್ದ 18 ಮಂದಿ ದುಷ್ಕರ್ಮಿಗಳು ಪೊಲೀಸರನ್ನೇ ಹೆಸರಿಸಿರುವ ಆತಂಕಕಾರಿ ಘಟನೆ ಗುಜರಾತ್ ನಲ್ಲಿ ನಡೆದಿದೆ. ಮಾರ್ಚ್ 15 ರಂದು ರಾತ್ರಿ ಈ ಘಟನೆ ನಡೆದಿದೆ. ಗುಂಪೊಂದು ಕತ್ತಿ, ಮಚ್ಚಿನ ಜತೆ ಹಳ್ಳಿಯಲ್ಲಿರುವ ತೋಟದ ಮನೆಗೆ ನುಗ್ಗಿತ್ತು. ಎರಡು ಪೊಲೀಸ್ ವ್ಯಾನ್ ಸ್ಥಳದಲ್ಲಿ ನಿಂತು ಅಲ್ಲಿಂದ ಹೊರಟುಹೋದವು, ನಂತರ ನಡೆದಿದ್ದು ಹಿಂಸಾಚಾರ.
ಕೆಲವು ದಿನಗಳ ನಂತರ ಅದೇ ಗುಂಪಿನಲ್ಲಿರುವ ಜನರನ್ನು ಬೀದಿಗೆ ಎಳೆದುಕೊಂಡು ಹೋಗಿ ಲಾಠಿ ಏಟು ಕೊಟ್ಟು ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಯಿತು. ಚನಸ್ಮಾ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಸುಮಾರು ಎಂಟು ವಾಹನಗಳಲ್ಲಿ 15 ರಿಂದ 20 ಜನರು ಬಂದು ಭವೇಶ್ ದೇಸಾಯಿ ಅವರ ತೋಟದ ಮನೆಯನ್ನು ಗುರಿಯಾಗಿಸಿಕೊಂಡಿದ್ದರು. ಗೇಟ್‌ಗಳನ್ನು ಬೀಳಿಸಿ, ಅಲ್ಲಿರುವ ವಸ್ತುಗಳನ್ನೂ ಧ್ವಂಸಗೊಳಿಸಿ, ಕೊಲೆ ಬೆದರಿಕೆ ಹಾಕಿದ್ದರು.ಜಿತುಭಾ, ಜಹುಭಾ, ದಲ್ಪುಜಿ ಸೇರಿದಂತೆ ಹಲವರ ಹೆಸರುಗಳು ಮುನ್ನೆಲೆಗೆ ಬಂದಿದ್ದವು. ದೇವಾಲಯದ ದೇಣಿಗೆ ಸಂಬಂಧಿಸಿದ ವಿವಾದವೇ ಹಿಂಸಾಚಾರದ ಮೂಲವಾಗಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ