Headlines

ಕರ್ನಾಟಕದಲ್ಲಿ ಹೇಗಿದೆ ‘ಧುರಂಧರ್ 2’ ಹವಾ? ಗಳಿಕೆ ಎಷ್ಟು?

ಕರ್ನಾಟಕದಲ್ಲಿ ಹೇಗಿದೆ ‘ಧುರಂಧರ್ 2’ ಹವಾ? ಗಳಿಕೆ ಎಷ್ಟು?


ಕರ್ನಾಟಕದಲ್ಲಿ ಹೇಗಿದೆ 'ಧುರಂಧರ 2' ಹವಾ? ಗಳಿಕೆ ಎಷ್ಟು?

ರಣ್ವೀರ್ ಸಿಂಗ್ (ರಣವೀರ್ ಸಿಂಗ್) ನಟನೆಯ ‘ಧುರಂಧರ 2’ ಸಿನಿಮಾ ಇಂದು (ಮಾರ್ಚ್ 19) ಬಿಡುಗಡೆಯಾಗಿದೆ. ‘ಧುರಂಧರ 2’ ಸಿನಿಮಾ ಭಾರತದಾದ್ಯಂತ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ. ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಅದರಲ್ಲೂ ನಿನ್ನೆ (ಮಾರ್ಚ್ 18) ಪೇಯ್ಡ್ ಪ್ರೀಮಿಯರ್ ಶೋಗಳು ಸಹ ಪ್ರದರ್ಶನಗೊಂಡಿದ್ದು, ದುಬಾರಿ ಬೆಲೆಯ ಟಿಕೆಟ್‌ಗಳನ್ನು ಸಹ ಮಾರಾಟ ಮಾಡಲಾಗಿದೆ. ಹಾಗಿದ್ದರೂ ಸಹ ಬಹುಶಃ ಶೋಗಳು ಹೌಸ್ ಫುಲ್ ಆಗಿದ್ದು, ಬೆಂಗಳೂರಿನಲ್ಲಿ ಭರ್ಜರಿ ಕಲೆಕ್ಷನ್ ಅನ್ನೇ ಸಿನಿಮಾ ಮಾಡಿದೆ.

ಕರ್ನಾಟಕದಲ್ಲಿ ‘ಧುರಂಧರ 2’ ಸಿನಿಮಾಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ನಿನ್ನೆ ಸಂಜೆ ಪೇಯ್ಡ್ ಪ್ರೀಮಿಯರ್ ನೋಡಿದವರು ಹಾಗೂ ಇಂದು ಬೆಳಗ್ಗೆ ಶೋ ನೋಡಿದವರು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಸಿನಿಮಾ ನೋಡಿದ ಕೆಲವರಂತೂ ‘ಧುರಂಧರ’ ಭಾಗ 1ಕ್ಕಿಂತ ‘ಧುರಂಧರ 2’ ಸಿನಿಮಾ ಇನ್ನೂ ಚೆನ್ನಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ‘ಧುರಂಧರ 2’ ಬಗ್ಗೆ ಒಳ್ಳೆಯ ಟ್ವಿಟರ್ ವಿಮರ್ಶೆಗಳು ಸಹಿತವಾಗಿವೆ.

ಬೆಂಗಳೂರು ಒಂದರಲ್ಲಿ ನಿನ್ನೆ ಅಂದರೆ ಮಾರ್ಚ್ 18 ರಂದು ಸುಮಾರು 150 ಪೇಯ್ಡ್ ಪ್ರೀಮಿಯರ್ ಶೋಗಳನ್ನು ಪ್ರದರ್ಶಿಸಲಾಗಿದೆ. ಬೆಂಗಳೂರು ಮಾತ್ರವೇ ಅಲ್ಲದೆ ರಾಜ್ಯದ ಕೆಲವು ಪ್ರಮುಖ ನಗರಗಳಲ್ಲಿ ಸಹ ಪೇಯ್ಡ್ ಪ್ರೀಮಿಯರ್ ಶೋಗಳು ಬಂದಿದ್ದು, ನಿನ್ನೆಯ ಪೇಯ್ಡ್ ಪ್ರೀಮಿಯರ್ ಶೋಗಳಿಂದ ಸುಮಾರು 6 ಕೋಟಿ ರೂಪಾಯಿ ಹಣವನ್ನು ‘ಧುರಂಧರ 2’ ಸಿನಿಮಾ ಕಲೆಕ್ಷನ್ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ;ಮತ್ತೆ ಬಂತು ಬೆದರಿಕೆ: ರಣವೀರ್ ಸಿಂಗ್-ದೀಪಿಕಾಗೆ ಭದ್ರತೆ

ನಿನ್ನೆ ‘ಧುರಂಧರ್ 2’ ಸಿನಿಮಾದ ಕನ್ನಡ ಪ್ರದರ್ಶನಗಳು ಸಹ ಬೆಂಗಳೂರಿನಲ್ಲಿ ನಡೆದಿವೆ. ಆದರೆ ಕೊನೆಯ ಕ್ಷಣದಲ್ಲಿ ಅವು ರದ್ದಾದವು. ಹಾಗಿದ್ದರೂ ಸಹ ‘ಧುರಂಧರ 2’ ಸಿನಿಮಾ ಬೆಂಗಳೂರಿನಲ್ಲಿ ಭರ್ಜರಿ ಗಳಿಕೆಯನ್ನೇ ಮಾಡಿದೆ. ಇನ್ನು ದೇಶದಾದ್ಯಂತ ಕೇವಲ ಪೇಯ್ಡ್ ಪ್ರೀಮಿಯರ್ ಗಳಿಂದಲೇ ಸುಮಾರು 50 ರಿಂದ 60 ಕೋಟಿಗೂ ಹೆಚ್ಚು ಮೊತ್ತವನ್ನು ‘ಧುರಂಧರ 2’ ಸಿನಿಮಾ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

‘ಧುರಂಧರ್ 2’ ರಣ್ವೀರ್ ಸಿಂಗ್ ನಟನೆಯ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಅಕ್ಷಯ್ ಖನ್ನಾ, ಸಂಜಯ್ ದತ್, ಆರ್ ಮಾಧವನ್ ಇನ್ನೂ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಆದಿತ್ಯ ಧರ್. ‘ಧುರಂಧರ 2’ ಸಿನಿಮಾ ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಹಾಕಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *