ಮುಂಬೈ: ಮುಂಬರುವ ಐಪಿಎಲ್ 2026 ಸೀಸನ್‌ಗೆ ಭರ್ಜರಿಯಾಗಿ ರೆಡಿಯಾಗುತ್ತಿರುವ ಭಾರತದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್, ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಫಿಟ್ನೆಸ್ ಹಾಗೂ ಆಟದ ಮೇಲೆ ಹೆಚ್ಚು ಗಮನ ಕೊಡಲು, ಅವರು ಮದ್ಯಪಾನವನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡದ ಆಟಗಾರನಾಗಿರುವ ಯುಜುವೇಂದ್ರ ಚಹಲ್, ಎಬಿ ಡಿವಿಲಿಯರ್ಸ್ ಜೊತೆಗಿನ ಪಾಡ್‌ಕಾಸ್ಟ್ ಒಂದರಲ್ಲಿ ತಮ್ಮ ಜೀವನಶೈಲಿಯ ಈ ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ.

ಕಳೆದ ಆರು ತಿಂಗಳಿಂದ ತಾನು ಆಲ್ಕೋಹಾಲ್ ಮುಟ್ಟಿಲ್ಲ ಎಂದು ಚಹಲ್ ಹೇಳಿದ್ದಾರೆ. "ನನಗೆ ಈಗ 35 ವರ್ಷ. ನಾನು ಇನ್ನಷ್ಟು ಆಕ್ಟಿವ್ ಆಗಿರಬೇಕು, ತಂಡಕ್ಕಾಗಿ ನನ್ನ 150% ಶ್ರಮ ಹಾಕಬೇಕು. ಒಬ್ಬ ಸೀನಿಯರ್ ಆಟಗಾರನಾಗಿ, ಯುವ ಆಟಗಾರರಿಗೆ ನಾನೇ ಮಾದರಿಯಾಗಬೇಕು" ಎಂದು ಚಹಲ್ ತಮ್ಮ ಗುರಿ ತಿಳಿಸಿದ್ದಾರೆ.

2025ರ ಸೀಸನ್‌ನಲ್ಲಿನ ತನ್ನ ಪ್ರದರ್ಶನದ ಬಗ್ಗೆ ತನಗೆ ಸಮಾಧಾನ ಇರಲಿಲ್ಲ ಅಂತ ಚಹಲ್ ಒಪ್ಪಿಕೊಂಡಿದ್ದಾರೆ. ಕಳೆದ ಸೀಸನ್‌ನಲ್ಲಿ ಗಾಯದ ಸಮಸ್ಯೆಗಳು ಚಹಲ್ ಅವರನ್ನು ತುಂಬಾ ಕಾಡಿದ್ದವು. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ನಂತರ ಅವರ ಪಕ್ಕೆಲುಬಿಗೆ ಮುರಿತವಾಗಿತ್ತು. ನಂತರ ಬೆರಳಿಗೂ ಗಾಯವಾಗಿತ್ತು.

ಈ ಗಾಯದ ಕಾರಣದಿಂದ, 2025ರ ಐಪಿಎಲ್ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ಚಹಲ್‌ಗೆ ತಮ್ಮ ಎಂದಿನ ಲಯದಲ್ಲಿ ಲೆಗ್ ಸ್ಪಿನ್ ಬೌಲಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ತನ್ನ ದೇಹಕ್ಕೆ ಮೊದಲ ಆದ್ಯತೆ ನೀಡಿ, ಸಂಪೂರ್ಣ ಫಿಟ್ ಆಗಿ ಆಡುತ್ತೇನೆ ಎಂದು ಅವರು ಹೇಳಿದ್ದಾರೆ.

ಕಳೆದ ಸೀಸನ್‌ನಲ್ಲಿ ಚಹಲ್ 14 ಪಂದ್ಯಗಳಿಂದ 16 ವಿಕೆಟ್‌ಗಳನ್ನು ಪಡೆದಿದ್ದರು. ಪಂಜಾಬ್ ತಂಡ ಫೈನಲ್‌ಗೆ ತಲುಪಿತ್ತಾದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು ಕಂಡಿತ್ತು. ಈ ಬಾರಿ ಪಂಜಾಬ್ ಕಿಂಗ್ಸ್ ಜೊತೆ ಸೇರಿ ಕಪ್ ಗೆಲ್ಲಲೇಬೇಕು ಅನ್ನೋ ದೊಡ್ಡ ಗುರಿ ಚಹಲ್‌ಗೆ ಇದೆ.

2023ರ ನಂತರ ಭಾರತ ತಂಡದಲ್ಲಿ ಚಹಲ್‌ಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ, ಈ ಐಪಿಎಲ್ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಭಾರತ ಸೀಮಿತ ಓವರ್‌ಗಳ ತಂಡದಲ್ಲಿ ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್ ತಜ್ಞ ಸ್ಪಿನ್ನರ್‌ಗಳಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

Source link
ಅದೊಂದು ಕಾರಣಕ್ಕಾಗಿ 6 ತಿಂಗಳಿನಿಂದ ಕುಡಿಯೋದು ಪೂರ್ತಿ ಬಿಟ್ಟು ಹೊಸ ಶಪಥ ಮಾಡಿದ ಯುಜುವೇಂದ್ರ ಚಹಲ್!