ರಾಜ್ಯದ ಕಾರಾಗೃಹಗಳಲ್ಲಿ ಡ್ರಗ್ಸ್​ ಪರೀಕ್ಷೆ: ಡ್ರಗ್ಸ್​ ಸೇವನೆಯಲ್ಲಿ ಮಹಿಳಾ ಕೈದಿಗಳೇ ಹೆಚ್ಚು

ರಾಜ್ಯದ ಕಾರಾಗೃಹಗಳಲ್ಲಿ ಡ್ರಗ್ಸ್​ ಪರೀಕ್ಷೆ: ಡ್ರಗ್ಸ್​ ಸೇವನೆಯಲ್ಲಿ ಮಹಿಳಾ ಕೈದಿಗಳೇ ಹೆಚ್ಚು


ರಾಜ್ಯದ ಕಾರಾಗೃಹಗಳಲ್ಲಿ ಡ್ರಗ್ಸ್ ಪರೀಕ್ಷೆ: ಡ್ರಗ್ಸ್ ಸೇವನೆಯಲ್ಲಿ ಮಹಿಳಾ ಕೈದಿಗಳೇ ಹೆಚ್ಚು

ಬೆಂಗಳೂರು, ಮಾರ್ಚ್ 19: ರಾಜ್ಯಾದ್ಯಂತ ಎಲ್ಲಾ ಜೈಲುಗಳಲ್ಲಿ ಮಾದಕ ವಸ್ತು ಪರೀಕ್ಷೆ (ಔಷಧ ಪರೀಕ್ಷೆ) ಒಳಪಡಿಸಲಾಗುತ್ತಿದೆ. ಆ ಮೂಲಕ ಜೈಲುಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯುವ ಕಾರಾಗೃಹ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಹೀಗಾಗಿ ರಾಜ್ಯದ ಎಲ್ಲಾ ಜೈಲುಗಳಲ್ಲಿ ಅಧಿಕಾರಿಗಳು ಪರೀಕ್ಷೆ ಮಾಡಿಸಿದ್ದು, ಮಹಿಳಾ ಕೈದಿಗಳೇ ಹೆಚ್ಚಾಗಿ ಡ್ರಗ್ಸ್ ಸೇವನೆ ಮಾಡಿರೋದು ಪತ್ತೆಯಾಗಿದೆ.

ಮಹಿಳಾ ಕೈದಿಗಳೇ ಹೆಚ್ಚು ಪಾಸಿಟಿವ್

ಡ್ರಗ್ಸ್ ಪರೀಕ್ಷೆ ವೇಳೆ ಮಹಿಳಾ ಕೈದಿಗಳೇ ಹೆಚ್ಚು ಪಾಸಿಟಿವ್ ಎಂಬ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಪಾಸಿಟಿವ್ ಬಂದವರನ್ನ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ನಿಮಾನ್ಸ್‌ಗೆ ಸ್ಯಾಂಪಲ್ ರವಾನಿಸಲಾಗಿದೆ, ವರದಿ ಬಂದ ನಂತರ ವ್ಯಸನದ ಮಟ್ಟ ಎಷ್ಟಿದೆ ಎಂದು ತಿಳಿಯಲಿದೆ. ಆ ಪ್ರಕಾರ ಚಿಕಿತ್ಸೆ ನೀಡಲಾಯಿತು. ಡ್ರಗ್ ಪರೀಕ್ಷೆಯಲ್ಲಿ ಹೆಚ್ಚಾಗಿ ವಿಚಾರಣಾಧೀನ ಕೈದಿಗಳಲ್ಲಿ ಮಾದಕ ವ್ಯಸನ ಹೆಚ್ಚಾಗಿದ್ದು, ಪಾಸಿಟಿವ್ ಬಂದಿದೆ. ಸಜಾ ಕೈದಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯಸನ ಕಂಡು ಬಂದಿಲ್ಲ.

ಯೂರಿನ್ ಬದಲಿಗೆ ನೀರು ಮಿಶ್ರಣ: ಮಹಿಳಾ ಕೈದಿಗಳ ಕಳ್ಳಾಟ

ಇನ್ನು ಯೂರಿನ್ ಸ್ಯಾಂಪಲ್ ಶೇಖರಣೆ ವೇಳೆ ಮಹಿಳಾ ಕೈದಿಗಳು ಕಳ್ಳಾಟವಾಡಿದ್ದಾರೆ. ಯೂರಿನ್ ಬದಲಿಗೆ ಖೈದಿಗಳು ನೀರು ಮಿಶ್ರಣ ಮಾಡಿ ಕೊಟ್ಟಿರುವುದು ಬಯಲಾಗಿದೆ. ಈ ಬಗ್ಗೆ ಮಹಿಳಾ ಕೈದಿಗಳನ್ನ ಕೇಳಿದ್ದಕ್ಕೆ ನಾವು ಯಾಕೆ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಬಳಿಕ ಒತ್ತಾಯ ಮಾಡಿ ಯೂರಿನ್ ಜೊತೆ ನೀರು ಮಿಶ್ರಣ ಮಾಡಿ ಕೊಟ್ಟಿದ್ದಾರೆ. ಹೀಗಾಗಿ ನಿರ್ದಿಷ್ಟ ಪಾಸಿಟಿವ್ ಸಂಖ್ಯೆ ಇನ್ನು ಮುಂದೆ ಇಲ್ಲ. ಸದ್ಯ ಜೈಲಿನ ವೈದ್ಯರು 10ರಷ್ಟು ಮಾತ್ರ ಪರೀಕ್ಷೆ ಮಾಡುತ್ತಿದ್ದಾರೆ. ಹಂತ ಹಂತವಾಗಿ ಮುಂದೆ ಎಲ್ಲರಿಗೂ ಪರೀಕ್ಷೆ ಮಾಡಲು ತಯಾರಿ.

ಇದನ್ನೂ ಓದಿ: ಜೈಲುಗಳಲ್ಲಿ ಡ್ರಗ್ಸ್ ನೆಟ್ ವರ್ಕ್ ಬ್ರೇಕ್ ಹಾಕಲು ಡಿಜಿಪಿ ಯೋಜನೆ; ರಾಜ್ಯದ ಎಲ್ಲಾ ಜೈಲುಗಳ ಕೈದಿಗಳಿಗೆ ಡ್ರಗ್ಸ್ ಪರೀಕ್ಷೆ!

ಅಧಿಕಾರಿಗಳು ಜೈಲಿನ ವೈದ್ಯರಿಗೆ ಡ್ರಗ್ಸ್ ಟೆಸ್ಟ್ ಕಿಟ್ ಕೊಟ್ಟು ಕೈದಿಗಳಿಗೆ ಪರೀಕ್ಷೆಗಾಗಿ ಸದ್ಯ ಒಟ್ಟು ಐದು ಮಾದರಿಯ ಮಾದಕ ವಸ್ತುಗಳ ಪರೀಕ್ಷೆ ನಡೆಯುತ್ತಿದೆ. ಎಂಡಿಎಂಎ, ಗಾಂಜಾ, ಹೆರಾಯಿನ್, ಕೊಕೇನ್ ಸೇರಿದಂತೆ ಒಟ್ಟು ಐದು ಮಾದರಿಯ ಡ್ರಗ್ ಸೇವನೆ ಪರೀಕ್ಷೆ ನಡೆಯುತ್ತಿದೆ. ಬೆಂಗಳೂರು, ಮೈಸೂರು ಜೈಲಿನಲ್ಲಿ ಎಲ್ಲಾ ಮಾದರಿಯ ಡ್ರಗ್ ಪರೀಕ್ಷೆ ನಡೆದಿದ್ದು, ಉಳಿದ ಜೈಲು ವೈದ್ಯರು ಗಾಂಜಾ ಸೇವನೆ ಪರೀಕ್ಷೆ ಮಾತ್ರ ನಡೆಯುತ್ತಿದೆ.

ವರದಿ: ವಿಕಾಸ್ ಟಿವಿ9 ಕ್ರೈಂ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *