Headlines

ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಕರವಾಗಿ ಕೊಲೆ: ಭಾವಿ ಪತಿ ಅನುಮಾಕ್ಕೆ ಅಪ್ರಾಪ್ತೆ ಬಲಿ

ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಕರವಾಗಿ ಕೊಲೆ: ಭಾವಿ ಪತಿ ಅನುಮಾಕ್ಕೆ ಅಪ್ರಾಪ್ತೆ ಬಲಿ


ಎದೆಯ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಮರಾಗಿ ಕೊಲೆ: ಭಾವಿ ಪತಿ ಅನುಮಾಕ್ಕೆ ಅಪ್ರಾಪ್ತ ಬಲಿ

ಬೆಂಗಳೂರು, ಮಾರ್ಚ್ 19: ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನು ಬೆಂಗಳೂರಿನ ಡಿ.ಜೆ.ಹಳ್ಳಿ ಸಕ್ಕರೆ ಮಂಡ್ಯ ಪಾಳುಮನೆಯಲ್ಲಿ ವ್ಯಕ್ತಿಯೋರ್ವ ಭೀಕರವಾಗಿ ಕೊಲೆ ಪ್ರಕರಣದ ತನಿಖೆ ವೇಳೆ ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿವೆ. ಯುವತಿ ಮೇಲೆ ಆರೋಪಿ ಸೈಯದ್ ಶಬೀಲ್ ಗಿದ್ದ ಅನುಮಾನವೇ ಕೊಲೆಗೆ ಕಾರಣ ಎಂಬುದು ಗೊತ್ತಾಗಿದೆ. ಆಕೆಯನ್ನು ಭೇಟಿಯ ನೆಪದಲ್ಲಿ ಕರೆದಿದ್ದ ಈ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಮತ್ತು ಕುತ್ತಿಗೆ ಕೊಯ್ದು ಹತ್ಯೆ ಮಾಡಿರೋದು ತನಿಖೆ ವೇಳೆ ಬಯಲಾಗಿದೆ. ಘಟನೆ ಬಳಿಕ ನಾಪತ್ತೆಯಾಗಿರುವ ಆರೋಪಿಗಾಗಿ ಪೊಲೀಸರಿಂದ ಶೋಧ ಮುಂದುವರಿದಿದೆ.

ಕೋಲಾರ ಮೂಲದ ಅಪ್ರಾಪ್ತ ಬಾಲಕಿ ಆಗಾಗ ಬೆಂಗಳೂರಿನ ಮನೆಗೆ ಬರುತ್ತಿದ್ದಳು. ಈ ನಡುವೆ ಡಿಜೆ ಹಳ್ಳಿಯ ಈರುಳ್ಳಿ ಮಾರುಕಟ್ಟೆಯಲ್ಲಿ ಕೆಲಸ ಮಾಡ್ತಿದ್ದ ಸೈಯದ್ ಶಬೀಲ್ ಎಂಬ ಯುವಕನ ಜೊತೆ ಆಕೆಗೆ ಪ್ರೀತಿ ಶುರುವಾಗಿತ್ತು. ಆಗಾಗ ಫೋನ್‌ನಲ್ಲಿ ಇವರು ಮಾತನಾಡುತ್ತಿರೋದನ್ನು ಗಮನಿಸಿ, ಪೋಷಕರಿಗೆ ವಿಚಾರ ತಿಳಿಸಿದ್ದರು. ಬಳಿಕ ಆಕೆ ಪ್ರೀತಿಸುತ್ತಿದ್ದವನ ಜೊತೆಯೇ ಮದುವೆ ಮಾಡಲು ಮನೆಯವರು ಮುಂದಾಗಿದ್ದರು. ಅದರಂತೆ ಕಳೆದ 2025ರ ಜೂನ್‌ನಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಕೆಲ ಸಮಯದ ಬಳಿಕ ಮದುವೆಯ ತಯಾರಿಯಲ್ಲಿ ಮನೆಯವರಿದ್ದರು. ಆದರೆ ಇತ್ತೀಚೆಗೆ ಅಪ್ರಾಪ್ತಳ ಮೇಲೆ ಅನುಮಾನ ಪಡಲು ಶುರು ಮಾಡಿದ ಶಬೀಲ್, ವಿವಾಹಕ್ಕೂ ಮೊದಲೇ ಅಟ್ಟಹಾಸ ಮೆರೆದಿದ್ದಾನೆ.

ಇದನ್ನೂ ಓದಿ: ಪಾಳು ಮನೆಯಲ್ಲಿ ಅಪ್ರಾಪ್ತೆಯ ಭೀಕರ ಕೊಲೆ: ಭಾವಿ ಪತಿಯಿಂದಲೇ ನಡೀತು ಹತ್ಯೆ!

ಶಬೀಲ್ ಮನೆಯಿಂದ ಸ್ವಲ್ಪ ದೂರದಲ್ಲಿ ಇರುವ ಸಕ್ಕರೆ ಮಂಡಿ ಪಾಳು ಬಿದ್ದ ಜಾಗದಲ್ಲಿ ಆರೋಪಿ ಶಬೀಲ್ ಮತ್ತು ಅಪ್ರಾಪ್ತ ಯುವತಿ ಇಬ್ಬರೂ ಆಗಾಗ ಭೇಟಿ ಮಾಡಿದರು. ಅದೇ ಜಾಗಕ್ಕೆ ಯುವತಿಯನ್ನು ಈತ ಕರೆದಿದ್ದ. ಹೀಗಾಗಿ ಮನೆಯಲ್ಲೇ ಮೊಬೈಲ್ ಬಿಟ್ಟು ಆಕೆ ಶಬೀಲ್ ನ ಭೇಟಿಗಾಗಿ ತೆರಳಿದ್ದಳು. ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೋದ ಯುವತಿ 10.30 ಆದರೂ ಬಾರದ ಕಾರಣ ಮನೆಯವರು ಹುಡುಕಾಟ ಆರಂಭಿಸಿದ್ದರು. ಶಬೀಲ್ ಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಆತನ ಮನೆಯವರ ಬಳಿ ವಿಚಾರಿಸಿದಾಗ ಅವರಿಬ್ಬರನ್ನು ಭೇಟಿ ಆಗ್ತಿದ್ದ ಜಾಗದ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ರಕ್ತದ ಮಡುವಿನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಅಪ್ರಾಪ್ತ ಶವ ಇತ್ತು. ಒಟ್ಟಿನಲ್ಲಿ ಮದುವೆಯಾಗಿ ಸುಂದರ ಜೀವನ ನಡೆಸುವ ಕನಸು ಕಂಡಿದ್ದ ಯುವತಿಯನ್ನು ತನ್ನ ಅನುಮಾನದ ಭೂತಕ್ಕೆ ಆರೋಪಿ ಶಬೀಲ್ ಬಲಿ ಪಡೆದಿರೋದು ಕುಟುಂಬಸ್ಥರನ್ನು ಬೆಚ್ಚಿ ಬೀಳಿಸಿರೋದಂತೂ ಸತ್ಯ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *