Headlines

ಈ ಕನ್ನಡ ಸೀರಿಯಲ್ಸ್​ ನಟರ ಬದಲಾವಣೆಗೆ ದೇವರ ಮೊರೆ ಹೋದ ವೀಕ್ಷಕರು! ಅಷ್ಟಕ್ಕೂ ಆಗಿದ್ದೇನು?

ಈ ಕನ್ನಡ ಸೀರಿಯಲ್ಸ್​ ನಟರ ಬದಲಾವಣೆಗೆ ದೇವರ ಮೊರೆ ಹೋದ ವೀಕ್ಷಕರು! ಅಷ್ಟಕ್ಕೂ ಆಗಿದ್ದೇನು?

ಈ ಕನ್ನಡ ಸೀರಿಯಲ್ಸ್​ ನಟರ ಬದಲಾವಣೆಗೆ ದೇವರ ಮೊರೆ ಹೋದ ವೀಕ್ಷಕರು! ಅಷ್ಟಕ್ಕೂ ಆಗಿದ್ದೇನು?

ಬಹುತೇಕ ಕನ್ನಡ ಧಾರಾವಾಹಿಗಳು ಮಹಿಳಾ ಪ್ರಧಾನವಾಗಿದ್ದು, ಇದರಲ್ಲಿನ ನಾಯಕ ಪಾತ್ರಗಳನ್ನು ಪೆದ್ದು ಮತ್ತು ಮುಗ್ಧರೆಂದು ಚಿತ್ರಿಸಲಾಗುತ್ತದೆ. ಬ್ರಹ್ಮಗಂಟು, ಅಣ್ಣಯ್ಯ, ನಾ ನಿನ್ನ ಬಿಡಲಾರೆ ಸೀರಿಯಲ್​ಗಳ ನಾಯಕರು ವಿಲನ್​ಗಳ ಅಸಲಿಯತ್ತನ್ನು ತಿಳಿಯದೇ ಇರುವುದು ಪ್ರೇಕ್ಷಕರನ್ನು ಕೆರಳಿಸಿದೆ.

ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ, ಎಲ್ಲಾ ಭಾಷೆಗಳ ಧಾರಾವಾಹಿಗಳೂ ಮಹಿಳಾ ಪ್ರಧಾನವೇ ಆಗಿದೆ. ಇದಕ್ಕೆ ಕಾರಣ ಸಿಂಪಲ್​. ಮಹಿಳಾ ವೀಕ್ಷಕರೇ ಹೆಚ್ಚು ಎನ್ನುವ ಕಾರಣಕ್ಕೆ. ಒಂದು ಹೊತ್ತು ಅಡುಗೆ ಮಾಡುವುದನ್ನು, ಊಟ ಮಾಡುವುದನ್ನು ಬಿಟ್ಟರೂ ಸೀರಿಯಲ್​ ತಪ್ಪಿಸದ ದೊಡ್ಡ ಮಹಿಳಾ ವರ್ಗವೇ ಇದೆ ಎನ್ನುವುದು ಅಧ್ಯಯನ ಕೂಡ ತಿಳಿಸಿದೆ. ಆ ಸೀರಿಯಲ್​ ಪಾತ್ರಗಳಲ್ಲಿ ತಾವೂ ಒಂದಾಗಿ, ಪಾತ್ರಗಳನ್ನೇ ತಮ್ಮ ಮೈಮೇಲೆ ಆಹ್ವಾನಿಸಿಕೊಂಡು ನೋಡುವಲ್ಲಿ ಮಹಿಳೆಯರದ್ದು ಎತ್ತಿದ ಕೈ.

ಇದೇ ಕಾರಣಕ್ಕೆ, ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿ ನಾಯಕರು ಅಥ್ವಾ ಹೀರೋಗಳು ಎಂದರೆ ಮೂರ್ಖರು, ಪೆದ್ದು, ಮುಗ್ಧರು ಇಂಥ ಕ್ಯಾರೆಕ್ಟರ್​ ಇದ್ದರೆ, ವಿಲನ್​ ವಿಷ್ಯಕ್ಕೆ ಬಂದರೆ ಲೇಡಿಗಳೇ ವಿಲನ್​ಗಳು! ಇದು ಸಿನಿಮಾದ ತದ್ವಿರುದ್ಧ. ವಿಲನ್​ಗಳ ಬಂಡವಾಳ ಬಯಲಾಗಿದ್ದರೂ, ಅದನ್ನು ಪೆದ್ದು ನಾಯಕನಿಗೆ ಮಾತ್ರ ಅರ್ಥ ಆಗೋದೇ ಇಲ್ಲ ಎನ್ನುವುದನ್ನೇ ಬಹುತೇಕ ಸೀರಿಯಲ್​ಗಳು ಹೇಳುವುದು ಉಂಟು.

ಅಮೃತಧಾರೆಯಲ್ಲಿ ಶಕುಂತಲಾ ಬಗ್ಗೆ ಎಷ್ಟೋ ಎಪಿಸೋಡ್​ ಆದ್ಮೇಲೆ ಗೌತಮ್​ಗೆ ತಿಳಿದಿದೆ ಎನ್ನೋದೇ ಪುಣ್ಯ. ಸೀತಾರಾಮದಲ್ಲಿ ಭಾರ್ಗವಿ ಬಗ್ಗೆ ರಾಮ್​ಗೆ ವಿಷಯ ಸೀರಿಯಲ್​ ಮುಗಿಯುವ ತನಕವೂ ಗೊತ್ತಾಗಿರಲಿಲ್ಲ. ಶ್ರೀರಸ್ತು ಶುಭಮಸ್ತುವಿನಲ್ಲಿ ಶಾರ್ವರಿ ಬಗ್ಗೆ ಎಲ್ಲರಿಗೂ ಗೊತ್ತಾದ ಬಳಿಕ ಕೊನೆಯಲ್ಲಿ ಮಾಧ​ವ್​ಗೆ ತಿಳಿದಿತ್ತು.

ಆದರೆ ಸದ್ಯ, ಬ್ರಹ್ಮಗಂಟುವಿನಲ್ಲಿ ಸೌಂದರ್ಯ ಬಗ್ಗೆ ಚಿರುಗೆ ವಿಷ್ಯ ಇನ್ನೂ ಗೊತ್ತಾಗಲೇ ಇಲ್ಲ. ಅದೇ ಇನ್ನೊಂದೆಡೆ, ಅಣ್ಣಯ್ಯ ಸೀರಿಯಲ್​ನಲ್ಲಿ ಶಿವುಗೆ ಮಾವನ ಅರ್ಥಾತ್​ ಪಾರು ಅಪ್ಪನ ಅಸಲಿಯತ್ತು ತಿಳಿಯದೇ ಹೋದರೆ, ನಾ ನಿನ್ನ ಬಿಡಲಾರೆ ಸೀರಿಯಲ್​ನಲ್ಲಿ ಶರತ್​ಗೆ ಅಮ್ಮ ಮಾಳವಿಕಾ ಬಗ್ಗೆ ಇನ್ನೂ ಗೊತ್ತಾಗಲಿಲ್ಲ!

ಇದೀಗ Naa Ninna Bidalaare Serialನಲ್ಲಿ ಮಾಯಾ ಒಳ್ಳೆಯವಳಾಗಿದ್ದಾಳೆ. ಅವಳಿಗೆ ಮಾಳವಿಕಾಳ ಮಾಟ, ಮಂತ್ರದ ಬಗ್ಗೆ ತಿಳಿದಿದೆ. ಅದನ್ನು ಶರತ್​ಗೆ ಹೇಳಬೇಕು ಎಂದುಕೊಂಡು ಬಂದರೆ ಶರತ್​, ಅವಳಿಗೆ ಬೈದು ಅಲ್ಲಿಂದ ಹೊರಟು ಹೋಗಿದ್ದಾನೆ.

ಬ್ರಹ್ಮಗಂಟು ಸೀರಿಯಲ್​ನಲ್ಲಿ, ಅತ್ತಿಗೆ ಸೌಂದರ್ಯಳನ್ನೇ ಅಮ್ಮ ಎಂದು ಪ್ರೀತಿಸುತ್ತಿದ್ದಾನೆ ಚಿರು. ಅವಳು ಕಂತ್ರಿ ಎನ್ನುವುದು ಎಷ್ಟೋ ಬಾರಿ ತಿಳಿಯಬೇಕಿತ್ತು. ದೀಪಾ ಹೇಳಿದರೂ ಕೇಳದೇ ಆಕೆಯನ್ನೇ ಸಾವಿನ ಬಾಯಿಗೂ ದೂಡಿ, ಈಗ ಗೋಳೋ ಎನ್ನುತ್ತಿದ್ದಾನೆ.

ಇನ್ನು ಅಣ್ಣಯ್ಯ ಸೀರಿಯಲ್​ನಲ್ಲಿ ಮಾವ ಎಂದರೆ ಶಿವುಗೆ ಪ್ರಾಣ. ಅವನ ನೀಚಬುದ್ಧಿ ಮಗಳು ಪಾರುಗೆ ಗೊತ್ತಾದರೂ ಶಿವುಗೆ ಇನ್ನೂ ಗೊತ್ತಾಗಲಿಲ್ಲ. ಇವೆಲ್ಲಾ ಕಾರಣದಿಂದ ಇದೀಗ ಸೀರಿಯಲ್​ ಪ್ರೇಮಿಗಳು, ದೇವರೇ ಈ ಯುಗಾದಿಯ ಹೊಸ ವರ್ಷದಲ್ಲಾದರೂ ಈ ನಾಯಕರ ಮನಸ್ಥಿತಿಯನ್ನು ಬದಲು ಮಾಡಿ ಪುರುಷರ ಮರ್ಯಾದೆ ಉಳಿಸು ಎಂದು ಬೇಡಿಕೊಳ್ಳುತ್ತಿದ್ದಾರೆ.

Source link

Leave a Reply

Your email address will not be published. Required fields are marked *