Headlines

Eid ul Fitr 2026: ರಂಜಾನ್‌ ಹಬ್ಬಕ್ಕೆ ಶುಭಾಶಯ ನಿಮ್ಮವರಿಗಾಗಿ ತಿಳಿಸಲು ಸುಂದರ ಸಂದೇಶಗಳ ಸಂಗ್ರಹ | Happy Eid Ul Fitr 2026 Wishes In Kannada Quotes Inspiring Messages Greetings Status Images To Share With Loved Ones Mrq

ರಂಜಾನ್ ಉಪವಾಸ ವ್ರತದ ನಂತರ ಆಚರಿಸಲಾಗುವ ಈದ್-ಉಲ್-ಫಿತರ್ ಹಬ್ಬಕ್ಕೆ ಶುಭಾಶಯ ಕೋರಲು ಈ ಲೇಖನವು ಸಹಾಯ ಮಾಡುತ್ತದೆ. ಕುಟುಂಬ, ಪೋಷಕರು, ಸಹೋದರರು ಮತ್ತು ಮಕ್ಕಳು ಸೇರಿದಂತೆ ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಬಹುದಾದ ಸುಂದರ ಸಂದೇಶಗಳ ಸಂಗ್ರಹ ಇಲ್ಲಿದೆ.

Eid-ul-Fitr 2026 messages: ಚಂದ್ರ ದರ್ಶನ ಆಧಾರದ ಮೇಲೆ ರಂಜಾನ್ ಹಬ್ಬದ ಆಚರಣೆಯ ದಿನಾಂಕ ನಿಗಧಿಯಾಗುತ್ತದೆ. ಭಾರತದಲ್ಲಿ ಮಾರ್ಚ್ 20 ಅಥವಾ 21ರಂದು ಈದ್ ಆಚರಣೆಯ ನಿರೀಕ್ಷೆಗಳಿವೆ. ಫೆಬ್ರವರಿ 19ರಂದು ರಂಜಾನ್ ಉಪವಾಸ ವ್ರತದ ಆಚರಣೆ ಆರಂಭವಾಗಿತ್ತು. ಒಂದು ತಿಂಗಳು ಉಪವಾಸ ಆಚರಿಸಿ ಹಬ್ಬದ ದಿನ ಸಿಹಿ ಸೇವಿಸುವ ಮೂಲಕ ಕಠಿಣ ವ್ರತವನ್ನು ಮುಕ್ತಾಯಗೊಳಿಸಲಾಗುತ್ತದೆ. ಪ್ರಾರ್ಥನೆ, ಕುರಾನ್ ಪಠಣ ಮತ್ತು ಜಕಾತ್ ಮತ್ತು ಸದಾಖಾ ಸೇರಿದಂತೆ ದಾನ ದಾನಗಳನ್ನು ಸಹ ಈ ತಿಂಗಳಲ್ಲಿ ಆಚರಿಸಲಾಗುತ್ತದೆ. ಈದ್ ಅಲ್-ಫಿತರ್ ಆಚರಿಸಿದ ನಂತ್ರ ರಂಜಾನ್ ಮಾಸ ಮಕ್ತಾಯವಾಗುತ್ತದೆ.

ಈದ್-ಉಲ್-ಫಿತರ್ (Happy Eid-ul-Fitr 2026) ಹಬ್ಬಕ್ಕೆ ಶುಭಾಶಯ ತಿಳಿಸಲು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಸುಂದರ ಸಾಲುಗಳನ್ನು ಹುಡುಕುತ್ತಿದ್ದೀರಾ? ಈ ಲೇಖನದಲ್ಲಿ ನಿಮಗೆ ವಿಶ್ ಗಳಿವೆ.

1.ಕುಟುಂಬ: ನನ್ನ ಈ ಕುಟುಂಬಕ್ಕೆ ಈದ್ ಮುಬಾರಕ್. ನಮ್ಮ ಕುಟುಂಬ ಎಂದಿನಂತೆ ಸಂತೋಷ ಮತ್ತು ಪ್ರೀತಿಯಿಂದ ತುಂಬಿ ತುಳುಕುತ್ತಿರಲಿ.

2.ತಂದೆ-ತಾಯಿ: ನನಗೆ ಜೀವನದ ಮೌಲ್ಯ, ಉಪವಾಸ ಶಿಸ್ತು ಮತ್ತು ಈದ್ ಮಹತ್ವ ಸೇರಿದಂತೆ ಎಲ್ಲವನ್ನು ಕಲಿಸಿದ ನಿಮಗೆ ಈದ್-ಉಲ್-ಫಿತರ್ ಶುಭಾಶಯಗಳು

3.ಸೋದರ-ಸೋದರಿಯರಿಗೆ: ಇಫ್ತಾರ್‌ನಲ್ಲಿ ಕೊನೆಯ ಖರ್ಜೂರಕ್ಕಾಗಿ ಜಗಳ ಮಾಡಿದ ನಿನಗೆ, ಎಲ್ಲದಕ್ಕೂ ಸಾಥ್ ನೀಡುವ, ಎಷ್ಟೇ ಕಿರಿಕಿರಿ ಮಾಡಿದರೂ ನನ್ನನ್ನು ಪ್ರೀತಿಸುವ ನಿಸ್ವಾರ್ಥದ ಹೃದಯಕ್ಕೆ ಈದ್ ಮುಬಾರಕ್.

4.ಅಜ್ಜ-ಅಜ್ಜಿ ಮತ್ತು ಹಿರಿಯರು: ನಿಮ್ಮೊಂದಿಗಿರುವಾಗ ಸುರಕ್ಷಿತವಾದ ಪ್ರೀತಿಯ ಭಾವನೆ ಇರುತ್ತದೆ. ನಿಮ್ಮ ದುವಾ ಇಡೀ ಕುಟುಂಬ ಸಂತೋಷದಲ್ಲಿರುವಂತೆ ಮಾಡುತ್ತದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ನಿಮಗೆ ಈದ್ ಮುಬಾರಕ್

ಇದನ್ನೂ ಓದಿ: Ramadan 2026: ಇಡೀ ದಿನ ಹಸಿವು ಆಗದಿರಲು ಸೆಹ್ರಿಗೆ ಇದನ್ನೆಲ್ಲಾ ತನ್ನಿ; ಇವುಗಳನ್ನು ಮುಟ್ಟಲೂಬೇಡಿ

5.ಮಕ್ಕಳಿಗೆ: ನಮ್ಮ ಮನೆಯ ಪುಟಾಣಿಗಳಿಗೆ ಈದ್ ಮುಬಾರಕ್. ಇಂದು ನಿಮ್ಮ ಜೇಬುಗಳೆಲ್ಲಾ ಈದಿಯಿಂದ ತುಂಬಿರಲಿ. ತಟ್ಟೆಗಳು ಸಿಹಿತಿಂಡಿಗಳಿಂದ ತುಂಬಿರಲಿ. ನಿಮ್ಮ ಜೀವನ ಸುಖಮಯವಾಗಿರಲಿ.

ಇದನ್ನೂ ಓದಿ: ಸೆಹ್ರಿ ಮತ್ತು ಇಫ್ತಾರ್ ಸಮಯದಲ್ಲಿ ಸೆಲಬ್ರಿಟಿಗಳು ಏನ್ ತಿನ್ತಾರೆ?

Source link

Leave a Reply

Your email address will not be published. Required fields are marked *