IPL 2026: ಸ್ಟಾರ್ ವೇಗಿಗಳಿಗೆ ಇಂಜುರಿ; ಥಂಡಾ ಹೊಡೆದ ತಂಡಗಳು

IPL 2026: ಸ್ಟಾರ್ ವೇಗಿಗಳಿಗೆ ಇಂಜುರಿ; ಥಂಡಾ ಹೊಡೆದ ತಂಡಗಳು


IPL 2026: ಸ್ಟಾರ್ ವೇಗಿಗಳಿಗೆ ಇಂಜುರಿ; ಥಂಡಾ ಹೊಡೆದ ತಂಡಗಳು

ಐಪಿಎಲ್ (IPL 2026) ಆರಂಭಕ್ಕೆ ಇನ್ನು ಹೆಚ್ಚು ದಿನಗಳು ಉಳಿದಿಲ್ಲ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ತಯಾರಿಯಲ್ಲಿ ತೊಡಗಿದ್ದು, ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ತಂತ್ರ ರೂಪಿಸುತ್ತಿವೆ. ಆದಾಗ್ಯೂ ಕೆಲವು ತಂಡಗಳಿಗೆ ಸ್ಟಾರ್ ಆಟಗಾರರ ಇಂಜುರಿ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಸ್ಟಾರ್ ವೇಗಿಗಳೇ ಗಾಯದಿಂದ ಬಳಲುತ್ತಿರುವ ತಂಡಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬೌಲರ್‌ಗಳ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ತಂಡಗಳ ಹಾಲಿ ಪಟ್ಟಿಯಲ್ಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಸನ್‌ರೈಸರ್ಸ್ ಹೈದರಾಬಾದ್ (SRH), ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಸೇರಿದೆ.

ಹೆಜಲ್ವುಡ್ ಬರುವುದು ಯಾವಾಗ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್ವುಡ್ ಗಾಯದಿಂದಾಗಿ ಬಹಳ ದಿನಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಅವರು ಆಶಸ್ ಹಾಗೂ ಟಿ20 ಸಾಧ್ಯವಾಗಿರಲಿಲ್ಲ. ಇದೀಗ ಐಪಿಎಲ್ ಸಮೀಪಿಸುತ್ತಿದೆ, ಅವರು ಐಪಿಎಲ್‌ನಲ್ಲಿ ಆಡುವುದು ಖಚಿತವಾಗಿಲ್ಲ. ಕಳೆದ ಬಾರಿ ಆರ್ಸಿಬಿಯ ವೇಗದ ದಾಳಿಗೆ ಬಲ ತುಂಬಿದ್ದ ಹೇಜಲ್ವುಡ್ ತಂಡವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಬಾರಿ ಅವರ ಲಭ್ಯತೆ ಅನುಮಾನವಾಗಿದೆ.

ಎಸ್ ಆರ್ಹೆಚ್ ನಾಯಕನಿಗೆ ಇಂಜುರಿ

ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಪ್ಯಾಟ್ ಕಮ್ಮಿನ್ಸ್ ಕೂಡ ಗಾಯದಿಂದ ಬಳಲುತ್ತಿದ್ದಾರೆ. ಆಶಾಸ್ ಟೆಸ್ಟೋ ಕಮ್ಮಿನ್ಸ್ ಕಾಣಿಸಿಕೊಂಡಿದ್ದರು. ಅಂದಿನಿಂದ ಕಮ್ಮಿನ್ಸ್ ಕ್ರಿಕೆಟ್ ಆಡಿಲ್ಲ. ಇದೀಗ ಕಮ್ಮಿನ್ಸ್ ಐಪಿಎಲ್‌ನಲ್ಲಿ ಆಡುವುದು ಅನುಮಾನವಾಗಿದೆ. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಪ್ಯಾಟ್ ಕಮ್ಮಿನ್ಸ್ ಬದಲಿಗೆ ಇಶಾನ್ ಕಿಶನ್‌ಗೆ ತಂಡದ ನಾಯಕತ್ವ ವಹಿಸಿದೆ.

ಕೋಲ್ಕತ್ತಾಗೆ ಎರಡೆರಡು

ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೂ ಸ್ಟಾರ್ ವೇಗಿಗಳ ಇಂಜುರಿ ದೊಡ್ಡ ತಲೆನೋವಾಗಿದೆ. ತಂಡದ ಪ್ರಮುಖ ವೇಗಿಗಳಾದ ಹರ್ಷಿತ್ ರಾಣಾ ಮತ್ತು ಮಥಿಶಾ ಪತಿರಾನ ಗಾಯಕರಾಗಿ ಈ ಆವೃತ್ತಿಯಿಂದಲೇ ಹೊರಗುಳಿದಿದ್ದಾರೆ. ಜೊತೆಗೆ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಹೊರ ಹಾಕಿದ ಬಳಿಕ ಇದೀಗ ಕೆಕೆಆರ್ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಸರಬಾನಿಯನ್ನು ಬದಲಿಯಾಗಿ ತಂಡಕ್ಕೆ ಸೇರಿಸಿದೆ.

IPL 2026: ವೃತ್ತಿಜೀವನಕ್ಕಾಗಿ ಮಹಾ ತ್ಯಾಗ ಮಾಡಿದ ಯುಜ್ವೇಂದ್ರ ಚಾಹಲ್

ಸಿಎಸ್ಕೆ ವೇಗಕ್ಕೂ ಗಾಯ

ಇದೀಗ ಐದು ಬಾರಿಯ ತಂಡ ಸಿಎಸ್‌ಕೆ ಸ್ಟಾರ್ ವೇಗದ ಗಾಯದ ಸಮಸ್ಯೆ ದೊಡ್ಡ ಕಾರ್ಯಕ್ರಮ ಎದುರಾಗಿದೆ. ವರದಿಯ ಪ್ರಕಾರ, ಆಸ್ಟ್ರೇಲಿಯಾದ ವೇಗಿ ನಾಥನ್ ಎಲಿಸ್ ಮಂದಿರಜ್ಜು ಗಾಯದಿಂದ ಬಳಲುತ್ತಿದ್ದಾರೆ, ಅವರು ಪಂದ್ಯಾವಳಿಗೆ ಮುನ್ನ ಅಥವಾ ಪಂದ್ಯಾವಳಿ ನಂತರವೂ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಅವರು ಈ ಬಾರಿಯ ಐಪಿಎಲ್‌ನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ. ಇದು ಸಿಎಸ್ಕೆ ಪಾಳಯಕ್ಕೆ ದೊಡ್ಡದಾಗಿದೆ.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *