Headlines

10 ವರ್ಷಗಳ ವಿವಾಹದ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ದಿವ್ಯಾಂಕ, 41ರಲ್ಲಿ ಸ್ವಾಭಾವಿಕ ಗರ್ಭ ಧರಿಸಿದ ನಟಿ! | Divyanka Tripathi Pregnant At 41 Announces Pregnancy With Vivek Dahiya After 10 Years Of Marriage Gdp

10 ವರ್ಷಗಳ ವಿವಾಹದ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ದಿವ್ಯಾಂಕ, 41ರಲ್ಲಿ ಸ್ವಾಭಾವಿಕ ಗರ್ಭ ಧರಿಸಿದ ನಟಿ! | Divyanka Tripathi Pregnant At 41 Announces Pregnancy With Vivek Dahiya After 10 Years Of Marriage Gdp



10 ವರ್ಷಗಳ ವಿವಾಹದ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ದಿವ್ಯಾಂಕ, 41ರಲ್ಲಿ ಸ್ವಾಭಾವಿಕ ಗರ್ಭ ಧರಿಸಿದ ನಟಿ! | Divyanka Tripathi Pregnant At 41 Announces Pregnancy With Vivek Dahiya After 10 Years Of Marriage Gdp

ಖ್ಯಾತ ಟಿವಿ ನಟಿ ದಿವ್ಯಾಂಕ ತ್ರಿಪಾಠಿ ಮತ್ತು ಪತಿ ವಿವೇಕ್ ದಹಿಯಾ ಅವರು ತಮ್ಮ ಮದುವೆಯಾದ 10 ವರ್ಷಗಳ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. 41ನೇ ವಯಸ್ಸಿನಲ್ಲಿ ಸ್ವಾಭಾವಿಕವಾಗಿ ಗರ್ಭಿಣಿಯಾಗಿರುವ ದಿವ್ಯಾಂಕ, ಜೂನ್ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಲಿದ್ದು, ಈ ಸಂತಸದ ಪ್ರಯಾಣವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಖ್ಯಾತ ಟಿವಿ ನಟಿ ದಿವ್ಯಾಂಕ ತ್ರಿಪಾಠಿ ಹಾಗೂ ಅವರ ಪತಿ, ನಟ ವಿವೇಕ್ ದಹಿಯಾ ಅವರು ತಮ್ಮ ಮದುವೆಯಾದ 10 ವರ್ಷಗಳ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಶುಭ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳಿಗೆ ಕಾರಣವಾಗಿದ್ದರೂ, ದಂಪತಿಗಳು ಈಗ ಅದನ್ನು ದೃಢಪಡಿಸಿದ್ದಾರೆ. ಟಿ ದಿವ್ಯಾಂಕ ತ್ರಿಪಾಠಿಗೆ ಈಗ 41 ವರ್ಷ ವಯಸ್ಸು, ಸ್ವಾಭಾವಿಕವಾಗಿ ಗರ್ಭ ಧರಿಸಿದ ಬಗ್ಗೆ ಹೇಳಿಕೊಂಡಿದ್ದಾರೆ.

ಗುರುವಾರ, ದಿವ್ಯಾಂಕ ಮತ್ತು ವಿವೇಕ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಪೋಷಕರಾಗುತ್ತಿರುವ ಫೋಟೋಶೂಟ್‌ನ ಸುಂದರ ಚಿತ್ರಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ. ಆ ಪೋಸ್ಟ್‌ನಲ್ಲಿ ಅವರು ಭಾವನಾತ್ಮಕವಾಗಿ 10 ವರ್ಷಗಳ ನಂತರ ಕಥೆಯಲ್ಲಿ ಒಂದು ಹೊಸ ತಿರುವು. ಕೆಲವು ಪ್ರಯಾಣಗಳು ತ್ವರಿತಗತಿಯಲ್ಲಿ ನಡೆಯುವುದಿಲ್ಲ. ಅವು ಒಟ್ಟಿಗೆ ಸಿದ್ಧರಾಗುವುದರ ಬಗ್ಗೆ. ನಿಮ್ಮ ಕಥೆ ಮುಗಿದಂತಿದೆ ಎಂದು ಭಾಸವಾದಾಗಲೇ, ಜೀವನ ಅತ್ಯಂತ ಸುಂದರವಾದ ಅಧ್ಯಾಯವನ್ನು ಸೇರಿಸುತ್ತದೆ. ನಾವು ಈಗ ನಿರೀಕ್ಷೆಯಲ್ಲಿದ್ದೇವೆ ಎಂದು ಬರೆದಿದ್ದಾರೆ.

ಜೂನ್ ತಿಂಗಳಿನಲ್ಲಿ ಮಗುವಿಗೆ ಜನ್ಮ

ವರದಿಗಳ ಪ್ರಕಾರ, ದಿವ್ಯಾಂಕ ಜೂನ್ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ನಡುವೆ, ದಂಪತಿಗಳು ತಮ್ಮ ಗರ್ಭಧಾರಣೆಯ ಪ್ರಯಾಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಹೊಸ ಯೂಟ್ಯೂಬ್ ಚಾನೆಲ್‌ನ್ನು ಪ್ರಾರಂಭಿಸಿದ್ದು, ಮೊದಲ ವ್ಲಾಗ್‌ನಲ್ಲೇ ಹಲವು ಆಸಕ್ತಿಕರ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ವಿವೇಕ್ ದಹಿಯಾ ತಮ್ಮ ವ್ಲಾಗ್‌ನಲ್ಲಿ, “ಇದು ಸಂಪೂರ್ಣವಾಗಿ ಸ್ವಾಭಾವಿಕ ಗರ್ಭಧಾರಣೆ. ಇಂದಿನ ಯುಗದಲ್ಲಿ ಹಲವು ವೈಜ್ಞಾನಿಕ ವಿಧಾನಗಳು ಲಭ್ಯವಿದ್ದರೂ, ನಾವು ಸಹಜವಾಗಿ ಈ ಸಂತೋಷವನ್ನು ಅನುಭವಿಸುತ್ತಿದ್ದೇವೆ” ಎಂದು ಹೇಳಿದ್ದಾರೆ. ಇದಕ್ಕೆ ದಿವ್ಯಾಂಕ ಸಹ ಒಪ್ಪಿಕೊಂಡು, “ವಿಜ್ಞಾನವು ಅನೇಕ ದಂಪತಿಗಳಿಗೆ ಸಹಾಯ ಮಾಡುತ್ತಿದೆ, ಅದನ್ನು ನಾವು ಗೌರವಿಸುತ್ತೇವೆ” ಎಂದು ಹೇಳಿದ್ದಾರೆ.

ಮಗುವಿನ ಹೆಸರನ್ನು ಇನ್ನೂ ನಿರ್ಧರಿಸದ ದಂಪತಿ

ನಾವು ಈ ಸುದ್ದಿಯನ್ನು ಸುಮಾರು ಆರು ತಿಂಗಳುಗಳ ಕಾಲ ಖಾಸಗಿಯಾಗಿ ಉಳಿಸಿಕೊಂಡಿದ್ದೇವೆ. ನಾವು ಇಬ್ಬರೂ ಈಗ ಮಗುವನ್ನು ಬಯಸಿದ್ದೆವು, ಪ್ರಯತ್ನಿಸಿದ್ದೇವೆ ಮತ್ತು ಅದು ಯಶಸ್ವಿಯಾಯಿತು. ನಾವು ತುಂಬಾ ಧನ್ಯರು ಎಂದು ತಿಳಿಸಿದ್ದಾರೆ. ಕುಟುಂಬದವರಲ್ಲಿಯೂ ಈ ಸುದ್ದಿಯಿಂದ ಅಪಾರ ಸಂತೋಷ ಮೂಡಿದ್ದು, ಜೂನ್ ಮಧ್ಯಭಾಗದಲ್ಲಿ ಮಗುವಿನ ಆಗಮನಕ್ಕೆ ಸಿದ್ಧತೆಗಳು ಆರಂಭವಾಗಿವೆ. ಮಗುವಿನ ಹೆಸರನ್ನು ಇನ್ನೂ ನಿರ್ಧರಿಸದ ದಂಪತಿಗಳು, ಹೆಣ್ಣು ಅಥವಾ ಗಂಡು ಮಗು ಎಂಬುದರ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದಿದ್ದಾರೆ.

ವಿವೇಕ್ ದಹಿಯಾ ತಮ್ಮ ವ್ಲಾಗ್‌ನಲ್ಲಿ ಮತ್ತೊಂದು ವಿಷಯವನ್ನು ಹಂಚಿಕೊಂಡು, “ದಿವ್ಯಾಂಕ ಅವರ ಆರೋಗ್ಯ ಮತ್ತು ಸುರಕ್ಷತೆಗಾಗಿ ಎಲ್ಲಾ ವೈದ್ಯಕೀಯ ಪರೀಕ್ಷೆಗಳು ಪೂರ್ಣಗೊಳ್ಳುವವರೆಗೆ ನಾವು ಈ ವಿಷಯವನ್ನು ಬಹಿರಂಗಪಡಿಸಲು ಇಷ್ಟಪಡಲಿಲ್ಲ. ಈ ಸಮಯದಲ್ಲಿ ಸ್ವಲ್ಪ ಭಯ ಸಹಜವಾಗಿಯೇ ಇರುತ್ತದೆ” ಎಂದು ಹೇಳಿದ್ದಾರೆ.

ದಿವ್ಯಾಂಕ ಮತ್ತು ವಿವೇಕ್ ಅವರ ಪ್ರೇಮಕಥೆ ಕೂಡ ಅಭಿಮಾನಿಗಳಲ್ಲಿ ಬಹಳ ಜನಪ್ರಿಯವಾಗಿದೆ. ಇಬ್ಬರೂ ಮೊದಲ ಬಾರಿ ಏ ಹೇ ಮೊಹಾಬತೇನಿ ಧಾರಾವಾಹಿಯ ಸೆಟ್‌ನಲ್ಲಿ ಭೇಟಿಯಾಗಿ ಸ್ನೇಹಿತರಾದರು. ಬಳಿಕ ಸ್ನೇಹವು ಪ್ರೀತಿಗೆ ತಿರುಗಿತು. ಬಳಿಕ, ಜುಲೈ 8, 2016ರಂದು ಭೋಪಾಲ್‌ನಲ್ಲಿ ಆಪ್ತ ಬಂಧುಗಳು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅವರು ವಿವಾಹವಾಗಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಈ ಜೋಡಿ, ತಮ್ಮ ಜೀವನದ ಪ್ರಮುಖ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ವಾಲೆಂಟೈನ್ಸ್ ಡೇ ಹಾಗೂ ಹೋಳಿ ಹಬ್ಬದ ಸಂದರ್ಭದಲ್ಲಿ ಅವರು ಹಂಚಿಕೊಂಡ ಪೋಸ್ಟ್‌ಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದವು.

ವೃತ್ತಿಜೀವನದ ವಿಚಾರದಲ್ಲಿ, ದಿವ್ಯಾಂಕ ತ್ರಿಪಾಠಿ ಹಲವು ಜನಪ್ರಿಯ ಧಾರಾವಾಹಿಗಳ ಮೂಲಕ ಹೆಸರು ಮಾಡಿದ್ದಾರೆ. ಅವರು 2004ರಲ್ಲಿ ರಿಂದ ಹಲವು ಧಾರಾವಾಹಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿ ಜನಪ್ರಿಯತೆ ಗಳಿಸಿದರು. ಬಳಿಕ ಹಲವು ರಿಯಾಲಿಟಿ ಶೋಗಳಲ್ಲಿಯೂ ಅವರು ಭಾಗವಹಿಸಿದ್ದಾರೆ. ಕೊನೆಯದಾಗಿ, ದಿವ್ಯಾಂಕ Adrishyamನಲ್ಲಿ ಇನ್ಸ್‌ಪೆಕ್ಟರ್ ಪಾರ್ವತಿ ಸೆಹಗಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿತ್ತು.

ಒಟ್ಟಾರೆ, ದಿವ್ಯಾಂಕ ತ್ರಿಪಾಠಿ ಮತ್ತು ವಿವೇಕ್ ದಹಿಯಾ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದ್ದು, ಈ ಸಂತಸದ ಸುದ್ದಿಯನ್ನು ಅಭಿಮಾನಿಗಳು ಹರ್ಷದಿಂದ ಸ್ವಾಗತಿಸಿದ್ದಾರೆ. ಮುಂದಿನ ತಿಂಗಳುಗಳಲ್ಲಿ ಅವರ ಕುಟುಂಬಕ್ಕೆ ಹೊಸ ಸದಸ್ಯರ ಆಗಮನದ ನಿರೀಕ್ಷೆಯಲ್ಲಿರುವ ಈ ಜೋಡಿಗೆ ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆ ಹರಿದುಬರುತ್ತಿದೆ.



Source link

Leave a Reply

Your email address will not be published. Required fields are marked *