ಸಂಖ್ಯಾಶಾಸ್ತ್ರಜ್ಞ ಅಶೋಕ್ ಖರಾತ್ ಕಾಮಕಾಂಡ: ಮಹಿಳೆಯರಿಗೆ ಮೂತ್ರ ಕುಡಿಸಿ ಅ*ತ್ಯಾಚಾ*ರ; 58 ವಿಡಿಯೋಗಳ ರಹಸ್ಯ! | Nashik Numerologist Ashok Kharat Arrest Rape Case Viral Video Investigation San

ಸಂಖ್ಯಾಶಾಸ್ತ್ರಜ್ಞ ಅಶೋಕ್ ಖರಾತ್ ಕಾಮಕಾಂಡ: ಮಹಿಳೆಯರಿಗೆ ಮೂತ್ರ ಕುಡಿಸಿ ಅ*ತ್ಯಾಚಾ*ರ; 58 ವಿಡಿಯೋಗಳ ರಹಸ್ಯ! | Nashik Numerologist Ashok Kharat Arrest Rape Case Viral Video Investigation San



ಸಂಖ್ಯಾಶಾಸ್ತ್ರಜ್ಞ ಅಶೋಕ್ ಖರಾತ್ ಕಾಮಕಾಂಡ: ಮಹಿಳೆಯರಿಗೆ ಮೂತ್ರ ಕುಡಿಸಿ ಅ*ತ್ಯಾಚಾ*ರ; 58 ವಿಡಿಯೋಗಳ ರಹಸ್ಯ! | Nashik Numerologist Ashok Kharat Arrest Rape Case Viral Video Investigation San

ಆಧ್ಯಾತ್ಮಿಕ ಗುರು ‘ಕ್ಯಾಪ್ಟನ್’ ಅಶೋಕ್ ಖರಾತ್, ಮಹಿಳೆಯರಿಗೆ ಮತ್ತು ಬರುವ ಮಾತ್ರೆ ನೀಡಿ ಅ*ತ್ಯಾಚಾ*ರ ಎಸಗಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಧಾರ್ಮಿಕ ವಿಧಿಯ ಹೆಸರಿನಲ್ಲಿ ಆತ ನಡೆಸುತ್ತಿದ್ದ ಘೋರ ಕೃತ್ಯಗಳ ವಿಡಿಯೋಗಳು ಬಯಲಾಗಿದ್ದು, ಈ ಪ್ರಕರಣದ ತನಿಖೆಗಾಗಿ ಸರ್ಕಾರ ಎಸ್‌ಐಟಿ ರಚಿಸಿದೆ.

ನಾಸಿಕ್ (ಮಾ.19): ಆಧ್ಯಾತ್ಮಿಕ ಗುರು, ‘ಕ್ಯಾಪ್ಟನ್’ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಅಶೋಕ್ ಖರಾತ್ ಎಂಬ ಕಾಮಪಿಶಾಚಿಯ ಅಸಲಿ ಮುಖವಾಡ ಈಗ ಕಳಚಿದೆ. ಮಹಿಳೆಯರಿಗೆ ಮತ್ತು ಬರುವ ಮಾತ್ರೆ ನೀಡಿ ಅ*ತ್ಯಾಚಾ*ರ ಎಸಗಿದ ಗಂಭೀರ ಆರೋಪದ ಮೇಲೆ ನಾಸಿಕ್ ಪೊಲೀಸರು ಈತನನ್ನು ಬಂಧಿಸಿದ್ದು, ನ್ಯಾಯಾಲಯವು ಮಾರ್ಚ್ 24ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಈ ಪ್ರಕರಣ ಈಗ ಮಹಾರಾಷ್ಟ್ರದಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಇದರ ನಡುವೆ ಮಹಾರಾಷ್ಟ್ರ ಸರ್ಕಾರ ಅಶೋಕ್‌ ಖರಾತ್‌ ಪ್ರಕರಣದ ತನಿಖೆಗಾಗಿ ಎಸ್‌ಐಟಿ ನೇಮಿಸಿದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಶೋಕ್ ಖರಾತ್‌ನ ವಿಡಿಯೋವೊಂದು ಹರಿದಾಡುತ್ತಿದ್ದು, ಅದನ್ನು ನೋಡಿದರೆ ಯಾರಿಗಾದರೂ ಮೈ ಜುಂ ಎನ್ನುತ್ತದೆ. ಧಾರ್ಮಿಕ ವಿಧಿಯ ಹೆಸರಿನಲ್ಲಿ ಮಹಿಳೆಯ ತಲೆಯ ಮೇಲೆ ತಾಮ್ರದ ಬಿಂದಿಗೆ ಇಟ್ಟು, ಆಕೆಯನ್ನು ಬೆನ್ನ ಹಿಂದೆ ನಿಲ್ಲಿಸಿಕೊಂಡು ಅತ್ಯಂತ ಅಸಹ್ಯಕರವಾಗಿ ವರ್ತಿಸಿರುವುದು ವಿಡಿಯೋದಲ್ಲಿದೆ. ಆಕೆಯ ಬೆನ್ನಹಿಂದೆ ನಿಂತು ತಾಮ್ರದ ಚೊಂಬಿನಲ್ಲಿ ಆತ ಮೂತ್ರ ಮಾಡುತ್ತಿದ್ದ. ಬಳಿಕ ಆಕೆಗೆ ಅದನ್ನು ಕುಡಿಯಲು ಹೇಳುತ್ತಿದ್ದ. ಬಳಿಕ ಆಕೆಯ ಮುಖ ತನ್ನ ಖಾಸಗಿ ಅಂಗದ ಬಳಿ ಇರುವಂತೆ ಮಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಬಯಲಾಯ್ತು 58 ಆಕ್ಷೇಪಾರ್ಹ ವಿಡಿಯೋಗಳು!

ತನಿಖೆಯ ವೇಳೆ ಪೊಲೀಸರು ಅಶೋಕ್ ಖರಾತ್ ಬಳಿಯಿದ್ದ ಸುಮಾರು 58 ವಿಡಿಯೋಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವಿಡಿಯೋಗಳಲ್ಲಿ ಕೆಲವು ಖ್ಯಾತ ಮಹಿಳೆಯರು ಮತ್ತು ಸೆಲೆಬ್ರಿಟಿಗಳು ಇರುವ ಸಾಧ್ಯತೆಯಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. 35 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸರ್ಕಾರವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಲೆಬ್ರಿಟಿಗಳ ನೆಚ್ಚಿನ ತಾಣವಾಗಿದ್ದ ಫಾರ್ಮ್‌ಹೌಸ್!

ಸಿನ್ನರ್ ತಾಲೂಕಿನ ಮಿರ್‌ಗಾಂವ್‌ನಲ್ಲಿರುವ ‘ಈಶಾನ್ಯೇಶ್ವರ ದೇವಾಲಯ’ ಮತ್ತು ಅದರ ಪಕ್ಕದಲ್ಲೇ ಇರುವ ಅಶೋಕ್ ಖರಾತ್‌ನ ಐಷಾರಾಮಿ ಫಾರ್ಮ್‌ಹೌಸ್ ಈಗ ಚರ್ಚೆಯ ಕೇಂದ್ರಬಿಂದುವಾಗಿದೆ. 2010ರಲ್ಲಿ ಸ್ಥಾಪನೆಯಾದ ಈ ಟ್ರಸ್ಟ್‌ನೊಂದಿಗೆ ಖರಾತ್‌ಗೆ ನಿಕಟ ಸಂಬಂಧವಿತ್ತು. ಈ ಫಾರ್ಮ್‌ಹೌಸ್‌ಗೆ ದೊಡ್ಡ ದೊಡ್ಡ ರಾಜಕೀಯ ನಾಯಕರು, ಉದ್ಯಮಿಗಳು ಮತ್ತು ಚಿತ್ರರಂಗದ ತಾರೆಯರು ನಿರಂತರವಾಗಿ ಭೇಟಿ ನೀಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮರ್ಚೆಂಟ್ ನೇವಿಯಿಂದ ನಿವೃತ್ತನಾದ ನಂತರ ಅಶೋಕ್ ಖರಾತ್ ತನ್ನನ್ನು ತಾನು ‘ಕಾಸ್ಮಾಲಜಿ ಎಕ್ಸ್‌ಪರ್ಟ್’ ಮತ್ತು ಸಂಖ್ಯಾಶಾಸ್ತ್ರಜ್ಞ (Numerologist) ಎಂದು ಬಿಂಬಿಸಿಕೊಂಡಿದ್ದ. ಮಾರ್ಗದರ್ಶನದ ಹೆಸರಿನಲ್ಲಿ ಮಹಿಳೆಯರನ್ನು ನಂಬಿಸಿ ಈತ ವಂಚಿಸುತ್ತಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ಈತನ ಹೆಸರಿನಲ್ಲಿ ವಿವಿಧ ನಗರಗಳಲ್ಲಿರುವ ಕೋಟಿ ಕೋಟಿ ಮೌಲ್ಯದ ಆಸ್ತಿಯ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

Scroll to load tweet…



Source link

Leave a Reply

Your email address will not be published. Required fields are marked *