
ಮೇಷ ರಾಶಿ:
ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ಮಂಗಲ ಕಾರ್ಯಗಳಿಗೆ ಸಂಪತ್ತನ್ನು ವಿನಿಯೋಗ ಮಾಡಿರಿ. ಅಧಿಕ ಲಾಭ ಗಳಿಸಬಹುದಾದ ಉತ್ಪಾದನೆಯಿಂದ ಅಲ್ಪ ಲಾಭ. ಹೊಸತನ ಹುಡುಕಾಟದಲ್ಲಿ ನೀವು ಇರುವಿರಿ. ದ್ವೇಷವನ್ನು ಬೆಳೆಸಿಕೊಳ್ಳುವುದು ಯೋಗ್ಯವೆನಿಸದು. ಸಮಯದ ನಿರೀಕ್ಷೆಯಲ್ಲಿ ಇರಿ. ಯಾರ ಸ್ವಭಾವವನ್ನೂ ಆಡಿಕೊಳ್ಳುವುದು ಬೇಡ. ಬರಬೇಕಾದ ಹಣವು ಮಧ್ಯದಲ್ಲಿ ನಿಂತಿದ್ದು ನಿಮಗೆ ಆತಂಕವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸುವ ಚಿಂತೆಯಲ್ಲಿ ಇರುವಿರಿ.
ವೃಷಭ ರಾಶಿ:
ತೋರಿಕೆಗೆ ಮಾಡುವ ಕೆಲಸದಲ್ಲಿ ಯಾವ ಪರಿಣಾಮ ಕಾಣಿಸುತ್ತದೆ.ಹೊಸ ಮನೆಯ ಪ್ರವೇಶದಲ್ಲಿ ನೀವು ಭಾಗವಹಿಸುವಿರಿ. ಕೆಲವು ಸಮಸ್ಯೆಗಳನ್ನು ನೀವು ಪರಿಹಾರ ಮಾಡಿಕೊಳ್ಳುವಿರಿ. ಸಂಬಂಧಗಳನ್ನು ನೀವು ಬೇಕಾದುದಕ್ಕೆ ಬಳಸಿಕೊಳ್ಳುವಿರಿ. ರಾಜಕಾರಣಿಗಳು ಅಸ್ಥಿರ ಮನಸ್ಸಿನಲ್ಲಿ ಇದ್ದಾರೆ. ಇಂದಿನ ಸೋಲು ನಿಮಗೆ ಪಾಠವಾಗುವುದು. ಮುನ್ನುಗ್ಗುವ ಅಭ್ಯಾಸವನ್ನು ಬೆಳೆಸಿಕೊಂಡು ನಿಮಗೆ ಇಷ್ಟವಾದ ಆಯ್ಕೆಯನ್ನು ಮಾಡಿಕೊಳ್ಳಿರಿ. ಮೇಲಧಿಕಾರಿಗಳ ಭಯದಿಂದ ಕಾರ್ಯದಲ್ಲಿ ಪ್ರಗತಿ.
ಮಿಥುನ ರಾಶಿ:
ಯಾವ ಕೆಲಸವನ್ನೂ ನೀವು ಪೂರ್ಣ ಮಾಡದೇ ಇರಲು ಮನಸ್ಸು ಬಾರದು. ನಿಮ್ಮ ದೌರ್ಬಲ್ಯದ ಜೊತೆ ಆಟವಾಡಬಹುದು. ನಿಮ್ಮ ವ್ಯವಹಾರದಲ್ಲಿ ಪೈಪೋಟಿಯು ಅಧಿಕವಾಗಿ ಇರಲಿದೆ ತಂತ್ರಗಳನ್ನು ರೂಪಿಸಬೇಕಾದೀತು. ನಕಾರಾತ್ಮಕ ಆಲೋಚನೆಗಳು ಬೆನ್ನು ಹತ್ತಬಹುದು. ತಂದೆಯ ಶ್ರಮವನ್ನು ಕಂಡು ಮಕ್ಕಳಿಗೆ ನೋವಾಗುತ್ತದೆ. ನಿಮ್ಮವರ ಪ್ರೀತಿಯಿಂದ ನೀವು ಮನಸೋಲುವಿರಿ. ಯಾರನ್ನೂ ಅತಿಯಾಗಿ ಕಾಯಿಸದೇ ಅವರಿಗೆ ಬೇಕಾದುದನ್ನು ಹೇಳಿ, ಕೊಟ್ಟು ಕಳುಹಿಸಿ.
ಕರ್ಕಾಟಕ ರಾಶಿ:
ಇಂದು ನಿಮ್ಮ ಸಂಗಾತಿಗೆ ಅಪರೂಪದ ಉಡುಗೊರೆಯನ್ನು ಕೊಡಿಸುವಿರಿ. ನೀವು ಇಷ್ಟಪಡುವವರ ಭೇಟಿಯಾಗಲಿದೆ. ನಿಮ್ಮ ಗೌಪ್ಯತೆಯನ್ನು ಯಾರ ಜೊತೆಯೂ ಹೇಳಿಕೊಳ್ಳುವುದು ಬೇಡ. ನಿಯಮ ಪಾಲನೆಯಲ್ಲಿ ತಪ್ಪಬಹುದು. ನಿಮ್ಮ ಆಕ್ಷೇಪಗಳು ಹಲವು ಸುಳ್ಳಿನಿಂದ ಇರಲಿದೆ. ಇತರರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ. ಜಾಡ್ಯವನ್ನು ಬಿಡಬೇಕಾದೀತು. ನಿಮ್ಮ ವೃತ್ತಿಯು ನಿಮಗೆ ಸಂತೋಷವನ್ನು ಕೊಡದೇ ಇರುವುದು. ಕೆಲಸವನ್ನು ನೀವು ಸರಳವಾಗಿ ಮಾಡಿಕೊಳ್ಳುವುದು ಉತ್ತಮ.
ಸಿಂಹ ರಾಶಿ:
ಜೊತೆಗೆ ದುಡಿಮೆಯ ಬಗ್ಗೆ ಆಸಕ್ತಿಯು ಹೆಚ್ಚಾಗಿ ಅಭ್ಯಾಸವು ನಿಲ್ಲುವುದು. ಇಂದು ನೀವು ಮಾಡುವ ಪ್ರಯತ್ನದಿಂದ ಪೂರ್ಣ ಮಾಡುವಿರಿ. ಯಾರಾದರೂ ನಿಮ್ಮ ಸ್ನೇಹಕ್ಕೆ ಕಡ್ಡಿಗೀರಬಹುದು. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುತ್ತೀರಿ. ಕಾರ್ಯದ ಹಂಚಿಕೆಯಿಂದ ಕೆಲಸವು ಸುಲಭವಾಗಿದೆ. ವಿವಾಹಕ್ಕೆ ಯೋಗ ಬಂದರೂ ಅದನ್ನು ಮುಂದೂಡುವ ನಿರ್ಧಾರ ಮಾಡುವೆ
ಕನ್ಯಾ ರಾಶಿ:
ಅಗತ್ಯ ದಾಖಲೆಗಳನ್ನು ಭದ್ರವಾಗಿ ಇರಿಸಿಕೊಳ್ಳಿ. ಇಂದು ನೀವು ನಿಮ್ಮ ಸುತ್ತಲಿನ ವಾತಾವರಣವನ್ನು ಆಹ್ಲಾದವೆನಿಸುವುದು. ಭೂಮಿಯ ಖರೀದಿಗೆ ಹುಡುಕಾಟ ಆರಂಭ. ಆರ್ಥಿಕತೆಯಲ್ಲಿ ಸಬಲರಾಗಿರುವುದು ಸಂತೋಷವನ್ನು ಇಮ್ಮಡಿ ಮಾಡಿತು. ಧಾರ್ಮಿಕ ಆಚರಣೆಯಲ್ಲಿ ಹೆಚ್ಚು ಸಮಯವನ್ನು ಕಳೆಯಿರಿ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ. ರಕ್ಷಣೆಯ ಜವಾಬ್ದಾರಿಯವರಿಗೆ ಆರೋಗ್ಯದ ಕೆಡಬಹುದು.
ತುಲಾ ರಾಶಿ:
ಇಂದು ಸಮೂಹವನ್ನು ಕಟ್ಟಿಕೊಂಡು ಕೆಲಸವನ್ನು ಮಾಡುವಿರಿ. ಹಿರಿಯರಲ್ಲಿ ಮನಶ್ಶಾಂತಿಗೆ ಭಂಗ ಅಧಿಕ. ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಮಕ್ಕಳಿಂದ ಒಪ್ಪಿಗೆಯನ್ನು ಪಡೆದುಕೊಳ್ಳಿ. ಸಹೋದರಿಯರ ಜೊತೆ ವಾಗ್ವಾದವನ್ನು ಮಾಡುವಿರಿ. ದೃಷ್ಟಿಯನ್ನು ಸಂಕುಚಿತ ಮಾಡುವುದು ಬೇಡ. ನೀವು ಇಂದು ಆಸ್ತಿಯನ್ನು ಖರೀದಿಸಲು ಪ್ರಯತ್ನಿಸುತ್ತಿರುವಿರಿ ನೀವು ಅದನ್ನು ಸುಲಭವಾಗಿ ಸಾಧಿಸುವಿರಿ. ಸ್ವಪ್ನದ ಚಿಂತೆಯಲ್ಲಿಯೇ ಇರಬಹುದು. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಇದೆ.
ವೃಶ್ಚಿಕ ರಾಶಿ:
ಸಾಲವನ್ನು ಹಿಂದಿರುಗಿಸಲು ಸಮಯಮಿತಿಯ ವಿಸ್ತರಣೆ ಮಾಡಿಕೊಳ್ಳುವಿರಿ. ಹಲವಾರು ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಕಂಡುಬರಬಹುದು. ಇಂದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವ ವಾರ್ತೆಗಳು ಬರಬಹುದು. ಬಹಳ ದಿನಗಳ ಹಿಂದೆ ತಂದೆಯ ಜೊತೆ ಮಾತನಾಡಿ ನೆಮ್ಮದಿಯು ಪಡೆಯುವಿರಿ. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಹೊಂದಿಕೊಳ್ಳುವಿರಿ. ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಬಹುದು.
ಧನು ರಾಶಿ:
ಇಷ್ಟದವರು ನಿಮ್ಮನ್ನು ಶುಭಕಾರ್ಯಗಳಿಗೆ ಆಹ್ವಾನಿಸಬಹುದು. ಅಗ್ನಿಯ ಭಯದಿಂದ ಸಾಹಸ ಕಾರ್ಯಗಳಿಗೆ ಹಿಂದೇಟು. ಪ್ರಭಾವೀ ವ್ಯಕ್ತಿಗಳ ಒಡನಾಟವನ್ನು ಯಾರ ಜೊತೆಯಾದರೂ ಹಂಚಿಕೊಂಡು ಸಮಾಧಾನ ಮಾಡಿಕೊಳ್ಳುವಿರಿ. ಉದ್ಯೋಗದ ಕಾರಣ ನಿಮ್ಮ ವಾಸವನ್ನು ಬದಲಾಯಿಸಬಹುದು. ನಿಮ್ಮ ಜೊತೆ ಇರುವವರು ನಿಮ್ಮನ್ನು ಅರ್ಥಮಾಡಿಕೊಂಡ ರೀತಿ ಬೇರೆ ರೀತಿಯಲ್ಲಿ ಇರುವುದು. ವೈಯಕ್ತಿಕ ಕಾರ್ಯದಲ್ಲಿ ಗಮನ ಕಡಿಮೆ ಇರುವುದು.
ಮಕರ ರಾಶಿ:
ವಿದ್ಯಾರ್ಥಿಗಳು ಪರಿಶ್ರಮದಿಂದ ಪಡೆಯಬೇಕಾದುದನ್ನು ಪಡೆಯುವರು. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಒಪ್ಪಂದವನ್ನು ಮಾಡಿಕೊಂಡು ಲಾಭ ಪಡೆಯುವ ಯೋಜನೆ ರೂಪಿಸಿ. ನೀವು ಸಾಲವನ್ನು ಮಾಡಿದ್ದರೆ, ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗುವುದು. ಹೂಡಕೆಯ ಕ್ಷೇತ್ರವನ್ನು ಬದಲಿಸಿ. ನೂತನ ವಾಹನದ ಖರೀದಿಯನ್ನು ಮಾಡುವ ಆಯ್ಕೆಯು ಇಂದು ಪೂರ್ಣವಾಗುವುದು. ನಿಮ್ಮ ಬಗ್ಗೆ ಸಲ್ಲದ ದೂರಗಳು ಕೇಳಿ ಬರಬಹುದು.
ಕುಂಭ ರಾಶಿ:
ಇಂದು ನಿಮ್ಮ ದೇಹವು ಆಯಾಸದಿಂದ ದುರ್ಬಲವಾಗಬಹುದು. ವಿವಾಹಿತರಿಂದ ವಿವಾಹಕ್ಕೆ ನಿರಂತರ ಪ್ರಯತ್ನ. ಹೆಚ್ಚು ವಿಶ್ರಾಂತಿಯ ಅವಶ್ಯಕತೆ ಇರುವುದು. ಇಂದು ನಿಮ್ಮ ವಾಹನದ ಬಳಕೆಯನ್ನು ಹೆಚ್ಚು ಮಾಡುತ್ತದೆ. ಆಪ್ತ ಬಂಧವನ್ನು ಅಕಾಲದಲ್ಲಿ ಕಳೆದುಕೊಳ್ಳುವಿರಿ. ಸಮಯೋಚಿತ ಕಾರ್ಯದಿಂದ ಪ್ರಶಂಸೆಯು ಇರಲಿದೆ. ಎಲ್ಲರೆದುರು ಮುಖಭಂಗವನ್ನು ಎದುರಿಸಬೇಕಾದೀತು. ವೈವಾಹಿಕ ಜೀವನದ ಕನಸು ಕಾಣುವಿರಿ.
ಮೀನ ರಾಶಿ:
ಹಣಕಾಸಿನ ಪ್ರಯತ್ನಗಳು ಸಫಲವಾಗಬಹುದು. ಆಗತ್ಯಕ್ಕೆ ಎಲ್ಲೂ ತೊಂದರೆಯಾಗದಂತೆ ಇರುವಿರಿ.’ ಮಿತ್ರನಿಗೆ ನಿಮ್ಮಿಂದ ಅಲ್ಪ ಧನಸಹಾಯ. ಸಾಮಾಜಿಕ ಬದ್ಧತೆಗಳಿಗೆ ಸ್ಪಂದನೆ. ಜವಾಬ್ದಾರಿಯು ಬಂದು ಹೊರೆಯು ಹೆಚ್ಚಾಗುವುದು. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು. ಸಂಗಾತಿಯ ಜೊತೆ ಆಪ್ತವಾದ ಮಾತುಕತೆ ಇರಲಿದೆ. ನಿಮಗೆ ಸಾಕಷ್ಟು ಸಮಯವು ಇಂದು ಇರಲಿದೆ ಏನು ಮಾಡಬೇಕೆಂದು ತಿಳಿಯದೇ ಕಾಲವನ್ನು ಕಳೆಯಿರಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ವಾರ್ಷಿಕ : ವಸಂತ, ಚಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ ನಿತ್ಯನಕ್ಷತ್ರ : ರೇವತೀ, ಯೋಗ : ಬ್ರಹ್ಮ, ಕರಣ : ಬವ, ಸೂರ್ಯ 2 – 0,6 –ಸ್ತಯ 9 – 4 pm ಇಂದಿನ ಶುಭಾಶುಭ ಕಾಲ : ರಾಹು ಕಾಲ 11:01 – 12:32, ಯಮಗಂಡ ಕಾಲ 15:33 – 17:04, ಗುಳಿಕ ಕಾಲ 08:00- 09:31
-ಲೋಹಿತ ಹೆಬ್ಬಾರ್-8762924271 (ಯಾವ ಅಪ್ಲಿಕೇಶನ್ ಮಾತ್ರ)