ಅರಬ್ ರಾಷ್ಟ್ರಗಳ ಒಕ್ಕೂಟಕ್ಕೆ ಇರಾನ್ ತಿರುಗೇಟು; ಅಮೆರಿಕ, ಇಸ್ರೇಲ್‌ಗೆ ಜಾಗ ಕೊಟ್ಟರೆ ನೀವೂ ಅಪರಾಧಿಗಳೇ! | Iran Warns Arab Nations Against Aiding Us And Israel Amid Rising Tensions

ಅರಬ್ ರಾಷ್ಟ್ರಗಳ ಒಕ್ಕೂಟಕ್ಕೆ ಇರಾನ್ ತಿರುಗೇಟು; ಅಮೆರಿಕ, ಇಸ್ರೇಲ್‌ಗೆ ಜಾಗ ಕೊಟ್ಟರೆ ನೀವೂ ಅಪರಾಧಿಗಳೇ! | Iran Warns Arab Nations Against Aiding Us And Israel Amid Rising Tensions



ಅರಬ್ ರಾಷ್ಟ್ರಗಳ ಒಕ್ಕೂಟಕ್ಕೆ ಇರಾನ್ ತಿರುಗೇಟು; ಅಮೆರಿಕ, ಇಸ್ರೇಲ್‌ಗೆ ಜಾಗ ಕೊಟ್ಟರೆ ನೀವೂ ಅಪರಾಧಿಗಳೇ! | Iran Warns Arab Nations Against Aiding Us And Israel Amid Rising Tensions

12 ಗಲ್ಫ್-ಅರಬ್ ರಾಷ್ಟ್ರಗಳು ಇರಾನ್ ವಿರುದ್ಧ ಒಂದಾಗಿದ್ದು, ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮತ್ತಷ್ಟು ಹೆಚ್ಚಾಗಿದೆ. ತಮ್ಮ ವಿರುದ್ಧದ ಈ ನಡೆ ಒಪ್ಪಲ್ಲ ಎಂದಿರುವ ಇರಾನ್, ಅಮೆರಿಕ ಮತ್ತು ಇಸ್ರೇಲ್‌ಗೆ ನೆರವು ನೀಡದಂತೆ ನೆರೆ ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದೆ.

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಈಗ ಹೊಸ ರಾಜತಾಂತ್ರಿಕ ಯುದ್ಧಕ್ಕೆ ತಿರುಗಿದೆ. ತಮ್ಮ ವಿರುದ್ಧ 12 ಗಲ್ಫ್-ಅರಬ್-ಇಸ್ಲಾಮಿಕ್ ದೇಶಗಳು ತೆಗೆದುಕೊಂಡಿರುವ ನಿಲುವನ್ನು ಇರಾನ್ ವಿದೇಶಾಂಗ ಸಚಿವಾಲಯ ತಳ್ಳಿಹಾಕಿದೆ. ತಮ್ಮ ದೇಶದ ವಿರುದ್ಧದ ಈ ಆರೋಪಗಳು ಏಕಪಕ್ಷೀಯವಾಗಿವೆ. ಈ ಭಾಗದ ನಿಜವಾದ ಶತ್ರು ಯಾರೆಂದು ಮೊದಲು ಗುರುತಿಸಿ ಎಂದು ಇರಾನ್ ಹೇಳಿದೆ. ಅಮೆರಿಕ ಮತ್ತು ಇಸ್ರೇಲ್‌ಗೆ ಸೇನಾ ಉದ್ದೇಶಗಳಿಗಾಗಿ ತಮ್ಮ ನೆಲವನ್ನು ಬಳಸಿಕೊಳ್ಳಲು ಬಿಡಬಾರದು ಎಂದು ಇರಾನ್ ನೆರೆ ರಾಷ್ಟ್ರಗಳಿಗೆ ತಾಕೀತು ಮಾಡಿದೆ. ದಾಳಿಗಳಿಗೆ ಸಹಾಯ ಮಾಡುವವರು ಮತ್ತು ಬೆಂಬಲಿಸುವವರು ಕೂಡ ಇಸ್ರೇಲ್ ನಡೆಸುತ್ತಿರುವ ‘ಅಪರಾಧಗಳಲ್ಲಿ’ ಸಮಾನ ಪಾಲುದಾರರು ಎಂದು ಇರಾನ್ ಆರೋಪಿಸಿದೆ.

ತಮ್ಮ ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಕರಣಾಗಾರಗಳ ಮೇಲೆ ದಾಳಿ ನಡೆದರೆ ಸುಮ್ಮನೆ ಕೂರುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಅಂತಹ ದಾಳಿಗಳಿಗೆ ಬಲವಾದ ತಿರುಗೇಟು ನೀಡಲು ನಾವು ಸಿದ್ಧರಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ, ಸೌದಿ ಅರೇಬಿಯಾ ಸೇರಿದಂತೆ 12 ದೇಶಗಳು, ಈ ಭಾಗದಲ್ಲಿನ ಸಶಸ್ತ್ರ ಗುಂಪುಗಳಿಗೆ ಇರಾನ್ ನೀಡುತ್ತಿರುವ ಹಣಕಾಸು ಮತ್ತು ಶಸ್ತ್ರಾಸ್ತ್ರ ನೆರವನ್ನು ನಿಲ್ಲಿಸಬೇಕು, ಶಾಂತಿ ಕದಡಬಾರದು ಎಂದು ಆಗ್ರಹಿಸಿದ್ದವು. ಕತಾರ್ ಮತ್ತು ಕುವೈತ್‌ನಲ್ಲಿನ ತೈಲ ಸಂಸ್ಕರಣಾಗಾರಗಳಿಗೆ ಉಂಟಾದ ಭಾರಿ ಹಾನಿಯನ್ನು ಉಲ್ಲೇಖಿಸಿ ಈ ಎಚ್ಚರಿಕೆ ನೀಡಿದ್ದವು. ಹಾರ್ಮುಜ್ ಜಲಸಂಧಿ ಮತ್ತು ಬಾಬ್ ಅಲ್-ಮಂದಬ್ ಮಾರ್ಗವನ್ನು ಬಂದ್ ಮಾಡಲು ಪ್ರಯತ್ನಿಸಬಾರದು ಎಂದೂ ಆ ದೇಶಗಳು ಒತ್ತಾಯಿಸಿದ್ದವು.

ಜಾಗತಿಕ ಇಂಧನ ಬಿಕ್ಕಟ್ಟನ್ನು ನಿವಾರಿಸಲು ಹಾರ್ಮುಜ್ ಜಲಸಂಧಿ ತೆರೆದಿರುವುದು ಬಹಳ ಮುಖ್ಯ. ಗಲ್ಫ್ ರಾಷ್ಟ್ರಗಳೊಂದಿಗೆ ನಿರಂತರ ಮಾತುಕತೆ ನಡೆಸುತ್ತಿರುವ ಭಾರತ, ಇಂದು ಒಮಾನ್ ಜೊತೆ ಮಹತ್ವದ ಸಭೆ ನಡೆಸಿದೆ. ಸಿಲುಕಿರುವ ಹಡಗುಗಳ ಸಂಚಾರವನ್ನು ಸುಗಮಗೊಳಿಸಿ, ಸರಕು ಸಾಗಣೆಯನ್ನು ಮತ್ತೆ ಆರಂಭಿಸುವುದು ಭಾರತದ ಪ್ರಯತ್ನವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಷ್ಟ್ರಗಳು ತೀವ್ರ ಆತಂಕದಲ್ಲಿವೆ. ಹಾರ್ಮುಜ್‌ನಲ್ಲಿನ ದಿಗ್ಬಂಧನ ತೆರವಾಗದಿದ್ದರೆ, ಜಗತ್ತು ತೀವ್ರ ಇಂಧನ ಕೊರತೆಯನ್ನು ಎದುರಿಸಲಿದೆ ಎಂದು ವರದಿಗಳು ಹೇಳುತ್ತಿವೆ.



Source link

Leave a Reply

Your email address will not be published. Required fields are marked *